Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಂಗೆ ಕೇಕ್ ಇಷ್ಟ ಇಲ್ಲ.. ನಿಮ್ ಏರಿಯಾದಲ್ಲಿಯೇ ಊಟ ಹಾಕಿ : ಹುಟ್ಟುಹಬ್ಬದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಿವಿ ಮಾತು

---Advertisement---

ಬೆಂಗಳೂರು: ಸೆಪ್ಟೆಂಬರ್2.. ಕಿಚ್ಚ ಸುದೀಪ್ ಅವ ಹುಟ್ಟುಹಬ್ಬ, ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೂ, ಹಾರ, ಕೇಕ್ ಅಂತ ತೆಗೆದುಕೊಂಡು ಬರ್ತಾರೆ. ಆದರೆ ಇದೆಲ್ಲದ್ದಕ್ಕೂ ಕಿಚ್ಚ ಸುದೀಪ್ ಮನವಿಯೊಂದನ್ನು ಮಾಡಿದ್ದಾರೆ. ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ಹೇಳಿದ್ದಾರೆ.

‘ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ನಾನು ಹಲವು ನಟರನ್ನು ನೋಡಿಕೊಂಡೆ ಬೆಳೆದವನು. ನನಗೂ ತುಂಬಾ ಆಸೆ ಇತ್ತು. ಆದರೆ ಹೋಗ್ತಾ ಹೋಗ್ತಾ ಬದಲಾಯಿತು. ಮನುಷ್ಯತ್ವದ ಬಗ್ಗೆಯೂ ಅರಿವಾಯಿತು. ಹೂಗಳು ಬಿದ್ದಿರುತ್ತವೆ. ಆ ಹೂ ಮಾಡಿಸುವುದಕ್ಕೆ ಇವ್ರು ಎಷ್ಟು ತಿಂಗಳು ಪ್ಲ್ಯಾನ್ ಮಾಡಿರ್ತಾರೆ. ಆ ಹಾರಗಳನ್ನೇನಾದರೂ ಹಾಕಿದ್ರೆ ಕುತ್ತಿಗೆ ಕಟ್ ಆಗುತ್ತೆ. ಅಷ್ಟು ದಪ್ಪ ಇರುತ್ತೆ. ಆದರೆ ಒಂದು ಸೆಕೆಂಡ್ ಗೆ ಇರುವ ಬೆಲೆ ಅದು. ಆಮೇಲೆ ಇನ್ನೆಲ್ಲೋ ಬಿದ್ದಿರುತ್ತೆ.

ಇನ್ನು ಕೇಕ್. ಸ್ಪರ್ಧೆ ಮೇಲೆ ಕೇಕ್ ಕಟ್ ಮಾಡ್ತೇವೆ. ಆ ಸಂಘದವರು ಇಷ್ಟು ಮಾಡಿದ್ರಾ..? ನಮ್ಮ ಸಂಘದವರು ಇಷ್ಟು ಮಾಡ್ತೀವಿ ಅನ್ನೋ ಕಾಂಪಿಟೇಷನ್. ಬೇಜಾರ್ ಮಾಡಿಕೊಳ್ಳುತ್ತಾರೆ ಅಂತ ತಿನ್ನೋದು, ಒಳಗೆ ಹೋಗಿ ವಾಂತಿ ಮಾಡೋದು. ಬೇಸರ ಮಾಡಿಕೊಳ್ಳುತ್ತಾರೆ ಅಂತ ಒಂದಷ್ಟು ವರ್ಷ ಅರ್ಜೆಸ್ಟ್ ಮಾಡಿಕೊಂಡೆ, ಹೇಳಿದೆ ಬೇಡ‌ ಅಂತ ಆದ್ರೂ ಕೇಳಲಿಲ್ಲ. ಕಟ್ ಮಾಡಿದ ಮೇಲೆ ಆ‌ ಕೇಕಿನಷ್ಟು ಅನಾಥ ಬೇರೆ ಯಾರೂ ಅಲ್ಲ. ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. ಆ ಥರದ ಸಂಭ್ರಮ ನನಗೆ ಬೇಡ ಸರ್. ನಾನಂತು ತಿಂತಾ ಇಲ್ಲ. ನಾನು ಎಲ್ಲರಿಗೂ ರಿಕ್ವೆಸ್ಟ್ ಮಾಡಿಕೊಂಡಿರೋದು ಸ್ಮಾಲೆಸ್ಟ್ ಕೇಕ್ 100-150 ರೂಪಾಯಿ ಅದು ಮುಂದೆ ಸಾವಿರಾರು ಗಟ್ಟಲೆ ಆಗುತ್ತೆ. ಅದೇ ದುಡ್ಡಲ್ಲಿ ನಿಮ್ಮ ಏರಿಯಾದಲ್ಲಿ ಹೊಟ್ಟೆ ತುಂಬುತ್ತೆ. ನನಗ್ಯಾಕೆ ಕೇಕು. ನಂಗೆ ಕೇಕ್ ಇಷ್ಟ ಇಲ್ಲ’ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment