Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುಮಕೂರಿನಲ್ಲಿ ದೊಡ್ಡ ಹೋರಾಟವೇ ನಡೆದಿದ್ದ ಹೇಮಾವತಿ ಕೆನಾಲ್ ಅಪ್ಡೇಟ್ : ಡಿಕೆ ಶಿವಕುಮಾರ್ ಏನಂದ್ರು..?

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಹೇಮಾವತಿ ಕೆನಾಲ್ ಸಂಬಂಧ ಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅಪ್ಡೇಟ್ ನೀಡಿದ್ದಾರೆ. 30 ತಾರೀಖು ಹೇಮಾವತಿ ಕೆನಾಲ್ ಬಗ್ಗೆ ಮೀಟಿಂಗ್ ಇಟ್ಟಿದ್ದೆವಹ. ಸೋಮಣ್ಣ ಅವರು ಈಗ ತಾನೇ ಮನವಿ ಮಾಡಿದ್ದಾರೆ, 4 ಅಥವಾ 5 ನೇ ತಾರೀಖು ಇಟ್ಕೊಳಿ ಅಂದಿದ್ದಾರೆ. ಹಾಗಾಗಿ ಆ ಸಮಯಕ್ಕೆ ನಾವೂ ಪ್ಲ್ಯಾನ್ ಮಾಡುತ್ತೇವೆ. ಅವರು ಎಂಪಿ ಆಗಿರುವ ಕಾರಣ ಸಭೆಯನ್ನ ಮುಂದೂಡಿ ಎಂದು ಹೇಳಿದ್ದೇವೆ‌ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಹೇಮಾವತಿ ಕೆನಾಲ್ ಬಗ್ಗೆ ಏನೆಲ್ಲಾ ಚರ್ಚೆಯಾಗುತ್ತೆ, ಏನು ನಿರ್ಧಾರವಾಗುತ್ತೆ ಎಂಬುದನ್ನ ನೋಡಬೇಕಿದೆ.

ಇದೇ ವೇಳೆ ಎತ್ತಿನಹೊಳೆ ಪ್ರಾಜೆಕ್ಟ್ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸಿಎಂ ಅವರು ಬೇರೆ ಕೆಲಸ ಇಲ್ಲ ನಿಲ್ಸಿ ಮಾಡಿ ಎಂದಿದ್ದಾರೆ. ಇವತ್ತು ಆ ಕಂಟ್ರಾಕ್ಟರ್ಸ್ ಗಳ ಮೀಟಿಂಗ್ ಕರೆದಿದ್ದೆ, ಪರಮೇಶ್ವರ್ ಅವರು ಇಲ್ಲ ಎಂಬ ಕಾರಣಕ್ಕೆ ನಾಳೆ, ನಾಡಿದ್ದಿಗೆ ಬೆಂಗಳೂರಿಗೆ ಆ ಸಭೆಯನ್ನ ಶಿಫ್ಟ್ ಮಾಡಿದ್ದೇವೆ. ಆ ಸ್ಪಾಟ್ ಗೆ ಹೋಗ್ತಾ ಇದ್ದೀನಿ. ಅಲ್ಲಿ ಏನೆಲ್ಲಾ ಸಮಸ್ಯೆಗಳಿದಾವೆ ಅನ್ನೋದನ್ನ ನೋಡಿಕೊಂಡು ಬರ್ತೇನೆ.

ಈಗಾಗಲೇ ನಾನು ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆ ಸ್ಥಳಕ್ಕೆ ಹೋಗಿದ್ದೇನೆ. ಪರಮೇಶ್ವರ್ ಕೂಡ ಬಂದಿದ್ರು. ಟೆಕ್ನಿಕಲ್ ಪಾಸಿಬಲಿಟಿ ನೋಡ್ತಾ ಇದ್ದೀವಿ. ಯಾವ ರೀತಿಯಾಗಿ ಅಲ್ಲಿ ನೀರನ್ನ ಸ್ಟೋರೇಜ್ ಮಾಡಬಹುದು ಎಂಬುದೆಲ್ಲವನ್ನು ಸಂಬಂಧಪಟ್ಟವರ ಬಳಿ ಅಭಿಪ್ರಾಯವನ್ನ ಕೇಳಿದ್ದೀವಿ. ಅಲ್ಲಿನ ಜನರು ತಮ್ಮ ನೋವನ್ನ ಹೇಳಿಕೊಳ್ಳುತ್ತಾರೆ. ಎರಡ್ಮೂರು ಕೆರೆಗಳನ್ನು ಹೇಳಿದ್ದಾರೆ. ಕೊರಟಗೆರೆಯವರು ಕೂಡ ಹೇಳಿದ್ದಾರೆ. ಅದನ್ನ ಪರಿಶೀಲನೆ ಮಾಡಬೇಕು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)

Leave a Comment