ಅಕ್ಟೋಬರ್ 3, ಶನಿವಾರದಂದು ಚಂದ್ರನು ಮಿಥುನ ರಾಶಿಯಲ್ಲಿ ಸಂಚರಿಸಲಿದ್ದು, ದಿನಪೂರ್ತಿ ಆರ್ದ್ರಾ ನಕ್ಷತ್ರದ ಪ್ರಭಾವವಿರಲಿದೆ. ಇದರೊಂದಿಗೆ ಸಿದ್ಧಿ, ಲಕ್ಷ್ಮೀನಾರಾಯಣ, ಪಾರಿಜಾತ ಹಾಗೂ ಬುಧಾದಿತ್ಯ ಮುಂತಾದ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ಈ ಗ್ರಹಗಳ ಸಂಚಾರದಿಂದಾಗಿ ಹಲವು ರಾಶಿಯವರಿಗೆ ಉದ್ಯೋಗ, ವ್ಯಾಪಾರ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದ್ದು, ಕೆಲವರು ಎಚ್ಚರಿಕೆ ವಹಿಸಬೇಕಾಗಿದೆ. 12 ರಾಶಿಗಳ ಇಂದಿನ ಫಲ ವಿವರ ಇಲ್ಲಿದೆ.
ಮೇಷ ರಾಶಿ: ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರಿಗೆ ಹೊಸ ಆರ್ಡರ್‌ಗಳು ಬರುವುದರಿಂದ ಸಮಾಧಾನ ಸಿಗಲಿದೆ. ಕಚೇರಿಯಲ್ಲಿ ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಸಾಧ್ಯವಾಗಲಿದೆ. ಆದಾಯ ಹೆಚ್ಚುವ ಲಕ್ಷಣಗಳಿದ್ದು, ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದೆ.
ವೃಷಭ ರಾಶಿ: ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಅವಕಾಶಗಳಿವೆ. ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.
ಮಿಥುನ ರಾಶಿ: ವ್ಯಾಪಾರ ವಹಿವಾಟುಗಳು ಚುರುಕುಗೊಳ್ಳಲಿವೆ. ಹೊಸ ವ್ಯವಹಾರ ಆರಂಭಿಸಿದವರ ಪ್ರಯತ್ನಕ್ಕೆ ಶೀಘ್ರವೇ ಉತ್ತಮ ಫಲ ದೊರೆಯಲಿದೆ. ಮಾರ್ಕೆಟಿಂಗ್ ಕ್ಷೇತ್ರದವರು ಅನುಭವಿಗಳ ಸಲಹೆ ಪಡೆಯುವುದು ಉತ್ತಮ. ಮಧ್ಯಾಹ್ನದ ನಂತರ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು.
ಕರ್ಕಾಟಕ ರಾಶಿ: ಹೊಸ ವ್ಯಾಪಾರ ಆರಂಭಿಸುವಲ್ಲಿ ಆತುರ ಸಲ್ಲದು. ಮಾತಿನ ಮೇಲೆ ನಿಗಾ ಇರಲಿ; ಕಟುವಾದ ಮಾತುಗಳು ಸಂಬಂಧಗಳನ್ನು ಹಾಳುಮಾಡಬಹುದು. ಆಫೀಸ್‌ನಲ್ಲಿ ವಾದ-ವಿವಾದಗಳಿಂದ ದೂರವಿರಿ. ಖರ್ಚು ಹೆಚ್ಚಾಗುವುದರಿಂದ ಬಜೆಟ್ ಮೇಲೆ ಪರಿಣಾಮ ಬೀರಬಹುದು.
ಸಿಂಹ ರಾಶಿ: ಉದ್ಯಮಿಗಳಿಗೆ, ಅದರಲ್ಲೂ ಉತ್ಪಾದನಾ (ಮ್ಯಾನುಫ್ಯಾಕ್ಚರಿಂಗ್) ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಆದಾಯದ ಮೂಲಗಳು ಹೆಚ್ಚಲಿವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಸೂಕ್ತ. ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆ ಸಿಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.
ಕನ್ಯಾ ರಾಶಿ: ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇಂದು ಸೂಕ್ತ ದಿನ. ಮಾರ್ಕೆಟಿಂಗ್ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ವರ್ಗಾವಣೆ ಅಥವಾ ಬಡ್ತಿ ಸಿಗುವ ಸಾಧ್ಯತೆಯಿದೆ. ಆರ್ಥಿಕ ಪ್ರಗತಿಯೊಂದಿಗೆ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ತುಲಾ ರಾಶಿ: ಹೊಸ ಗ್ರಾಹಕರು ಹಾಗೂ ಒಪ್ಪಂದಗಳು ಸಿಗುವ ಸಾಧ್ಯತೆ ಇದೆ. ಸರಿಯಾದ ಯೋಜನೆಯೊಂದಿಗೆ ಮುನ್ನಡೆದರೆ ವ್ಯಾಪಾರ ವಿಸ್ತರಣೆ ಸಾಧ್ಯ. ಕುಟುಂಬ ವ್ಯಾಪಾರದಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಅಥವಾ ಮಹತ್ವದ ಯೋಜನೆಗಳು ದೊರೆಯಲಿವೆ.
ವೃಶ್ಚಿಕ ರಾಶಿ: ವ್ಯವಹಾರದಲ್ಲಿ ನಿರೀಕ್ಷಿತ ವೇಗ ಕಾಣದಿರಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳದೆ ಸ್ವಲ್ಪ ಸಮಯ ಕಾದು ನೋಡುವುದು ಉತ್ತಮ. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವವರು ಸದ್ಯಕ್ಕೆ ತಾಳ್ಮೆಯಿಂದಿರಬೇಕು. ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ.

ಧನು ರಾಶಿ: ವಿದೇಶಿ ವ್ಯವಹಾರ ಹಾಗೂ ಅಂತಾರಾಷ್ಟ್ರೀಯ ವಹಿವಾಟುಗಳಲ್ಲಿ ಮುನ್ನಡೆ ಕಂಡುಬರಲಿದೆ. ವ್ಯಾಪಾರ ಪಾಲುದಾರರೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ಉದ್ಯೋಗಿಗಳಿಗೆ ಜಾಗತಿಕ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಬಹುದು. ಸಮಾಜ ಹಾಗೂ ಕುಟುಂಬದಲ್ಲಿ ಗೌರವ ಹೆಚ್ಚಲಿದೆ.
ಮಕರ ರಾಶಿ: ಈ ಹಿಂದೆ ಮಾಡಿದ ಉಳಿತಾಯ ಅಥವಾ ಹೂಡಿಕೆಗಳು ಇಂದು ಆರ್ಥಿಕ ನೆರವಿಗೆ ಬರಲಿವೆ. ವ್ಯಾಪಾರದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿ ಮಾರಾಟ ಉತ್ತಮವಾಗಲಿದೆ. ಕಚೇರಿಯಲ್ಲಿ ಇಷ್ಟವಾದ ಜವಾಬ್ದಾರಿ ದೊರೆಯಲಿದ್ದು, ನಿಮ್ಮ ಕಾರ್ಯಕ್ಷಮತೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ.
ಕುಂಭ ರಾಶಿ: ಹಬ್ಬದ ಸಂದರ್ಭವಾಗಿ ವ್ಯಾಪಾರ ವಿಸ್ತರಣೆಗೆ ಸಾಲ ಪಡೆಯಲು ಯೋಚಿಸುತ್ತಿದ್ದರೆ ಅನುಕೂಲಕರ ವಾತಾವರಣವಿದೆ. ಆದರೆ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಕಚೇರಿಯಲ್ಲಿ ನಕಾರಾತ್ಮಕ ಹರಟೆಗಳಿಂದ ದೂರವಿರಿ. ಮಾರ್ಕೆಟಿಂಗ್ ಕ್ಷೇತ್ರದವರಿಗೆ ಅಲೆದಾಟ ಹೆಚ್ಚಾಗಬಹುದು.

ಮೀನ ರಾಶಿ: ಹೊಸ ವ್ಯವಹಾರ ಅಥವಾ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಹೊಸ ಶಾಖೆ ಅಥವಾ ಫ್ರಾಂಚೈಸಿ ತೆರೆಯಲು ಆತುರ ಬೇಡ. ಸಾರ್ವಜನಿಕ ಸಂಪರ್ಕದಲ್ಲಿರುವ ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಮಾತನಾಡುವಾಗ ತಾಳ್ಮೆ, ಸೌಜನ್ಯ ಕಾಪಾಡಿಕೊಳ್ಳುವುದು ಅಗತ್ಯ.











