ಸುದ್ದಿಒನ್, ಹಿರಿಯೂರು, ಜುಲೈ. 16 : ನಗರದ ಹೊರವಲಯದ ಚಿನ್ನಯ್ಯನಹಟ್ಟಿ ಬಳಿ ಅಪರಿಚಿತ ವಾಹನ ಬೈಕ್ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಶಿವಾನಂದ (50) ವರ್ಷ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಶಿವಾನಂದ ಹಿರಿಯೂರು ತಾಲೂಕಿನ ಜಡಗೊಂಡನಹಳ್ಳಿ ನಿವಾಸಿಯಾಗಿದ್ದು, ಗಾಯಗೊಂಡ ಮತ್ತೊರ್ವ ವ್ಯಕ್ತಿಯನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇವರಿಬ್ಬರೂ ಹೂವು ಮಾರಲು ಮಾರುಕಟ್ಟೆಗೆ ಹೋಗುತಿದ್ದ ವೇಳೆ ಅಪಘಾತ ಸಂಭವಿಸಿದೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ


















