ಇಂದಿನ ರಾಶಿಭವಿಷ್ಯ: ಸೆಪ್ಟೆಂಬರ್ 16, 2026ರ ಬುಧವಾರ ಮೇಷದಿಂದ ಮೀನದವರೆಗೆ 12 ರಾಶಿಗಳಿಗೂ ವಿಭಿನ್ನ ಫಲಿತಾಂಶಗಳಿವೆ. ಕೆಲವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯ ಸೂಚನೆಗಳಿದ್ದರೆ, ಇನ್ನು ಕೆಲವರಿಗೆ ಕುಟುಂಬ, ಹಣಕಾಸು ಹಾಗೂ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ಜ್ಯೋತಿಷ್ಯ ನಂಬಿಕೆಗಳ ಆಧಾರದ ಮೇಲೆ ಇಂದಿನ ರಾಶಿಫಲ ಹೀಗಿದೆ.
ಮೇಷ :ಮೇಷ ರಾಶಿಯವರಿಗೆ ಇಂದು ಅತ್ಯಂತ ಅನುಕೂಲಕರವಾದ ದಿನ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ವ್ಯಾಪಾರಸ್ಥರು ಹೊಸ ಹೂಡಿಕೆಗಳ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಆರ್ಥಿಕ ವ್ಯವಹಾರಗಳಲ್ಲಿ ಸರಿಯಾದ ಯೋಜನೆ ರೂಪಿಸಿದರೆ ಸಮಸ್ಯೆಗಳಿಂದ ದೂರವಿರಬಹುದು. ಮಹತ್ವದ ವಿಚಾರಗಳಲ್ಲಿ ಕುಟುಂಬ ಸದಸ್ಯರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಗಣಪತಿಯ ಆರಾಧನೆ ಶುಭಕರ.
ವೃಷಭ :ಇಂದು ನಿಮಗೆ ಸಕಾರಾತ್ಮಕ ಫಲಗಳು ದೊರೆಯಲಿವೆ. ಕಚೇರಿಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ವ್ಯಾಪಾರ-ವ್ಯವಹಾರದಲ್ಲಿ ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವುದು ಒಳಿತು. ಖರ್ಚುಗಳನ್ನು ನಿಯಂತ್ರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಿ. ಕುಟುಂಬದಲ್ಲಿ ಶಾಂತಿ, ಸಂತಸ ನೆಲೆಸಲಿದೆ. ಬಂಧು-ಮಿತ್ರರೊಡನೆ ಸಮಯ ಕಳೆಯುವಿರಿ. ಆರೋಗ್ಯ ಸಹಕಾರಿಯಾಗಿರಲಿದೆ. ಇಷ್ಟದೇವತೆಯ ಪ್ರಾರ್ಥನೆ ಶ್ರೇಯಸ್ಕರ.
ಮಿಥುನ : ಮಿಥುನ ರಾಶಿಯವರಿಗೆ ಇಂದು ಫಲಪ್ರದ ದಿನ. ಕಠಿಣ ಪರಿಶ್ರಮದಿಂದ ಉದ್ಯೋಗದಲ್ಲಿ ಬಾಕಿ ಉಳಿದಿದ್ದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವೃತ್ತಿರಂಗದಲ್ಲಿ ಗೌರವ, ಮನ್ನಣೆ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಬೆಳವಣಿಗೆಗಳು ಕಂಡುಬರಲಿವೆ. ಅಗತ್ಯ ಖರ್ಚುಗಳಿಗೆ ತಕ್ಕಂತೆ ಹಣದ ಲಭ್ಯತೆ ಇರಲಿದೆ. ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ದಾನ-ಧರ್ಮ ಹಾಗೂ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಮಹಾಲಕ್ಷ್ಮಿಯ ಧ್ಯಾನ ಶುಭ ತರಲಿದೆ.
ಕರ್ಕಾಟಕ : ಇಂದು ನಿಮಗೆ ಮಿಶ್ರ ಫಲಗಳು ಎದುರಾಗಲಿವೆ. ದೃಢ ಸಂಕಲ್ಪದಿಂದ ಮುನ್ನಡೆದರೆ ಕೈಗೆತ್ತಿಕೊಂಡ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಸಮಯಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಭವಿಷ್ಯದ ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸಲು ಇದು ಸಕಾಲ. ಕೌಟುಂಬಿಕ ವಿಷಯಗಳಲ್ಲಿ ಕೋಪವನ್ನು ನಿಯಂತ್ರಿಸಿ ಶಾಂತವಾಗಿ ವರ್ತಿಸುವುದು ಅಗತ್ಯ. ಅನಿವಾರ್ಯವಲ್ಲದ ಪ್ರಯಾಣಗಳನ್ನು ಮುಂದೂಡುವುದು ಒಳಿತು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಸೂರ್ಯ ನಮಸ್ಕಾರ ಮತ್ತು ಪ್ರಾರ್ಥನೆ ಶ್ರೇಯಸ್ಕರ.
ಸಿಂಹ :ಸಿಂಹ ರಾಶಿಯವರಿಗೆ ಇಂದು ಶುಭದಾಯಕ ದಿನ. ಪ್ರಮುಖ ವಿಚಾರಗಳಲ್ಲಿ ನಿಮ್ಮ ಚಾಕಚಕ್ಯತೆ ಪ್ರದರ್ಶಿಸಿ ಎಲ್ಲರಿಂದ ಮೆಚ್ಚುಗೆ ಪಡೆಯುವಿರಿ. ಕಚೇರಿಯಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಪ್ರಯತ್ನಗಳು ಲಾಭ ತಂದುಕೊಡಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ಥಿರಾಸ್ತಿ ವೃದ್ಧಿಗೆ ಅವಕಾಶಗಳಿವೆ. ಯಾವುದೋ ಒಂದು ಶುಭವಾರ್ತೆ ನಿಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಆರೋಗ್ಯ ಉತ್ತಮ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಶುಭ ಫಲಗಳನ್ನು ನೀಡುತ್ತದೆ.
ಕನ್ಯಾ : ಇಂದು ಅದ್ಭುತವಾದ ದಿನವಾಗಿರಲಿದೆ. ಆರಂಭಿಸಿದ ಕೆಲಸಗಳಲ್ಲಿ ನಿರಂತರ ಪ್ರಗತಿ ಕಂಡುಬರಲಿದೆ. ವೃತ್ತಿ, ಉದ್ಯೋಗ ಹಾಗೂ ವ್ಯವಹಾರದಲ್ಲಿ ದೀರ್ಘಾವಧಿ ಬೆಳವಣಿಗೆಗೆ ಭದ್ರ ಬುನಾದಿ ಬೀಳಲಿದೆ. ನಿಮ್ಮ ಶ್ರಮ ಮತ್ತು ಬುದ್ಧಿವಂತಿಕೆಗೆ ಸೂಕ್ತ ಪ್ರೋತ್ಸಾಹ ಲಭಿಸಲಿದೆ. ಆರ್ಥಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಪಿತ್ರಾರ್ಜಿತ ಆಸ್ತಿಗಳಿಂದ ಅನುಕೂಲವಾಗಲಿದೆ. ಕುಟುಂಬ ಸೌಖ್ಯ ಹಾಗೂ ಆರೋಗ್ಯ ಉತ್ತಮವಾಗಿರಲಿದೆ. ಶಿವ-ಪಾರ್ವತಿಯರ ದರ್ಶನ ಶುಭಕರ.
ತುಲಾ : ತುಲಾ ರಾಶಿಯವರಿಗೆ ಇಂದು ಲಾಭದಾಯಕ ದಿನ. ಅದೃಷ್ಟದ ಬೆಂಬಲವಿರಲಿದ್ದು, ಕೈಹಾಕಿದ ಪ್ರತಿಯೊಂದು ಕೆಲಸದಲ್ಲೂ ಸತ್ಫಲ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿದಾಯಕ ಫಲಿತಾಂಶಗಳನ್ನು ಕಾಣುವಿರಿ. ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕಂತೆ ಲಾಭ ವೃದ್ಧಿಯಾಗಲಿದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರಲಿದೆ. ನೂತನ ವಸ್ತು, ವಾಹನ ಖರೀದಿಯ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಹನುಮಾನ್ ಚಾಲೀಸಾ ಪಠಣೆ ಹಿತಕರ.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಹತ್ತರ ಪ್ರಗತಿ ಕಂಡುಬರಲಿದೆ. ನಿಮ್ಮ ನಾಯಕತ್ವದ ಗುಣಗಳಿಂದ ಉದ್ಯೋಗದಲ್ಲಿ ಬಡ್ತಿ ಅಥವಾ ಮಹತ್ವದ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಪ್ರಮುಖರೊಂದಿಗೆ ನಡೆಸುವ ಮಾತುಕತೆಗಳು ಯಶಸ್ವಿಯಾಗಲಿವೆ. ಸಮಾಜದಲ್ಲಿ ಕೀರ್ತಿ-ಪ್ರತಿಷ್ಠೆ ಹೆಚ್ಚಲಿದೆ. ಆರ್ಥಿಕ ಸ್ಥಿರತೆ ಲಭಿಸಲಿದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಪ್ರೀತಿಪಾತ್ರರಿಂದ ಉಡುಗೊರೆ ಹಾಗೂ ಶುಭವಾರ್ತೆ ಸಿಗಲಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಶ್ರೇಯಸ್ಕರ.
ಧನು : ಇಂದು ಸಾಧಾರಣ ಫಲಗಳು ಕಂಡುಬರಲಿವೆ. ಆರಂಭಿಸಿದ ಕೆಲಸಗಳಲ್ಲಿ ಏಕಾಗ್ರತೆ ಮತ್ತು ತಾಳ್ಮೆ ಕಳೆದುಕೊಳ್ಳಬೇಡಿ. ಕಚೇರಿಯಲ್ಲಿ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು. ಕುಟುಂಬಸ್ಥರ ಜೊತೆ ವಾದ-ವಿವಾದಗಳಿಗೆ ಇಳಿಯಬೇಡಿ. ಪ್ರಯಾಣ ಹಾಗೂ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಅನಾರೋಗ್ಯ ಸಮಸ್ಯೆಗಳು ಅಥವಾ ವೈದ್ಯಕೀಯ ವೆಚ್ಚಗಳು ಎದುರಾಗುವ ಸಂಭವವಿದೆ. ಶನಿ ದೇವರ ಪ್ರಾರ್ಥನೆಯಿಂದ ಸಂಕಷ್ಟಗಳು ದೂರಾಗಲಿವೆ.
ಮಕರ : ಮಕರ ರಾಶಿಯವರಿಗೆ ಮಿಶ್ರ ಫಲಗಳ ದಿನ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಶಿಸ್ತಿನಿಂದ ಶ್ರಮಿಸಿದರೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಆದಾಯ ತೃಪ್ತಿಕರವಾಗಿದ್ದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಸಮಾಜಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮಿತ್ರರು, ಆಪ್ತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ, ಸಾಧ್ಯವಾದರೆ ದೂರದ ಪ್ರಯಾಣ ಮುಂದೂಡಿ. ಆರೋಗ್ಯದ ಕಡೆ ಗಮನಹರಿಸಿ. ಕಾರ್ಯಸಿದ್ಧಿ ಹನುಮಂತನ ಆರಾಧನೆ ಒಳಿತು.
ಕುಂಭ : ಕುಂಭ ರಾಶಿಯವರಿಗೆ ಇಂದು ಅನುಕೂಲಕರ ದಿನ. ಆತ್ಮವಿಶ್ವಾಸದಿಂದ ಮುನ್ನಡೆದರೆ ಗುರಿಗಳನ್ನು ಸುಲಭವಾಗಿ ತಲುಪಬಹುದು. ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಪ್ರಶಂಸೆ ಪಡೆಯುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದ್ದು, ತಾಯಿಯ ಕಡೆಯಿಂದ ಆರ್ಥಿಕ ಅನುಕೂಲವಾಗುವ ಸಾಧ್ಯತೆಯಿದೆ. ಕುಟುಂಬಸ್ಥರ ಸಹಕಾರ ಮಾನಸಿಕ ಬಲ ನೀಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಇಷ್ಟದೇವತೆಯ ಆರಾಧನೆ ಶುಭ.
ಮೀನ : ಮೀನ ರಾಶಿಯವರಿಗೆ ಇಂದು ಅತ್ಯಂತ ಶುಭದಾಯಕ ದಿನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ಗೌರವ ಲಭಿಸಲಿದೆ. ಆರಂಭಿಸಿದ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯಲಿವೆ. ಆರ್ಥಿಕವಾಗಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಪ್ರತಿಭೆಗೆ ಎಲ್ಲರಿಂದಲೂ ಮನ್ನಣೆ, ಪ್ರೋತ್ಸಾಹ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಪ್ರಯಾಣಗಳು ಆನಂದದಾಯಕವಾಗಿರುತ್ತವೆ. ಆರೋಗ್ಯ ಉತ್ತಮ. ಶ್ರೀ ವಿಷ್ಣು ಸಹಸ್ರನಾಮ ಪಠಣ ಶ್ರೇಯಸ್ಕರ.














