Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜುಲೈ 17ರಂದು ಎಚ್‍ಎಸ್‍ವಿ ಗೌರವ ನುಡಿ ನಮನ

---Advertisement---

 

ಚಿತ್ರದುರ್ಗ. ಜುಲೈ. 16: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದುರ್ಗದ ಸಿರಿ ಕಲಾ ಸಂಘ, ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ “ಎಚ್‍ಎಸ್‍ವಿ” ಗೌರವ ನುಡಿ ನಮನ ಕಾರ್ಯಕ್ರಮವನ್ನು ಇದೇ ಜುಲೈ 17ರಂದು ಸಂಜೆ 4.30ಕ್ಕೆ ಚಿತ್ರದುರ್ಗ ನಗರದ ಮುರುಘಾಮಠದ ಬಸವೇಶ್ವರ ಮಂಟಪ (ಸಮುದಾಯ ಭವನ)ದಲ್ಲಿ ಆಯೋಜಿಸಲಾಗಿದೆ.

ಎಂ.ಅನನ್ಯ ಪ್ರಾರ್ಥಿಸುವರು. ಡಾ.ಬಿ.ಎಂ.ಗುರುನಾಥ ಸ್ವಾಗತಿಸುವರು. ಶ್ರೀನಿವಾಸ ಜಿ ಕಪ್ಪಣ್ಣ ಪ್ರಾಸ್ತಾವಿಕ ನುಡಿಗಳನ್ನಾಡುವರು. ದಾವಣಗೆರೆ ಡಾ.ಆನಂದ ಋಗ್ವೇದಿ, ಚಿತ್ರದುರ್ಗದ ಡಾ.ತಾರಿಣಿ ಶುಭದಾಯಿನಿ, ಮಮತಾ ಅರಸೀಕೆರೆ, ಬೆಂಗಳೂರಿನ ಗುಂಡಣ್ಣ ನುಡಿ ನಮನ ಸಲ್ಲಿಸುವರು. ಗಾಯನ ಸರಸ್ವತಿ ಸಂಗೀತ ಕಟ್ಟಿ, ತಬಲಾ ರಾಜೇಂದ್ರ ನಾಕೋಡ್, ಕೀ ಬೋರ್ಡ್ ಶಬೀರ್ ಅಹಮದ್, ರಿದಮ್ ಪ್ಯಾಡ್ ಪದ್ಮನಾಭ್ ಅವರಿಂದ ಎಚ್ಚೆಸ್ವಿ ಕಾವ್ಯ ಗಾಯನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಭೂಮಿ ಮತ್ತು ಚಲನಚಿತ್ರ ಹಿರಿಯ ನಟ ದತ್ತಣ್ಣ ಭಾಗವಹಿಸುವರು. ಹಿರಿಯ ಚಲನಚಿತ್ರ ಧಾರವಾಹಿ ಮತ್ತು ರಂಗ ಭೂಮಿ ನಟ ದೊಡ್ಡಣ್ಣ ಅಧ್ಯಕ್ಷತೆ ವಹಿಸುವರು. ಜಗದ್ಗುರು ಮುರುಘ ರಾಜೇಂದ್ರ ಮಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment