Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿರು ಬೇಸಿಗೆಯ ನಡುವೆ ಮಳೆಯ ಅಬ್ಬರ ; ವಾಣಿ ವಿಲಾಸ ಸೇರಿದಂತೆ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು..?

---Advertisement---

ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿತ್ತು. ಹೀಗಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿದ್ದವು. ಬಳಿಕ ಬೇಸಿಗೆಯ ಕಾಲಕ್ಕೆ ಒಂದಷ್ಟು ನೀರು ಖರ್ಚಾಗಿದೆ. ಈಗ ಮತ್ತೆ ಮಳೆಯಾಗುತ್ತಿದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನ ನೋಡೋಣಾ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಈ ಬಾರಿ ಮೂರನೇ ಬಾರಿಗೆ ಕೋಡಿ ಬಿದ್ದಿತ್ತು. ಬಾಗಿನ ಅರ್ಪಿಸಿ ಜಿಲ್ಲೆಯ ಜನ ಎಂಜಾಯ್ ಕೂಡ ಮಾಡಿದ್ದರು. ವಾಣಿವಿಲಾಸ ಸಾಗರದ ಇಂದಿನ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ 2140 ಅಡಿ ಅಂದ್ರೆ 30.42 ಟಿಎಂಸಿ. ಇಂದಿನ ನೀರಿನ ಮಟ್ಟ 2137.15 ಅಡಿ ಅಂದರೆ 38.01 ಟಿಎಂಸಿ ನೀರು ಇದೆ. ಒಳಹರಿವು 0 ಕ್ಯೂಸೆಕ್ ಒದೆ. ಹೊರ ಹರಿವು 145 ಕ್ಯೂಸೆಕ್ ಇದೆ.

ಭದ್ರಾ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2158 ಅಡಿ ಅಂದ್ರೆ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 2125.64 ಅಡಿ ಅಂದ್ರೆ 37.28 ಟಿಎಂಸಿ ಇದೆ. ಒಳಹರಿವು 128 ಕ್ಯೂಸೆಕ್ಸ್ ಇದ್ರೆ, 5220 ಕ್ಯೂಸೆಕ್ಸ್ ಹೊರ ಹರಿವು ಇದೆ.

ಇ‌್ನು ತುಂಗಾ ಭದ್ರಾ ಜಲಾಶಯದ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ ಬಂ್ಉ 1633 ಅಡಿ ಅಂದ್ರೆ 105.79 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ನೀರಿನ ಮಟ್ಟ 1584.86 ಅಡಿ ಇದೆ. ಅಂದ್ರೆ 7.23 ಟಿಎಂಸಿ ನೀರಿದೆ. ಒಳಹರಿವು 0 ಆಗಿದ್ದು, ಹೊರ ಹರಿವು 4729 ಕ್ಯೂಸೆಕ್ಸ್ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...