Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂಗ್ರೆಸ್ ನಲ್ಲಿದ್ದಾಗ ಗೆಲುವು ಸಾಧಿಸಿದ್ದೆ, ಬಿಜೆಪಿಗೆ ಬಂದು 4 ಬಾರಿ ಸೋತೆ.. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ : ವಿ ಸೋಮಣ್ಣ

---Advertisement---

 

ಮೈಸೂರು: ಬಿಜೆಪಿಯಲ್ಲಿ ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿಲ್ಲ. ಆದ್ರೆ ಆಕಾಂಕ್ಷಿಗಳು ಮಾತ್ರ ಹಲವರಿದ್ದಾರೆ. ಇದೀಗ ವಿ ಸೋಮಣ್ಣ ಕೂಡ ತಾನೂ ಬಿಜೆಪಿಯ ಆಕಾಂಕ್ಷಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಸ್ ನಲ್ಲಿ ನಾನು ಒಬ್ಬನಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಆದರೆ ಬಿಜೆಪಿಯಲ್ಲಿ ಖಾಲಿ ಇರುವ ವಿಪಕ್ಷ ನಾಯಕ ಸ್ಥಾನವಾಗಲಿ, ರಾಜ್ಯಾಧ್ಯಕ್ಷ ಸ್ಥಾನವನ್ನಾಗಲಿ ಇನ್ನು ತುಂಬುವ ಕೆಲಸಕ್ಕೆ ಮುಂದಾಗಿಲ್ಲ. ಇದೀಗ ಸೋಮಣ್ಣ ಕೂಡ ಆಕಾಂಕ್ಷಿ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿಧಾನಸಭೆಯಲ್ಲಿ ಸೋಲು ಕಂಡ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನಿಂದ ಗೆಲುವು ಪಡೆದಿದ್ದೆ, ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಗೆಲುವು ಕಂಡಿದ್ದೆ. ಆದರೆ ಬಿಜೆಪಿಗೆ ಬಂದಾಗ ನಾಲ್ಕು ಬಾರಿ ಸೋಲು ಕಂಡಿದ್ದೆ. ನಾನು ಮುಂದೆ ಏನಾಗಿ ಬಿಡುತ್ತೇನೆ ಎಂಬ ಭಯದಲ್ಲಿ ಹಿತ ಶತೃಗಳು ಸೋಲಿಸಿದವು. ಅಲ್ಲಿಂದ ಬಂದಾಗ ಏನೆಲ್ಲಾ ಆಯ್ತು ಎಂಬುದನ್ನು ಹೇಳಿದ್ದೇನೆ, ಸೋತಿದ್ದೇನೆ ಅಸಮಾಧಾನ ಏನಿಲ್ಲ, ಎಲ್ಲವೂ ಸರಿ ಆಗುತ್ತೆ‌. ಈ ಸೋಲಿಗೆ ಏನು ಎಂಬುದು ಗೊತ್ತಿದೆ. ದೇವರು ಅವರಿಗೆ ಖಂಡಿತ ಶಿಕ್ಷೆ‌ ನೀಡುತ್ತಾನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment