Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ಯಾಸ್ ಕೊರತೆ ಹಿನ್ನೆಲೆ ಹೊಟೇಲ್ ಗಳು ಬಂದ್ : ಸಿದ್ದರಾಮಯ್ಯ ಅವರಿಂದ ಬೆಂಬಲ..!

---Advertisement---

ಬೆಂಗಳೂರು: ಬೆಳಗ್ಗೆಯಿಂದ ಹೊಟೇಲ್ ಮಾಲೀಕರು ಆತಂಕದಲ್ಲಿದ್ದಾರೆ. ಸಿಲಿಂಡರ್ ಬೆಲೆ ಏರಿಕೆಯ ಜೊತೆಗೆ ಕೊರತೆಯೂ ಕಂಡು ಬಂದಿದೆ. ಹೀಗಾಗಿ ಹೊಟೇಲ್ ನಡೆಸುವುದು ಕಷ್ಟವಾಗುತ್ತೆ ಅಂತ ಅದೆಷ್ಟೋ ಹೊಟೇಲ್ ಮಾಲೀಕರು ಹೊಟೇಲ್ ಗಳ ಬಾಗಿಲನ್ನೇ ಬಂದ್ ಮಾಡಿದ್ದಾರೆ. ಆದರೆ ಬೆಂಗಳೂರಿನಂಥ ಮಹಾನಗರದಲ್ಲಿ ಲಕ್ಷಾಂತರ ಮಂದಿ ಹೊಟೇಲ್ ಗಳನ್ನೇ ನಂಬಿಕೊಂಡಿರುತ್ತಾರೆ. ಇಂಥ ಪರಿಸ್ಥಿತಿ ಮುಂದುವರೆದರೆ ಊಟಕ್ಕೂ ಕಷ್ಟವಾಗುತ್ತದೆ. ಹೊಟೆರಲ್ ಮಾಲೀಕರ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದಾರೆ.

ಸಿಲಿಂಡರ್ ಬೆಲೆ 115 ರೂಪಾಯಿ ಜಾಸ್ತಿ ಆಗಿದೆ. ಹೊಟೇಲ್ ಮಾಲೀಕರ ಸಂಘ ಮಾಡಿರುವಂಥ ನಿರ್ಧಾರ ಸರಿಯಾಗಿದೆ ಎಂಬ ಮಾತನ್ನ ಹೇಳಿದ್ದಾರೆ. 65 ರೂಪಾಯಿ ಡೊಮೆಸ್ಟಿಕ್ ಸಿಲಿಂಡರ್ ರೇಟ್ ಹಾಕಿದ್ದಾರೆ. ಇದು ಬಹಳ ಹೆಚ್ಚಾಗಿರುವಂತದ್ದು. ಅವರು ಮಾಡ್ತಾ ಇರುವಂತದ್ದು ಸರಿಯಾಗಿದೆ. ಆತಂಕ ಬೇರೆ ನಿಲ್ಲಿಸಿದ್ದಾರ ಅನ್ನೋದು ಬೇರೆ ಎಂದಿದ್ದಾರೆ.

ಈಗಾಗಲೇ ಈ ವಿಚಾರವನ್ನ ಕೇಂದ್ರ ನಾಯಕರ ಗಮನಕ್ಕೂ ತಂದಿದ್ದಾರೆ. ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪೂರಿ ಅವರಿಗೆ ಪತ್ರ ಬರೆದಿದ್ದಾರೆ. ಎಲ್ಪಿಜಿ ಸಿಲಿಂಡರ್ ಗಳ ಕೊರತೆ ಹೆಚ್ಚಾಗ್ತಾ ಇದೆ. ಹೀಗಾಗಿ ಇಲ್ಲಿನ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಿ ಕೊಡಿ ಎಂದಿದ್ದಾರೆ. ಇರಾನ್ ಮತ್ತು ಇಸ್ರೇಲ್ ಯುದ್ಧ ನಡೆಯುತ್ತಿರುವ ಕಾರಣ ಗ್ಯಾಸ್ ಸಿಲಿಂಡರ್ ದರ ಏರಿಕೆ, ಅಡುಗೆ ಎಣ್ಣೆ ದರ ಹೀಗೆ ಎಲ್ಲಾ ದರವೂ ಏರಿಕೆಯಾಗ್ತಿದೆ. ಪೆಟ್ರೋಲ್ – ಡಿಸೇಲ್ ದರವೂ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಇದರ ನಡುವೆ ಬೆಂಗಳೂರಿನಲ್ಲಿ ಹೊಟೇಲ್ ಗಳು ಬಂದಾದರೇ ಜನರ ಮೇಲೆ ಅದಯ ಸಾಕಷ್ಟು ಪರಿಣಾಮ ಬೀರಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...