ಬೆಂಗಳೂರು: ಚಿನ್ನ ಬೆಳ್ಳಿ ಬೆಲೆಯಲ್ಲಿ ನಿರೀಕ್ಷೆಯಂತೆ ಡಿಸೆಂಬರ್ ತಿಂಗಳಲ್ಲಿ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು 25 ರೂಪಾಯಿ ಅಷ್ಟು ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 7,125 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನ 7,773 ರೂಪಾಯಿ ಇದೆ. ಹತ್ತು ಗ್ರಾಂಗೆ 71,250 ರೂಪಾತಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 77,730 ರೂಪಾಯಿ ಆಗಿದೆ.
ಸದ್ಯ ಭಾರತ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.

ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 71,250 ರೂಪಾಯಿ ಇದೆ. ಉಳಿದಂತೆ ದೆಹಲಿಯಲ್ಲಿ 71,160 ಇದ್ರೆ, ಅಹ್ಮದಾಬಾದ್ ನಲ್ಲಿ 70,950 ರೂಪಾಯಿ ಇದೆ. ಜೈಪುರ್, ಲಕ್ನೋ ನಗರದಲ್ಲಿ 71,050 ರೂಪಾಯಿ ಇದೆ. ವಿದೇಶದಲ್ಲಿನ ದರವನ್ನು ನೋಡುವುದಾದರೆ ಮಲೇಷ್ಯಾದಲ್ಲಿ 69,250 ಇದೆ. ದುಬೈನಲ್ಲಿ 68,120 ಆಗಿದೆ. ಇನ್ನು ಅಮೆರಿಕಾದಲ್ಲಿ 66,500 ರೂಪಾಯಿ ಇದೆ. ಸಿಂಗಾಪುರದಲ್ಲಿ 68,180 ರೂಪಾಯಿ ಇದೆ. ಸೌದಿ ಅರೇಬಿಯಾದಲ್ಲಿ 68,110 ರೂಪಾಯಿ ಇದೆ. ಈ ಮೂಲಕ ವಿದೇಶದಲ್ಲೂ ಒಂದೊಂದು ರೀತಿಯ ಬೆಲೆ ಇದೆ.
ಹಾಗೇ ಬೆಳ್ಳಿ ಬೆಲೆಯಲ್ಲೂ ವ್ಯತ್ಯಾಸವಾಗಿದ್ದು, ನೂರು ಗ್ರಾಂ ಬೆಳ್ಳಿ ಬೆಲೆ, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್ ನಗರದಲ್ಲಿ 9,250 ರೂಪಾಯಿ ಇದೆ. ಚೆನ್ನೈ, ಭುವನೇಶ್ವರದಲ್ಲಿ 10,000 ರೂಪಾಯಿ ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















