Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳ ಕೇಸಲ್ಲಿ ಅವರ ಕೈವಾಡವಿದೆ, ನಾಳೆ‌ ಕುಮಾರಣ್ಣ ಬಿಚ್ಚಿಡ್ತಾರೆ : ನಿಖಿಲ್ ಕುಮಾರಸ್ವಾಮಿ

---Advertisement---

ಹಾಸನ: ಧರ್ಮಸ್ಥಳ ಸತ್ಯ ಯಾತ್ರೆಗೆ ಇಂದು ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಹಾಸನದಿಂದ ಚಾಲನೆ ನೀಡಿದ್ದು, ಕಾರ್ಯಕರ್ತರ ಜೊತೆಗೆ ಧರ್ಮಸ್ಥಳಕ್ಕೆ ಹೊರಟಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಣ್ಣ ನಾಳೆ ಎಲ್ಲಾ ಸತ್ಯ ಹೊರಗೆ ಎಳೆಯುತ್ತಾರೆ ಎಂದಿದ್ದಾರೆ.

ಷಡ್ಯಂತ್ರ ಎಂಬ ಪದವನ್ನ ಜೆಡಿಎಸ್ ನವರಾಗಲಿ, ಬಿಜೆಪಿಯವರಾಗಲಿ ವಿಧಾನಸೌಧದ ಕಲಾಪದಲ್ಲಿ ಬಳಸಿದ್ದಲ್ಲ. ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಎಂಬ ಪದವನ್ನ ಬಳಸಿದ್ದು, ಈ ರಾಜ್ಯದ ಉಪಮುಖ್ಯಮಂತ್ರಿಗಳು. ನೀವೆಲ್ಲರೂ ಕೂಡ ನೋಡಿದ್ದೀರಿ. ಮುಖ್ಯಮಂತ್ರಿಗಳು ಒಂದು ಹೇಳಿಕೆಯನ್ನ ಕೊಡ್ತಾರೆ, ಉಪ ಮುಖ್ಯಮಂತ್ರಿಗಳು ಮತ್ತೊಂದು ಹೇಳಿಕೆಯನ್ನ ಕೊಡ್ತಾರೆ. ಬಹುಶಃ ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಕುಮಾರಣ್ಣ ಅವರು ರಾತ್ರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನಾಳೆ ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ಕರೆಯುತ್ತಾ ಇದ್ದಾರೆ.

ಕೆಲವೊಂದು ನಂಬಿಕಸ್ಥ ಮೂಲಗಳಿಂದ ಕುಮಾರಣ್ಣ ಅವರಿಗೆ ಮಾಹಿತಿಗಳು ಸಿಕ್ಕಿವೆ. ಅವರ ಕಡೆಯಿಂದ ಈ ಒಂದು ಪ್ರಕರಣದಲ್ಲಿ ಯಾವ ಯಾವ ವ್ಯಕ್ತಿಗಳು ಮಾನ್ಯ ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು, ಅವರು ಯಾವ ರೀತಿ ಮುಖ್ಯಮಂತ್ರಿಗಳಿಗೆ ಧರ್ಮಸ್ಥಳದ ಎಸ್ಐಟಿ ರಚನೆ ಮಾಡುವುದರಲ್ಲಿ ಅವರ ಪಾತ್ರ ಏನಿದೆ ಎಂಬುದನ್ನ ಕುಮಾರಣ್ಣ ರಾಜ್ಯದ ಜನತೆ ಎದುರು ಇಡುತ್ತಾರೆ ಎಂದಿದ್ದಾರೆ.

ನೂರಕ್ಕೆ ನೂರರಷ್ಟು ನಮಗೆ ಜವಾಬ್ದಾರಿ ಇದೆ. ಕುಮಾರಣ್ಣ ಅವರು ಮಾತನಾಡುವಾಗ ಹೇಳಿದ್ದಾರೆ. ಗೃಹ ಸಚಿವರ ಬಳಿ ಮುಂದಿನ ದಿನಗಳಲ್ಲಿ ಸಮಯವನ್ನ ತೆಗೆದುಕೊಳ್ಳುತ್ತಾರೆ. ಈ ಪ್ರಕರಣದ ಬಗ್ಗೆ ಎನ್ಐಎ ತನಿಖಾ ಏಜೆನ್ಸಿಗೆ ಕೊಡಬೇಕಾಗುತ್ತದೆ. ಅದನ್ನ ಇಂದು ಕೂತು ಕುಮಾರಣ್ಣ ಅವರು ಚರ್ಚೆ ಮಾಡ್ತಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment