Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯತ್ನಾಳ್ ಗೆ ಶಾಕ್ ನೀಡಿದ ಹೈಕಮಾಂಡ್ : ಏನದು..?

---Advertisement---

ಬೆಂಗಳೂರು: ಮೊದಲಿನಿಂದಾನೂ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೆ ಇದ್ದಾರೆ. ಇದರ ಮಧ್ಯೆ ಯಡಿಯೂರಪ್ಪ ಅವರಿಗೆ ಜೈ ಎಂದಿದ್ದ ಯತ್ನಾಳ್ ಅವರು ಮತ್ತೆ ವಿಜಯೇಂದ್ರ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಅದರಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೆಲ್ಲವನ್ನು ಗಮನಿಸಿದ್ದ ಹೈಕಮಾಂಡ್ ದೆಹಲಿ ರಿಸಲ್ಟ್ ಗಾಗಿ ಕಾಯುತ್ತಿತ್ತು. ಇದೀಗ ದೆಹಲಿ ರಿಸಲ್ಟ್ ಬಂದಿದ್ದು, ಬೆನ್ನಲ್ಲೇ, ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿಯು ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಪಕ್ಷದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವುದಕ್ಕೆ ಬ್ರೇಕ್ ಹಾಕುವುದಕ್ಕೆ ಈ ಶೋಕಾಸ್ ನೋಟೀಸ್ ಅನ್ನು ಜಾರಿ ಮಾಡಿದೆ. ಆದರೆ ಈ ನೋಟೀಸ್ ನೀಡುತ್ತಿರುವುದು ಮೊದಲ ಬಾರಿಯಲ್ಲ ಎರಡನೇ ಸಲ. ಈ ಬಾರಿಯೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟೀಸ್ ನಲ್ಲಿ ತಿಳಿಸಿದೆ. ಜೊತೆಗೆ ನೋಟೀಸ್ ನೀಡಿದ 72 ಗಂಟೆಯ ಒಳಗೆ ಉತ್ತರಿಸಬೇಕೆಂದು ಸಹ ಹೇಳಿದೆ.

ನಿಗದಿತ ಕಾಲಮಿತಿಯೊಳಗೆ ಉತ್ತರ ನೀಡದೆ ಇದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇಂದು ದೆಹಲಿಗೆ ಹೋಗಿದ್ದ ಯತ್ನಾಳ್ ಅವರು ಅಲ್ಲಿಂದ ಹೈದ್ರಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಶಿಸ್ತು ಸಮಿತಿ ನೀಡಿದ ನೋಟೀಸ್ ಇನ್ನು ಅವರ ಕೈಸೇರಿಲ್ಲ‌. ಇವತ್ತೆ ವಿಜಯೇಂದ್ರ ಅವರು ಕೂಡ ದೆಹಲಿಗೆ ಪಯಣ ಬೆಳೆಸಿದ್ದರು. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ದೆಹಲಿಯಲ್ಲಿದ್ದು, ಅವರು ದೆಹಲಿಯಲ್ಲಿರುವಾಗಲೇ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಬಾರಿಯ ನೋಟೀಸ್ ಗಾದರೂ ಯತ್ನಾಳ್ ಅವರು ಉತ್ತರಿಸುತ್ತಾರಾ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...