Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇವಲ 60 ಸೆಕೆಂಡುಗಳಲ್ಲಿ ಖಮೇನಿಯನ್ನು ಕೊಲ್ಲಲು ಅಮೆರಿಕ ಖರ್ಚು ಮಾಡಿದ್ದೆಷ್ಟು ಕೋಟಿ..?

---Advertisement---

ಟೆಹ್ರಾನ್‌ನ ಬೀದಿಗಳು, ಟ್ರಾಫಿಕ್ ಕ್ಯಾಮೆರಾಗಳು ಮತ್ತು ಸರ್ವೋಚ್ಚ ನಾಯಕನ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳು. ಹೀಗೆ ಇಷ್ಟೆಲ್ಲಾ ಭದ್ರತೆ ಇದ್ದರೂ ಸಹಾ ಇವರ ಯಾವುವೂ ಇಸ್ರೇಲಿ ಕಣ್ಗಾವಲು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಖಮೇನಿ ಯಾವಾಗ ಹೊರಬರುತ್ತಾನೆ? ಅವನು ಎಲ್ಲಿ ಭೇಟಿಯಾಗುತ್ತಾನೆ? ಹೀಗೆ ಪ್ರತಿ ಹೆಜ್ಜೆಯನ್ನೂ ಟ್ರ್ಯಾಕ್ ಮಾಡಿದ ಇಸ್ರೇಲ್, ಅಮೆರಿಕದೊಂದಿಗೆ ಸೇರಿ ತಾನು ಮಾಡಲು ಹೊರಟಿದ್ದನ್ನು ಸಾಧಿಸಿದೆ. ಇದಕ್ಕಾಗಿ ಸೂಪರ್ ಪವರ್ ಅಗ್ರ ರಾಷ್ಟ್ರ ಎಷ್ಟು ಹಣ ಖರ್ಚು ಮಾಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ..?

ಸುದ್ದಿಒನ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶತ್ರು ರಾಷ್ಟ್ರಗಳಿಗೆ ಹೇಗೆ ಟಾರ್ಗೆಟ್ ಆಗಿದ್ದರು…? ಅತ್ಯಾಧುನಿಕ ಭದ್ರತೆಯ ಹೊರತಾಗಿಯೂ ಇಸ್ರೇಲಿ ಕ್ಷಿಪಣಿಗಳು ಅವರನ್ನು ಹೇಗೆ ಟ್ರ್ಯಾಕ್ ಮಾಡಿದವು ? ಈ ಪ್ರಶ್ನೆಗಳಿಗೆ ಈಗ ಉತ್ತರಗಳು ಸಿಗುತ್ತಿವೆ.

 

ಖಮೇನಿ ವಾಸವಿರುವ ಅವರ ಮನೆಯ ಆವರಣದಿಂದ ಹಿಡಿದು ಅವರು ಬಳಸುವ ಸಂವಹನ ವ್ಯವಸ್ಥೆಗಳವರೆಗೆ ಎಲ್ಲವೂ ವರ್ಷಗಳಿಂದ ಇಸ್ರೇಲಿ ಕಣ್ಗಾವಲಿನಲ್ಲಿಯೇ ಇತ್ತು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿವೆ. ಇಸ್ರೇಲಿ ಗುಪ್ತಚರ ಸೇವೆಯು ಬಹಳ ಹಿಂದೆಯೇ ಟೆಹ್ರಾನ್‌ನಲ್ಲಿ ಟ್ರಾಫಿಕ್ ಕ್ಯಾಮೆರಾ ನೆಟ್‌ವರ್ಕ್ ಮತ್ತು ಮೊಬೈಲ್ ಫೋನ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿದೆ. ಖಮೇನಿಯ ಭದ್ರತಾ ಸಿಬ್ಬಂದಿ ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸುತ್ತಾರೆ? ಅವರು ಯಾವಾಗ ಹೊರಬರುತ್ತಾರೆ? ಅವರು ಯಾರನ್ನು ಭೇಟಿಯಾಗುತ್ತಾರೆ? ಇಸ್ರೇಲ್ ವರ್ಷಗಳಿಂದ AI ಪರಿಕರಗಳನ್ನು ಬಳಸಿಕೊಂಡು ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿತ್ತು.

 

ಎಲ್ಲವೂ 60 ಸೆಕೆಂಡುಗಳಲ್ಲಿಯೇ ಮುಗಿದ ಹೋಯಿತು :
“ನಮಗೆ ನಮ್ಮ ಸ್ವಂತ ಜೆರುಸಲೆಮ್ ನಗರದ ಬಗ್ಗೆ ನಮಗೆಷ್ಟು ಗೊತ್ತೋ ಅಷ್ಟೇ ಮಾಹಿತಿ ಟೆಹ್ರಾನ್‌ನ ಗಲ್ಲಿಗಳ ಬಗ್ಗೆಯೂ ತಿಳಿದಿತ್ತು” ಎಂದು ಇಸ್ರೇಲಿ ಅಧಿಕಾರಿಗಳು ಹೆಮ್ಮೆಯಿಂದ ಹೇಳಿಕೊಳ್ಳುವುದರಿಂದ ಅವರು ಖಮೇನಿಯವರ ಬಗ್ಗೆ ಎಷ್ಟು ನಿಗಾವಹಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಶನಿವಾರ ಇರಾನ್‌ನಲ್ಲಿ ಕೆಲಸದ ದಿನವಾಗಿತ್ತು. ಖಮೇನಿ ಪ್ರತಿ ಶನಿವಾರ ತನ್ನ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸುತ್ತಾರೆ ಎಂದು ಮೊದಲೇ ತಿಳಿದಿದ್ದ ಅಮೆರಿಕ-ಇಸ್ರೇಲಿ ಪಡೆಗಳು ಫೆಬ್ರವರಿ 28 ರಂದು ನಿಖರವಾಗಿ ದಾಳಿ ನಡೆಸಿದವು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಒದಗಿಸಿದ ನಿಖರವಾದ ಮಾಹಿತಿಯೊಂದಿಗೆ, ಇಸ್ರೇಲ್ ಕೇವಲ 60 ಸೆಕೆಂಡುಗಳಲ್ಲಿ ಖಮೇನಿ ಮತ್ತು ಇರಾನ್‌ನ ಉನ್ನತ ಮಿಲಿಟರಿ ವ್ಯವಸ್ಥೆ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿತ್ತು.

ಖರ್ಚಿನ ವಿಷಯದಲ್ಲೂ ಸೂಪರ್ ಪವರ್ :
ಈ ಯುದ್ಧವು ಅಮೆರಿಕದ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೇರುತ್ತಿದೆ. ಅಂಕಿಅಂಶಗಳ ಪ್ರಕಾರ, ಕಾರ್ಯಾಚರಣೆಯ ಮೊದಲ ದಿನದಂದು ಅಮೆರಿಕ ಸುಮಾರು 779 ಮಿಲಿಯನ್ ಡಾಲರ್ ಅಥವಾ 7,000 ಕೋಟಿ ರೂ. ಖರ್ಚು ಮಾಡಿದೆ. ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ನಂತಹ ದೊಡ್ಡ ಯುದ್ಧನೌಕೆಗಳ ನಿರ್ವಹಣೆಗೆ ದಿನಕ್ಕೆ 59 ಕೋಟಿ ರೂ. ವೆಚ್ಚವಾಗುತ್ತದೆ. ಪಡೆಗಳ ನಿಯೋಜನೆಗೆ ಹೆಚ್ಚುವರಿಯಾಗಿ 5,700 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ.

ಶಸ್ತ್ರಾಸ್ತ್ರಗಳ ಕೊರತೆ ; ಅಮೆರಿಕಕ್ಕೆ ಹೊಸ ಸಂದಿಗ್ಧತೆ :
ಹಣಕ್ಕಿಂತ ಹೆಚ್ಚಾಗಿ, ಶಸ್ತ್ರಾಸ್ತ್ರಗಳ ನಷ್ಟದ ಬಗ್ಗೆ ಅಮೆರಿಕ ಈಗ ಚಿಂತಿತವಾಗಿದೆ. ದಾಳಿಯ ಸಂದರ್ಭದಲ್ಲಿ ಕುವೈತ್‌ನಲ್ಲಿ ಅಮೆರಿಕದ ಮೂರು ಯುದ್ಧವಿಮಾನಗಳು ಪತನಗೊಂಡಿವೆ. ಉಕ್ರೇನ್ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಈಗಾಗಲೇ ತನ್ನ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿಯೋಜಿಸಿರುವ ಅಮೆರಿಕ, ಇರಾನ್ ಯುದ್ಧ ದೀರ್ಘಕಾಲದವರೆಗೆ ಮುಂದುವರಿದರೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಕೊರತೆಯ ಅಪಾಯದಲ್ಲಿದೆ. ರಷ್ಯಾ ಮತ್ತು ಚೀನಾದಂತಹ ದೇಶಗಳು ಇರಾನ್ ಅನ್ನು ಖಂಡಿಸುವುದಕ್ಕಷ್ಟೇ ಸೀಮಿತವಾಗಿರುವುದು ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದಂತೆ, ಈ ಯುದ್ಧವು ಇನ್ನೂ ನಾಲ್ಕು ವಾರಗಳ ಕಾಲ ಮುಂದುವರಿದರೆ, ಮಧ್ಯಪ್ರಾಚ್ಯದ ನಕ್ಷೆ ಬದಲಾಗುವ ಸಾಧ್ಯತೆಯಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...