ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು; ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಿಂದ ಭಾರತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಪರಿಣಾಮ ಭಾರತದಲ್ಲಿರುವ ಪಾಕಿಸ್ತಾನಿಯರನ್ನೆಲ್ಲಾ ವಾಪಾಸ್ ಕಳುಹಿಸಲಾಗಿದೆ. ಈಗಾಗಲೇ ಇಂಡಿಯಾ ಹಾಗೂ ಪಾಕ್ ನಡುವೆ ಗಡಿ ಬಂದ್ ಆಗಿದೆ. ಪಾಕಿಸ್ತಾನಿ ಪ್ರಜೆಗಳು ವಾಪಾಸ್ ಆಗಲು ಸರ್ಕಾರದಿಂದಡೆಡ್ ಲೈನ್ ನೀಡಲಾಗಿತ್ತು. ಪರಿಣಾಮ ನಿನ್ನೆ ದೇಶದಲ್ಲಿದ್ದ ಪಾಕಿಗಳು ತಮ್ಮ ತವರಿಗೆ ಮರಳಿದ್ದಾರೆ. ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ಅಟ್ಟಾಹದ ದೇಶದಲ್ಲಿದ್ದ ಪಾಕಿಸ್ತಾನಿಯರಿಗೂ ತಟ್ಟಿದೆ.
ಈಗಾಗಲೇ ನೂರಾರು ಪಾಕಿಸ್ತಾನಿಯರು ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದ್ದಾರೆ. ಕಳೆದ ಮೂರು ದಿನದಲ್ಲಿ 537 ಪಾಕಿಸ್ತಾನಿಯರು ಭಾರತ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಇದ್ದ ನಾಲ್ವರು ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶಕ್ಕೆ ವಾಪಾಸ್ ಹೋಗಿದ್ದಾರೆ. ಕೇರಳದಲ್ಲಿ 104 ಪಾಕ್ ಪ್ರಜೆಗಳಿದ್ದು ಅದರಲ್ಲಿ 99 ಮಂದಿ ದೀರ್ಘಾವಧಿ ವಿಸಾ ಹೊಂದಿದ್ದಾರೆ. ಹೀಗಾಗಿ ಕೇರಳದಿಂದ ಐವರು ಪಾಕಿಸ್ತಾನಿಯರು ಮಾತ್ರ ದೇಶವನ್ನು ತೊರೆದಿದ್ದಾರೆ. ಮಧ್ಯಪ್ರದೇಶದಲ್ಲಿ 228 ಪಾಕಿಗಳು, ಒಡಿಶಾದಲ್ಲಿ 12, ಗೋವಾದಲ್ಲಿ 3, ಗುಜರಾತ್ ನಿಂದ 7 ಜನ ತಮ್ಮ ದೇಶಕ್ಕೆ ತೆರಳಿದ್ದಾರೆ. ಅಟಾರಿ ವಾಘಾ ಗಡಿ ಮೂಲಕ ಪಾಕ್ ಪ್ರಜೆಗಳನ್ನು ಕಳುಹಿಸಲಾಗಿದೆ. ಸದ್ಯ ಕರ್ನಾಟಕದಲ್ಲಿ 91 ಜನ ಪಾಕ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಕರ್ನಾಟಕಕ್ಕೆ ಮದುವೆಯಾಗಿ 91 ಪಾಕ್ ಪ್ರಜೆಗಳು ಬಂದಿದ್ದಾರೆ. ಇವರು ದೀರ್ಘಾವಧಿಯ ವೀಸಾ ಹೊಂದಿದ್ದಾರೆ.
ಅಷ್ಟೇ ಅಲ್ಲ ಪಾಕಿಸ್ತಾನದಿಂದ ಕಳೆದ ಮೂರು ದಿನಗಳಲ್ಲಿ 850 ಭಾರತೀಯರು ವಾಪಾಸ್ ಆಗಿದ್ದಾರೆ. ಇದರಲ್ಲಿ 13 ಮಂದಿ ರಾಜತಾಂತ್ರಿಕರು ಸೇರಿದ್ದಾರೆ. ಪಾಕಿಸ್ತಾನ ತನ್ನ ಆಟ ತೋರಿಸಿದರೆ ಇನ್ನಷ್ಟು ಶಿಕ್ಷೆ ನೀಡಲಿದೆ ಭಾರತ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್