Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ವಿದ್ಯುತ್ ಸಮಸ್ಯೆಯೇ ; ಹಾಗಾದರೆ ಈ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ..!

---Advertisement---

ಸುದ್ದಿಒನ್, ಚಿತ್ರದುರ್ಗ. 15: ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಸಾರ್ವಜನಿಕರು ತಕ್ಷಣವೇ ದೂರು ನೀಡಲು ಅನುಕೂಲವಾಗುವಂತೆ ಬೆಸ್ಕಾಂ ಅಧಿಕಾರಿಗಳ ಮತ್ತು ಸೇವಾ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.

ಇಡೀ ನಗರ ವ್ಯಾಪ್ತಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಮ್ಮಣ್ಣ ಹೆಚ್ ಮೊಬೈಲ್ 9448279037 ಇವರನ್ನು ಸಂಪರ್ಕಿಸಬೇಕು. ಕೆಳಗೋಟೆ, ಮುನ್ಸಿಪಲ್ ಕಾಲೋನಿ, ಸಿ.ಕೆ ಪುರ, ಚನ್ನಕೇಶವ ಬಡಾವಣೆ, ಜೆ.ಸಿ.ಆರ್ ಬಡಾವಣೆ, ವಿ.ಪಿ ಬಡಾವಣೆ, ಗಾಂಧಿನಗರ, ಐ.ಯು.ಡಿ.ಪಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಸಹಾಯಕ ಇಂಜಿನಿಯರ್ ವಿನಯ್.ಟಿ ಮೊಬೈಲ್ ಸಂಖ್ಯೆ 9449876179 ಅಥವಾ ಸೇವಾ ಕೇಂದ್ರ 9449876163 ಸಂಖ್ಯೆಗೆ ಕರೆ ಮಾಡಬಹುದು.

ವಿದ್ಯಾನಗರ, ಎಸ್.ಆರ್ ಲೇಔಟ್, ತರಳಬಾಳು ಬಡಾವಣೆ, ಈಶ್ವರ ಬಡಾವಣೆ, ಜೆ.ಎಂ.ಐ.ಟಿ ಕಾಲೇಜು, ಹೊಳಲ್ಕೆರೆ ರಸ್ತೆ, ಜಯನಗರ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನರು ಸಹಾಯಕ ಇಂಜಿನಿಯರ್ ಜಯಣ್ಣ ಕೆ.ಸಿ ಮೊಬೈಲ್ ಸಂಖ್ಯೆ 9449876202, ಸೇವಾ ಕೇಂದ್ರ ಸಂಖ್ಯೆ 9449876180 ದೂರು ನೀಡಬಹುದು.

ಮದಕರಿಪುರ, ದಂಡಿನಕುರುಬರಹಟ್ಟಿ, ಲಿಂಗಾವರಹಟ್ಟಿ, ಹೊಸಸಿದ್ಧಾಪುರ, ಕೆಳಗಳಹಟ್ಟಿ, ಪಿ.ಸಿ ಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸಹಾಯಕ ಇಂಜಿನಿಯರ್ ವೆಂಕಟೇಶ್.ಈ ಮೊಬೈಲ್ ಸಂಖ್ಯೆ 9449876221 ಸಂಪರ್ಕಿಸಬಹುದು.

ಬಸವೇಶ್ವರ ನಗರ, ಏಳುಕೋಟಿ ಬಡಾವಣೆ, ಈರುಳ್ಳಿ ಮಲ್ಲಪ್ಪ ಲೇಔಟ್, ವಸುಂಧರ ಬಡಾವಣೆ, ಪ್ರಗತಿ ಮಾರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನರು ಸಹಾಯಕ ಇಂಜಿನಿಯರ್ ಸುನಿಲ್ ಕುಮಾರ್ ಕೆ.ಬಿ. ಮೊಬೈಲ್ ಸಂಖ್ಯೆ 9449876237 ದೂರು ನೀಡಬಹುದು. ದೂರುಗಳ ವಿಲೇವಾರಿಯಲ್ಲಿ ವಿಳಂಬವಾದಲ್ಲಿ ಅಥವಾ ಯಾವುದೇ ಗಂಭೀರ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜ್ ಎಮ್.ಹೆಚ್ ಮೊಬೈಲ್ 9448279014 ಕ್ಕೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now