ಬೆಂಗಳೂರು: ಪೊಲೀಸರ ಬುದ್ದಿ ಮಾತನ್ನ ಇಲ್ಲೊಂದಿಷ್ಟು ಪುಂಡರ ಬೇರೆ ರೀತಿಯಾಗಿಯೇ ಬಳಕೆ ಮಾಡಿಕೊಳ್ತಿದ್ದಾರೆ. ವೀಲಿಂಗ್ ಮಾಡಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದಷ್ಟೇ ಅಲ್ಲ.. ಬೇರೆಯವರಿಗೂ ಹಾನಿ ಮಾಡಬೇಡಿರಪ್ಪ ಅಂದ್ರೆ ಮಾವ್ ಹಾಗೇ ಇರೋದು ಏನಿವಾಗ ಅಂತಿದ್ದಾರೆ.
ಹೌದು.. ಬೆಂಗಳೂರಿನಲ್ಲಿ ವೀಲಿಂಗ್ ಪುಂಡರ ಹಾವಳಿ ಜೋರಾಗಿದೆ.. ಪೊಲೀಸರು ಎಷ್ಟೇ ಬುದ್ಧಿ ಹೇಳಿದ್ರು ಕೇಳ್ತಾ ಇಲ್ಲ. ಅದನ್ನ ತಿದ್ದಿಕೊಳ್ಳುವ ಗೋಜಿಗೂ ಹೋಗ್ತಿಲ್ಲ. ಬದಲಿಗೆ ಇನ್ನು ಅತಿಯಾಗಿಯೇ ವೀಲಿಂಗ್ ಮಾಡ್ತಾ ಇದ್ದಾರೆ. ಅಂತ ಪುಂಡರು ಸೋಷಿಯಲ್ ಮೀಡಿಯಾದಲ್ಲಿ ತಾವೂ ವೀಲಿಂಗ್ ಮಾಡಿರುವ ವಿಡಿಯೋ ಹಾಕಿ ಮೆರೆಯುತ್ತಿದ್ದಾರೆ.
ನಾವೂ ವೀಲಿಂಗ್ ಮಾಡ್ತೀವಿ ನೀವ್ ಅದೇಗ್ ತಡೀತಿರೋ ನಾವೂ ನೋಡ್ತೀವಿ ಅಂತಿದ್ದಾರೆ. ಮಾಸ್ಟರ್ ವೀಲಿಂಗ್ ಕ್ಲಬ್ ಮತ್ತು ಯೆಶ್ಯು ರೋಸಿ ಹೆಸರಿನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಈ ವಿಡಿಯೋಗಳು ಹರಿದಾಡುತ್ತಿವೆ. ಹಬ್ಬಗಳ ಸಾಲು ಸಾಲು ರಜೆಯಲ್ಲಿ ಖಾಲಿ ರಸ್ತೆಯಲ್ಲಿ ಈ ರೀತಿ ವೀಲಿಂಗ್ ಮಾಡಿಕೊಂಡು ತಿರುಗುತ್ತಿದ್ದಾರೆ. ಏರ್ಪೋರ್ಟ್ ರಸ್ತೆಗಳಲ್ಲಿ ವೀಲಿಂಗ್ ಮಾಡಿರೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ.