Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಐತಿಹಾಸಿಕ ಒಳ ಮೀಸಲಾತಿ ಜಾರಿ: ಚಿತ್ರದುರ್ಗ ಕಾಂಗ್ರೆಸ್ ಸಂಭ್ರಮಾಚರಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 25 : ರಾಜ್ಯ ಸರ್ಕಾರ ನಿನ್ನೆ ಜಾರಿ ಮಾಡಿರುವ ಒಳ ಮೀಸಲಾತಿಯ ಐತಿಹಾಸಿಕ ನಿರ್ಣಯವನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಅಭಿನಂದಿಸಿ, ಸ್ವಾಗತಿಸಿ ಇಂದು ಕಚೇರಿಯ ಮುಂದೆ ಸಿಹಿಯನ್ನು ಹಂಚುವುದರ ಮೂಲಕ ಸಂತಸವನ್ನು ವ್ಯಕ್ತಪಡಿಸಿ ಇದು ಸಂವಿಧಾನಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಕಳೆದ2022ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಆಯೋಜಿಸಲಾದಂತಹ ರಾಜ್ಯ ಮಟ್ಟದ ಎಸ್.ಸಿ, ಎಸ್.ಟಿ ಐಖ್ಯತಾ ಸಮಾವೇಶದಲ್ಲಿ ಚಿತ್ರದುರ್ಗ ನೆಲದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಒಳಮೀಸಲಾತಿ ಯೋಜನೆ ಅನುಷ್ಠಾನಗೊಳಿಸಿ ಬಂದಮೇಲೆ ಐತಿಹಾಸಿಕ ಜಾರಿಗೆತರಲಾಗುವುದೆಂದು ಘೋಷಿಸಲಾಗಿತ್ತು. ಅದರಂತೆ, ಅಂದು ನಡೆದ ಎಸ್.ಸಿ, ಎಸ್.ಟಿ ಐಖ್ಯತಾ ಸಮಾವೇಶದಲ್ಲಿ ನುಡಿದಂತೆ ಎಲ್ಲಾ ಸಾಧಕ ಬಾಧಕಗಳನ್ನು ಅಳಿದು ತೂಗಿ, ಎಲ್ಲಾ ಸಮುದಾಯಗಳ ಸಮತೋಲನೆಗಾಗಿ, ಅವರ ಅಭಿವೃದ್ಧಿಗಾಗಿ, ಸಾಮಾಜಿಕ ನ್ಯಾಯದಡಿ, ಸಂವಿಧಾನಾತ್ಮಕವಾಗಿ ಈ ಒಳಮೀಸಲಾತಿ ಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಏ. 24 ರಂದು ಬಲಗೈಗೆ 5.25, ಎಡಗೈಗೆ 5.25 ಇತರರಿಗೆ 4.5 ನೀಡಿ ರಾಜ್ಯದ ಜನರ ಮನ್ನಣೆಯನ್ನು ಗಳಿಸಿದೆ. ಈ ಐತಿಹಾಸಿಕ ನಿರ್ಣಯವನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಅಭಿನಂದಿಸಿ, ಸ್ವಾಗತಿಸುತ್ತೇವೆ, ಇದು ಸಂವಿಧಾನಕ್ಕೆ ಸಂದ ಜಯವಾಗಿದೆ.

ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಡಿ.ಎನ್,ಮೈಲಾರಪ್ಪ, ಉಪಾಧ್ಯಕ್ಷ ರವಿ ಕುಮಾರ್, ಜಿ.ಪಂ.ಮಾಜಿ ಸದಸ್ಯ ನರಸಿಂಹಮೂರ್ತಿ, ಖಾಸಿಂಆಲಿ, ಕೋಟಿ, ತಿಪ್ಪೇಸ್ವಾಮಿ, ರಹಮಾನ್, ಆಫಕ್ ಆಹ್ಮಮದ್, ಪ್ರಸನ್ನ, ರಹಮಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...