Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; 16 ಮಂದಿಯ ಬಂಧನ, ಅಪಾರ ನಗದು ವಶ !

---Advertisement---

 

ಸುದ್ದಿಒನ್, ಹಿರಿಯೂರು, ಡಿಸೆಂಬರ್. 18 : ತಾಲೂಕಿನ ಐತಿಹಾಸಿಕ ವಾಣಿ ವಿಲಾಸ ಜಲಾಶಯದ ಕ್ರಾಸ್ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು 16 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.

ಭಾನುವಾರ ಸಂಜೆ ಠಾಣೆ ಹಿರಿಯೂರು ಗ್ರಾಮಾಂತರ ಪೋಲಿಸರು ಖಚಿತ ಮಾಹಿತಿ ಮೇರೆಗೆ ಪ್ರವಾಸಿ ಮಂದಿರದಲ್ಲಿ ಕಾರ್ಯಾಚರಣೆ ನಡೆಸಿ 16 ಮಂದಿ ಜೂಜುಕೋರರನ್ನು ಬಂಧಿಸಿ ಅವರಿಂದ 4 ಲಕ್ಷದ 37 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತರು :
ನಾಸೀರ್ ವಿವಿ ಪುರ (54), ರಾಜಪ್ಪ (50) ಹಿರಿಯೂರು ನಗರ, ಚಿತ್ರಲಿಂಗೇಶ (38) ಆಲಮರದಹಟ್ಟಿ, ಕೆ. ಮಂಜುನಾಥ್ ಯಾದವ್ (30) ಜಾನುಕೊಂಡ, ಟಿ. ಮಂಜುನಾಥ್ (49) ಹಿರಿಯೂರು ಟೌನ್, ಚಿಕ್ಕಣ್ಣ (45) ತಾವರೆಕೆರೆ, ಮಣಿಕಂಠ (25) ಜೆಜಿ ಹಳ್ಳಿ,  ಬಾಬು (38) ಹಿರಿಯೂರು ಟೌನ್, ಧನರಾಜ್ (42) ಹಿರಿಯೂರು ಟೌನ್, ಮಾರುತಿ (35) ಹಿರಿಯೂರು ಟೌನ್, ಮುದಿಯಣ್ಣ ( 48) ಹಿರಿಯೂರು ಟೌನ್, ರವಿ ಅಲಿಯಾಸ್ (ಕಬ್ಬಡಿ ರವಿ), (36) ಹಿರಿಯೂರು ಟೌನ್ ಹಾಗೂ ನಗರಸಭೆ ಸದಸ್ಯರಾದ ಅಜೇಯ್ ಕುಮಾರ್ (ಅಜ್ಜಪ್ಪ),  ಅನಿಲ್ ಕುಮಾರ್ ಬಂಧಿತರು.

ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment