Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಆಧುನಿಕ ತಂತ್ರಜ್ಞಾನದಿಂದ ಮೂರಂತಸ್ತಿನ ಕಟ್ಟಡ ಸ್ಥಳಾಂತರ..!

---Advertisement---

ಸುದ್ದಿಒನ್, ಹಿರಿಯೂರು, ಜನವರಿ. 28 : ಆಧುನಿಕ ತಂತ್ರಜ್ಞಾನ ಎಷ್ಟೆಲ್ಲಾ ಬೆಳೆದು ಬಿಟ್ಟಿದೆ ಅಲ್ವಾ. ಮೂರಂತಸ್ತಿನ ಕಟ್ಟಡವನ್ನೇ ಎತ್ತಿ ಬೇರೆ ಕಡೆ ಇಡುವುದು ಅಂದ್ರೆ ಸುಲಭವಾ..? ಅದು ಕೊಂಚವೂ ಡ್ಯಾಮೇಜ್ ಆಗದೆ. ಈ ಒಂದು ಅದ್ಭುತ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವಧಾನಿ ಬಡಾವಣೆಯಲ್ಲಿ.

 

ನಗರದಲ್ಲಿ ರಸ್ತೆ ಅಗಲೀಕರಣ ಪ್ರಾರಂಭವಾಗಿದೆ ಈ ಹಿನ್ನೆಲೆಯಲ್ಲಿ ರಸ್ತೆ ಆಸುಪಾಸಿನ ಬಹುತೇಕ ಕಟ್ಟಡಗಳ ಮುಂಭಾಗ ತೆರವುಗೊಳಿಸಲಾಗಿದ್ದು, ಉದಯ ಹೋಟೆಲ್ ನ ಕಟ್ಟಡವನ್ನು ಮುಂಭಾಗ ತೆರವು ಮಾಡಲು ಗುರುತಿಸಲಾಗಿತ್ತು. ಕಟ್ಟಡದ ಅರ್ಧ ಭಾಗ ರಸ್ತೆ ವಿಸ್ತರಣೆಗೆ ಹೋಗುವ ಸ್ಥಿತಿಯಲ್ಲಿದ್ದದ್ದರಿಂದ ಕಟ್ಟಡ ಮಾಲೀಕರು ಅವರದೇ ಹಿಂದಿನ ಖಾಲಿ ಜಾಗಕ್ಕೆ ಕಟ್ಟಡ ಜರುಗಿಸಿಕೊಳ್ಳುವ ನಿರ್ಧಾರ ಮಾಡಿದರು. ತಮಿಳುನಾಡಿನ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡ ತಳ್ಳುವ ಪಾರಮೌಂಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಹೋಟೆಲ್ ಕಟ್ಟಡದ ಮಾಲೀಕರು ಸುಮಾರು 20 ಅಡಿಯಷ್ಟು ಕಟ್ಟಡವನ್ನು ಹಿಂದೆ ತಳ್ಳುವ ಕಾಮಗಾರಿಯನ್ನು 22 ಲಕ್ಷ ಹಣಕ್ಕೆ ನೀಡಿದ್ದಾರೆ. ಇದೀಗ 37 ಅಡಿ ಎತ್ತರ ಹಾಗೂ 37 ಅಡಿ ಅಗಲದ ಮೂರಂತಸ್ತಿನ ಕಟ್ಟಡವನ್ನು ಸುಮಾರು 400ಕ್ಕೂ ಹೆಚ್ಚು ಹೈಡ್ರಾಲಿಕ್ ಜಾಕ್ ಬಳಸಿಕೊಂಡು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿ ಭರದಿಂದ ಸಾಗಿದೆ.

ಕಟ್ಟಡ ಸರಿಸುವ ಕೆಲಸ ಹಿರಿಯೂರು ನಗರಕ್ಕೆ ಹೊಸದೇನು ಅಲ್ಲ. ಈಗಾಗಲೇ ಅಕ್ಷಯ ಪುಡ್ ಪಾರ್ಕ್ ನ ಕಟ್ಟಡವನ್ನು 100 ಅಡಿಯಷ್ಟು ಹಿಂದೆ ಸರಿಸಲಾಗಿತ್ತು. ಶ್ರೀನಿವಾಸ ಲಾಡ್ಜ್, ವೇದಾವತಿ ನಗರದ ಮಸೀದಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿಯ ಬಿಲ್ಡಿಂಗ್ ಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿತ್ತು. ಇದೀಗ ಉದಯ ಹೋಟೆಲ್ ಕಟ್ಟಡವನ್ನು ಪ್ರತಿದಿನ 4 ರಿಂದ 5 ಅಡಿ ತಳ್ಳುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದಾರೆ. ಕಟ್ಟಡವನ್ನ ಹಿಂದೆ ತಳ್ಳಿದ್ದು ಕಂಡ ಜನ ಆಶ್ಚರ್ಯದಿಂದ ನೋಡಿದ್ದಾರೆ.

ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಬಹುಮಹಡಿ ಕಟ್ಟಡಗಳನ್ನು ಸಹ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಹಿರಿಯೂರಿನಲ್ಲಿ ನಾಲ್ಕು ಕಟ್ಟಡಗಳನ್ನು ಸ್ಥಳಾಂತರ ಮಾಡಿದ್ದೇವೆ. ಇದು 5 ನೇ ಕಟ್ಟಡವಾಗಿದೆ. ಈ ಕಟ್ಟಡ ಸ್ಥಳಾಂತರಿಸಲು 3 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಕಟ್ಟಡ ಸ್ಥಳಾಂತರ ಮಾಡುವುದರಿಂದ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಹೊಸ ಜಾಗಕ್ಕೂ ಸಹ ಕಟ್ಟಡ ಯಥಾವತ್ತಾಗಿ ಬಂದು ಕೂರುತ್ತದೆ. ಎಲ್ಲಾ ರೀತಿಯ ರಕ್ಷಣಾತ್ಮಕ ಸಿದ್ದತೆಗಳನ್ನು ಬಳಸಿಕೊಂಡು ಕೆಲಸ ಆರಂಭಿಸಲಾಗುತ್ತದೆ. ತಮಿಳುನಾಡಿನಲ್ಲಿ ಬಹುಗಾತ್ರದ ಕಲ್ಯಾಣ ಮಂಟಪವನ್ನು ಸ್ಥಳಾಂತರ ಮಾಡಿ ಸೈ ಎನಿಸಿಕೊಂಡಿದ್ದೇವೆ ಎಂದು ಪಾರಮೌಂಟ್ ಬಿಲ್ಡಿಂಗ್ ಶಿಫ್ಟ್ ಕಂಪನಿ ಮಾಲೀಕ, ಸಿ. ಮೋಹನ್ ರಾಜ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...