Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹೌದಪ್ಪ ನಾವೂ ಸಾಲಗರರು : ಡಿಕೆ ಶಿವಕುಮಾರ್

---Advertisement---

ದಾವಣಗೆರೆ: ಇಂದು ಕೂಡ ಡಿಕೆ‌ ಶಿವಕುಮಾರ್ ಅವರು ದಾವಣಗೆರೆಗೆ ಬಂದು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಮರ್ಥ್ ಗೆಲುವಿಗಾಗಿ ಓಡಾಟ ನಡೆಸಿದ್ದಾರೆ. ಈ ವೇಳೆ ಸಾಲಗಾರರು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಮೋದಿ ವಿರುದ್ಧ ಗರಂ ಆಗಿದ್ದಾರೆ.

ಬಿಜೆಪಿ ಅವರು ಇದು ಸಾಲದ ಸರ್ಕಾರ, ಸಾಲದ ಸಿದ್ದರಾಮಯ್ಯ ಎಂಬ ಮಾತನ್ನ ಹೇಳಿದ್ದರು. ಆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಹೌದಪ್ಪ ನಾವೂ ಸಾಲ ತೆಗೆದುಕೊಳ್ತಿವೋ, ಇನ್ನೇನೋ ಮಾಡ್ತಿವೋ. ಎಲ್ಲಾ ಮಾಡಿದ್ದೀವಿ ಅಂದುಕೊಳ್ಳೋಣಾ. ಈಗ ನರೇಂದ್ರ ಮೋದಿಯವರು ಸಾಲ ತೆಗೆದುಕೊಂಡಿಲ್ವೆ. ಈ ಬೆಲೆ ಏರಿಕೆಯಿಂದಾನೇ ಅರ್ಧ ಸುಸ್ತಾಗಿದ್ದಾರೆ ಜನ. ಈ ಬೆಲೆ ಏರಿಕೆಯನ್ನೇ ಕೇಂದ್ರ ಸರ್ಕಾರದಿಂದ ಕಂಟ್ರೋಲ್ ಮಾಡೋಕೆ ಆಗಿಲ್ಲ. ಬೆಲೆ ಏರಿಕೆ ಆಗ್ತಾ ಇದೆಯಲ್ಲ, ಈಗ ಜನರ ಕೈಗೆ ಕೇಂದ್ರ ಸರ್ಕಾರ ಹಣವನ್ನ ಕೊಡಲಿ ನೋಡೋಣಾ. ಜನರ ಅಕೌಂಟ್ ಗಳಿಗೆ ತಿಂಗಳಿಗೆ ಒಂದ್ ಹದಿನೈದು ಸಾವಿರ ಹಾಕಿ ಬೇಡ ಅಂದವರು ಯಾರು.

ಒಬ್ಬೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕ್ತೀವಿ ಅಂದ್ರಲ್ಲ ಹಾಕುದ್ರಾ. ಅಚ್ಚೆದಿನ್ ತರ್ತೀವಿ ಅಂದ್ರಲ್ಲ ತಂದ್ರ ಅಚ್ಚೆದಿನವನ್ನ. ನಮೀಗ್ ಬೇಡ ನಿಮಿಗ್ ಬಂತಾ ಹೋಗ್ಲಿ. ನಾವೂ ಐದು ಸಾವಿರ ಆದ್ರೂ ಹಾಕ್ತಾ ಇದ್ದೀವಿ. ಸುಮ್ಮನೆ ಬರೀ ಖಾಲಿ ಮಾತು ಅವರದ್ದು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನಾನು ನೋಡ್ತಾ ಇದ್ದೀನಿ, ಎಲ್ಲರ ಬೆಂಬಲ ಇದೆ. ಶಿವಶಂಕರಪ್ಪ ಅವರಿಗಿಂತ ಬಹಳ ಅಂತರದಲ್ಲಿ ಸಮರ್ಥ್ ಅವರನ್ನ ಜನ ಗೆಲ್ಲಿಸ್ತಾರೆ ಎಂಬ ನಂಬಿಕೆ ಇದೆ ಎಂದು ಸಮರ್ಥ್ ಪರ ಪ್ರಚಾರ ಮಾಡ್ತಾ ಇದ್ದು, ಸಮರ್ಥ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...