Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇತಿಹಾಸ ನಿರ್ಮಿಸಿದ ಪುಷ್ಪ 2 : ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ ?

---Advertisement---

 

ಸುದ್ದಿಒನ್ | ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದೆ. ನಿರ್ಮಾಪಕರು ಮೊದಲೇ ಹೇಳಿದಂತೆ, ಈ ಚಿತ್ರ ಮೊದಲ ದಿನದಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸಿದೆ. ವಿಶ್ವಾದ್ಯಂತ ಭಾರೀ ನಿರೀಕ್ಷೆಗಳ ನಡುವೆ ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರವು ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಚಿತ್ರ ಈಗಾಗಲೇ ಮುಂಗಡ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದೆ. ಮತ್ತು ಮೊದಲ ದಿನದ ಇತ್ತೀಚಿನ ಕಲೆಕ್ಷನ್ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಪುಷ್ಪ 2 ತನ್ನ ಮೊದಲ ದಿನವೇ ವಿಶ್ವಾದ್ಯಂತ 294 ಕೋಟಿ ಗಳಿಸಿದೆ. ನಿರ್ಮಾಪಕರು ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಪುಷ್ಪ 2 ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನದ ಅತಿ ಹೆಚ್ಚು ಗಳಿಕೆ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಈ ಮೂಲಕ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಭಾರತದ ನಂ.1 ಸ್ಟಾರ್ ಎನಿಸಿಕೊಂಡಿದ್ದಾರೆ. ಅಲ್ಲದೇ ಬನ್ನಿ ಹೊಡೆತಕ್ಕೆ ಬಾಲಿವುಡ್ ನ ಟಾಪ್ ರೆಕಾರ್ಡ್ ಗಳು ಕೂಡ ಮಕಾಡೆ ಮಲಗಿವೆ. ಪುಷ್ಪ 2 ಹಿಂದಿಯಲ್ಲಿ 72 ಕೋಟಿ ಗಳಿಸಿದೆ. ಈ ವಾರಾಂತ್ಯದಲ್ಲಿ ಪುಷ್ಪ 2 ಕಲೆಕ್ಷನ್ ಮತ್ತಷ್ಟು ಹೆಚ್ಚಾಗಲಿದೆಯಂತೆ. ಅಲ್ಲದೆ ವಿದೇಶದಲ್ಲೂ ಪುಷ್ಪರಾಜ್ ಮೇನಿಯಾ ಮುಂದುವರೆಯಲಿದೆ.

ನಿರ್ದೇಶಕ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ನಾಯಕಿಯಾಗಿ ಕನ್ನಡದ ರಷ್ಮಿಕಾ ಮಂದಣ್ಣ ಅವರು ಅಭಿನಯಿಸಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ತಾರೆಯರು ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೊಗಳುತ್ತಿದ್ದಾರೆ.

ಮೊದಲ ದಿನ, ಪುಷ್ಪ 2 ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿತು. ಇದು ರಾಜಮೌಳಿಯ RRR ಅನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಇದು ಬಾಹುಬಲಿ 2 ಮತ್ತು ಕೆಜಿಎಫ್ 2 ರಂತಹವುಗಳನ್ನು ಸಹ ಹಿಂದಿಕ್ಕಿದೆ. ಇದು ಹಿಂದಿಯಲ್ಲಿ ಬಿಡುಗಡೆಯಾದ ಅತ್ಯಂತ ದೊಡ್ಡ ಚಿತ್ರವಾಗಿದೆ, ಕಳೆದ ವರ್ಷದ ಜವಾನ್ ಅನ್ನು ಹಿಂದಿಕ್ಕಿದೆ.

ಚಲನಚಿತ್ರ ಮೊದಲ ದಿನದ ಸಂಗ್ರಹ

ಪುಷ್ಪಾ 2 ₹ 175 ಕೋಟಿ
RRR ‌ ‌ ‌‌‌‌‌ ₹ 133 ಕೋಟಿ
ಬಾಹುಬಲಿ 2 ₹ 121 ಕೋಟಿ
ಕೆಜಿಎಫ್ 2 ₹ 116 ಕೋಟಿ ಗಳಿಸಿವೆ. ಇದೀಗ ಪುಷ್ಪಾ 2 ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment