Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮನೆ ಮನೆ ಗ್ರಂಥಾಲಯ ಕಾರ್ಯಕ್ರಮಕ್ಕೆ ಇತಿಹಾಸ ಸಂಶೋಧಕ ಡಾ.ಬಿ ರಾಜಶೇಖರಪ್ಪ ಅವರಿಂದ ಚಾಲನೆ

---Advertisement---

 

ವರದಿ ಮತ್ತು ಫೋಟೋ ಕೃಪೆ :
ಕೋಡಿಹಳ್ಳಿ ಟಿ.ಶಿವಮೂರ್ತಿ
ಚಳ್ಳಕೆರೆ,
ಮೊ : 97427 56304

ಸುದ್ದಿಒನ್, ಚಿತ್ರದುರ್ಗ, ಜನವರಿ. 20 : ಕನ್ನಡ ಮತ್ತು ಪುಸ್ತಕ ಪ್ರಾಧಿಕಾರ ಚಿತ್ರದುರ್ಗ ಮತ್ತು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಗ್ರಂಥಾಲಯ ಕಾರ್ಯಕ್ರಮ.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಬಡಾವಣೆ ನಿವಾಸಿಗಳಾದ ಶ್ರೀಮತಿ ಶಾರದಜೈರಾಂ.ಬಿ ಮತ್ತು ಜೈರಾಂ.ಎನ್ ದಂಪತಿಗಳ ಮನೆಯಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ರಾಜಶೇಖರಪ್ಪನವರು ಗ್ರಂಥಾಲಯದ ಉಗಮ, ಬೆಳೆದು ಬಂದ ಹಾದಿ, ಗ್ರಂಥಗಳನ್ನು ಓದುವುದರ ಮಹತ್ವ, ಹಾಗೇಯೇ ಗ್ರಂಥಾಲಯ ಪಿತಾಮಹ ಆದ ಡಾ.ಎಸ್.ಆರ್.ರಂಗನಾಥ್ ರವರ ಕೊಡುಗೆಯನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಮರಿಸಿದರು.

ಕವಿಗಳಾದ ಬೆಳಕು ಪ್ರಿಯ ಮಾತನಾಡಿ ಪುಸ್ತಕಗಳ ಓದಿನ ವ್ಯಾಮೋಹ ರವಿ ಬೆಳಗೆರೆ ಪುಸ್ತಕದಿಂದ ಆರಂಭವಾಗಿ ನಂತರ ಎಲ್ಲಾ ಲೇಖಕರ ಪುಸ್ತಕಗಳನ್ನು ಓದುವಂತಾಯಿತು ಎಂದರು.

ಸುಮರಾಜಶೇಖರ್ ಅವರು ಡಿವಿಜಿ ಅವರ ಕೊಡುಗೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಡಾ.ಗೌರಮ್ಮ ಅವರು ಹಾರೈಕೆಯ ನುಡಿ ಆಡಿದರು.

ಚಿನ್ಮೂಲಾದ್ರಿ ವೇದಿಕೆಯ ಸಂಸ್ಥಾಪಕರಾದ ಶ್ರೀಮತಿ ದಯಾ ಪುತ್ತೂಕ೯ರ್ ಅವರು ಶ್ರೀಮತಿ ಶಾರದಜೈರಾಂ ಅವರ ಪುಸ್ತಕ ಖರೀದಿ ಶ್ಲಾಘನೀಯ,ಅವರ ಗ್ರಂಥಾಲಯ ಕಂಡು ತುಂಬ ಸಂತೋಷವಾಯಿತು, ಹೀಗೆ ಸಂಗ್ರಹ ಮುಂದುವರಿಯಲಿ ಎಂದು ಹಾರೈಸಿದರು.
ಶ್ರೀಮತಿ ಯಶೋಧ ರಾಜಶೇಖರಪ್ಪ ಅವರು ಪುಸ್ತಕದ ಓದು ಕಾದಂಬರಿಗಳಿಂದ ಆರಂಭವಾಯಿತು ಓದುವಾಗಿನಿಂದ ಓದುವ ಶಾಲಾ ಪಠ್ಯಗಳನ್ನು ಸಂಗ್ರಹಿಸಿದರೆ ಉಪಯುಕ್ತ ಎಂದು ನುಡಿದರು.

ಶ್ರೀಯುತ ಜೈರಾಂ.ಎನ್ ಅವರು ಕಡುಕಷ್ಟದ ಬಾಲ್ಯವಾದರೂ ಜ್ಞಾನಾರ್ಜನೆ ಬದುಕಿಗೆ ಬೆಳಕು, ಭರವಸೆ ತುಂಬಿತು, *ಧನವಿದ್ದು ಏನು ಫಲ,ದಯೆವಿಲ್ಲದ್ದಕ್ಕೆ, ನೀನು ಇದ್ದು ಏನು ಫಲ ಜ್ಞಾನವಿಲ್ಲದ್ದಕ್ಕೆ ಎಂಬ ಅಕ್ಕಮಹಾದೇವಿ ವಚನ ಸ್ಮರಿಸಿದರು.

ಕೊನೆಯದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಾರದಾ ಜೈರಾಂ.ಬಿ ಅವರು ಬಾಲ್ಯದಿಂದಲೂ ಪುಸ್ತಕ ಓದುವ ಮತ್ತು ಖರೀದಿಸುವ ಹವ್ಯಾಸವಾಗಿತ್ತು ಅದು ಇಂದಿಗೂ ಮುಂದುವರಿದಿದೆ ಈ ಸಮಯದಲ್ಲಿ ಪುಸ್ತಕ ಪ್ರೇಮಿ ಡಾ.ಅಂಬೇಡ್ಕರ್ ಅವರ ಗ್ರಂಥಾಲಯ ರಾಜ ಗೃಹದಲ್ಲಿ ಸುಮಾರು 58000 ಪುಸ್ತಕಗಳ ಸಂಗ್ರಹವಿತ್ತು.ಹೊರದೇಶದಿಂದಲೂ ಅವರು ಹೊತ್ತು ತಂದಿದ್ದು ಪೆಟ್ಟಿಗೆ ತುಂಬಾ ಪುಸ್ತಕಗಳನ್ನೇ ಎಂದರು.

ಕವಿಗಳಾದ ಮೀರಾ ನಾಡಿಗ್, ಶಶಿಕಲಾ ಕುಂಚಿಗನಾಳ್,ಜಯದೇವ ಮೂರ್ತಿ,ಪಂಡ್ರಳ್ಳಿ ಶಿವರುದ್ರಪ್ಪ, ಬೆಳಕು ಪ್ರಿಯ,ನಿರ್ಮಲ ಭಾರದ್ವಾಜ್,ನಿರ್ಮಲ ಮಂಜುನಾಥ್,ಶಶಿಕಲಾ ವೆಂಕಟೇಶ್, ನಗರಸಭೆ ಮಾಜಿ ಉಪ ಅಧ್ಯಕ್ಷರಾದ ಶ್ರೀಮತಿ ಶಾಂತಾಕುಮಾರಿ ಶೇಖರ್, ಗಿರಿಜಾ,ಹೆಚ್.ಕೆ, ಶಾಂತಮ್ಮ,ವಿರೇಶ್, ಸಾದತ್,ಹಾಜರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಶಾರದಾ ಜೈರಾಂ.ಬಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಿ.ರಾಜಶೇಖರಪ್ಪ ಮಾಡಿದರು ಜೊತೆಗೆ ಅವರ ಸಹಧರ್ಮಿಣಿ ಶ್ರೀಮತಿ ಯಶೋಧರಾಜಶೇಖರಪ್ಪನವರು ಹಾಜರಿದ್ದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಗೌರವಾನ್ವಿತ ಶ್ರೀಮತಿ ದಯಾ ಪುತ್ತೂಕ೯ರ್, ಅತಿಥಿಗಳಾಗಿಸುಮರಾಜಶೇಖರ್, ಡಾ.ಗೌರಮ್ಮವೇದಿಕೆಯ ಮೇಲೆ ಉಪಸ್ಥಿತರಿದ್ದರು.

 

ಕಾರ್ಯಕ್ರಮದ ನಿರೂಪಣೆಯನ್ನು ಡಾ.ಬಸವರಾಜ್ ಹತಿ೯ ಮತ್ತು ವಿರೇಶ್ ನಡೆಸಿಕೊಟ್ಟರು.ಪ್ರಾರ್ಥನೆ ಪಿ ಎಸ್ ಐ ಆದ ಶ್ರೀಮತಿ ಯಶೋದಮ್ಮ ಹಾಡಿದರು.‌ ಸ್ವಾಗತವನ್ನು ನಿರ್ಮಲಾ ಮಂಜುನಾಥ್, ವಂದನಾರ್ಪಣೆ ಸತೀಶ್ ರವರು ನಡೆಸಿಕೊಟ್ಟರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now