ಮೈಸೂರು: ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಮಿಸ್ಸಾದ ಪರಿಣಾಮ ಸಾಕಷ್ಟು ಜನ ಬಿಜೆಪಿಯನ್ನು ತೊರೆದು ಬೇರೆ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಈ ಬಾರಿ ಶಾಸಕ ರಾಮದಾಸ್ ಅವರಿಗೂ ಟಿಕೆಟ್ ಮಿಸ್ಸಾಗಿದೆ. ಈ ಸಂಬಂಧ ರಾಮದಾಸ್ ಬೇಸರ ಕೂಡ ವ್ಯಕ್ತಪಡಿಸಿದ್ದರು. ಆದ್ರೆ ಅಮಿತ್ ಶಾ ಅವರನ್ನು ಕಂಡು ಬಂಡಾಯ ಶಮನವಾಗಿದೆ. ಅಮಿತ್ ಅವರನ್ನು ಸ್ವಾಗತಿಸಿದ್ದಾರೆ. ಅಪ್ಪುಗೆ ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಏರಿಕೆಯಾಗುತ್ತಾ ಇದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಅಮಿತ್ ಶಾ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಶಾಸಕ ರಾಮದಾಸ್ ಅವರು ಅಮಿತ್ ಶಾ ಅವರ ಜೊತೆಯಲ್ಲಿಯೇ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ರಾಮದಾಸ್ ಅತ್ಯಾಪ್ತರು ಎಂದೇ ಹೇಳಲಾಗುತ್ತೆ. ಪ್ರಧಾನಿ ಅವರು ಮೈಸೂರಿಗೆ ಬಂದಾಗೆಲ್ಲಾ ರಾಮದಾಸ್ ಅವರನ್ನು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಬೆನ್ನಿಗೆ ಗುದ್ದಿ ಖುಷಿ ವ್ಯಕ್ತಪಡಿಸುತ್ತಾರೆ. ಅಷ್ಟು ಆತ್ಮೀಯತೆಯಿದ್ದರು ಈ ಬಾರಿ ಟಿಕೆಟ್ ಮಿಸ್ ಆಗಿದೆ. ಬಂಡಾಯವೆದ್ದು, ಸ್ವತಂತ್ರವಾಗಿ ಸ್ಪರ್ಧೆ ಮಾಡಬಹುದಿತ್ತು. ಆದರೆ ಪ್ರಧಾನಿಯವರಿಗಾಗಿ ಸುಮ್ಮನಿದ್ದೇನೆ ಎಂದು ರಾಮದಾಸ್ ಹೇಳಿದ್ದರು.





GIPHY App Key not set. Please check settings