ಈಗಂತೂ ತಂಡಿ ಕಾಲ.. ಚಳಿಗಾಲ ಶುರುವಾಯ್ತು ಅಂದ್ರೆ ಸಾಕು ಹಕವರಿಗೆ ಹಲವು ರೀತಿಯ ಕಾಯಿಲೆಗಳು ಬರುವುದಕ್ಕೆ ಶುರುವಾಗುತ್ತವೆ. ಅದರಲ್ಲೂ ಈ ಶೀತ ಆಗದೆ ಇರುವವರಿಗಂತೂ ಈ ಸಮಯ ಬಹಳ ಕಠಿಣವಾದಂತ ಸಮಯವಾಗಿದೆ. ಯಾವಾಗಲೂ ನೆಗಡಿ, ಶೀತ ಆಗ್ತಾನೆ ಇರುತ್ತದೆ. ಜೊತೆಗೆ ಅಸ್ತಮಾ ಇರುವವರಿಗೆ ಈ ಸಮಯದಲ್ಲಿ ಉಸಿರುಗಟ್ಟಿದ ವಾತಾವರಣ. ಸ್ವಲ್ಪ ಶೀತ ದೇಹಕ್ಕೆ ಸೇರಿದರೆ ಸಾಕು ಉಸಿರಾಟಕ್ಕೂ ತೊಂದರೆಯಾಗುತ್ತದೆ. ಅಂಥವರು ಸದಾಕಾಲ ಔಷಧವನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಅದರೆ ಮನೆ ಮದ್ದನ್ನ ಪ್ರಯತ್ನಿಸಿದರೆ ಖಂಡಿತ ಈ ಅಸ್ತಮಾ ದೂರವಾಗಲಿದೆ.
* ಅಂಕೋಲೆ ಬೇರು ಅಸ್ತಮಕ್ಕೆ ಮದ್ದು. ಈ ಬೇರನ್ನ ಆಡಿನ ಹಾಲಿನಲ್ಲಿ ಜಜ್ಜಿ, ಏಲಕ್ಕಿ, ಸಕ್ಕರೆ ಹಾಕಿ ಕುಡಿಯಿರಿ. ಇದನ್ನ ಮೂರು ದಿನಗಳ ಕಾಲ ಮುಂದುವರೆಸಿ. ಆಮೇಲೆ ನೋಡಿ ಎಷ್ಟು ಬೇಗ ವಾಸಿಯಾಗಲಿದೆ.
* ಬಿಲ್ವ ಪತ್ರೆ ಅಂತು ಎಲ್ಲಾ ಕಾಲಕ್ಕೂ ಸಿಗಲಿದೆ. ಅದರ ಕಷಾಯ ಮಾಡಿ, ಬಿಸಿಬಿಸಿಯಾಗಿ ಕುಡಿಯುವುದರಿಂದಾನೂ ಉಬ್ಬಸ ಮಾಯವಾಗುತ್ತದೆ.
* ಬಾಳೆಯನ್ನು ಸುಟ್ಟು ಭಸ್ಮ ಮಾಡಿ, ಅದನ್ನು ಜೇನು ತುಪ್ಪದೊಂದಿಗೆ ಸೇವಿಸಿ. ಅದರಿಂದಾನು ಉಬ್ಬಸ ಗುಣಮುಖವಾಗುತ್ತದೆ.
ಈ ಎಲ್ಲಾ ಮಾಹಿತಿ ಗೂಗಲ್ ನಿಂದ ಪಡೆದಿರುವುದ್ದಾಗಿದೆ. ಒಂದು ವೇಳೆ ನಿಮಗೆ ಉಬ್ಬಸ, ಅಸ್ತಮದ ಸಮಸ್ಯೆ ಇದ್ದರೆ ಒಮ್ಮೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಮನೆಯ ಹಿರಿಯರಿಗೂ ಮನೆ ಮದ್ದಿನ ಬಗ್ಗೆ ಮಾಹಿತಿ ಇರುತ್ತದೆ. ಅವರ ಬಳಿಯಲ್ಲಿ ಒಮ್ಮೆ ಸಲಹೆ ಪಡೆದು ಮನೆ ಮದ್ದುಗಳನ್ನು ಬಳಸಿ. ಇಲ್ಲವಾದಲ್ಲಿ ವೈದ್ಯರ ಮಾಹಿತಿ ಮೇರೆಗೆ ಔಷಧ ಪಡೆಯಿರಿ. ಇದು ನಿಮ್ಮ ಗಮನಕ್ಕೆ ಇರಲೆಂದು ಗೂಗಲ್ ನಿಂದ ಪಡೆದ ಮಾಹಿತಿಯನ್ನು ನೀಡಲಾಗಿದೆ.