ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಹೊಸದುರ್ಗ, ಮಾರ್ಚ್. 26 : ಅಂತರ್ ಜಿಲ್ಲಾ ದೇವಸ್ಥಾನಗಳ ಹುಂಡಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿ ಅವರಿಂದ ಸುಮಾರು 20,000/- ರೂ. ನಗದು ಹಣ ಮತ್ತು ಸುಮಾರು 80,000/- ರೂ ಬೆಲೆಯ ಬಜಾಜ್ ಡಿಸ್ಕವರಿ ಮೋಟಾರು ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಾದ
1) ಪ್ರಭಾಕರ 40 ವರ್ಷ, ಸಿದ್ದರಹಳ್ಳಿ ಗ್ರಾಮ ತರೀಕೆರೆ ತಾಲ್ಲೂಕ್
2) ಸದಾನಂದ 24 ವರ್ಷ, ಚಿಕ್ಕನಾವಂಗಲ ಗ್ರಾಮ ಅಜ್ಜಂಪುರ ತಾಲ್ಲೂಕ್
3) ಸ್ವಾಗತ್ 23 ವರ್ಷ, ಚಿಕ್ಕನಾವಂಗಲ ಗ್ರಾಮ ಅಜ್ಜಂಪುರ ತಾಲ್ಲೂಕ್ ಇವರನ್ನು ಮಾರ್ಚ್. 25 ರಂದು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ : ದಿನಾಂಕ 27.10.2025 ರಂದು ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನವಾದ ಶ್ರೀ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಇರುವ ಗಂಗಮ್ಮ ದೇವಸ್ಥಾನದಲ್ಲಿ ಇದ್ದ ಹುಂಡಿಯನ್ನು ಕಳ್ಳತನ ಮಾಡಿ ಅದರೊಳಗಿದ್ದ ಸುಮಾರು 50 ಸಾವಿರ ನಗದು ಹಣವನ್ನು ಕಳ್ಳತನ ಮಾಡಿರುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು
ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ, ಶಿವಕುಮಾರ್ ಟಿ ಎಂ ಡಿ.ವೈ.ಎಸ್.ಪಿ ಹಿರಿಯೂರು ರವರ ಉಸ್ತುವಾರಿಯಲ್ಲಿ ರಮೇಶ್ ಕೆ ಟಿ, ಪಿ.ಐ. ಹೊಸದುರ್ಗರವರ ನೇತೃತ್ವದಲ್ಲಿ, ಹೊಸದುರ್ಗ ಪೊಲೀಸ್ ಠಾಣೆ ಶ್ರೀಶೈಲ ಪಿ.ಎಸ್.ಐ, ಮಹೇಶ್ ಕುಮಾರ್ ಎನ್, ಪಿ.ಎಸ್.ಐ, ಹಾಗೂ ಸಿಬ್ಬಂದಿಯವರಾದ ಕುಮಾರ್, ಉಮೇಶ, ಗಂಗಾದರ, ತಿಪ್ಪೇಸ್ವಾಮಿ, ಚಂದ್ರಪ್ಪ, ರಾಜಣ್ಣ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಸತೀಶ್ ಮತ್ತು ಪ್ರಕಾಶ್ ರವರ ತಂಡ ರಚಿಸಲಾಗಿತ್ತು.
ಈ ತಂಡವು ಖಚಿತವಾದ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಯ ಪರಶೀಲಿಸಿ ತಾಂತ್ರಿಕವಾಗಿ ಮಾಹಿತಿ ಸಂಗ್ರಹಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಹೊಸದುರ್ಗ ರಾಣೆಯ ತಂಡದವರನ್ನು ಚಿತ್ರದುರ್ಗ ಜಿಲ್ಲೆಯ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.


















