Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಿವಮೊಗ್ಗ, ತುಮಕೂರು ಜೋರು ಮಳೆ.. ಚಿತ್ರದುರ್ಗ, ದಾವಣಗೆರೆ ಸಾಧಾರಣ ಮಳೆ : ಎಲ್ಲೆಲ್ಲಿ ಹೇಗಿದೆ ಮಳೆಯ ಅಬ್ಬರ..?

---Advertisement---

 

ಬೆಂಗಳೂರು: ರಾಜ್ಯದಲ್ಲಿ ಚುಮು ಚುಮು ಚಳಿ ಶುರುವಾಗುತ್ತಿರುವಾಗಲೆ ಮಳೆರಾಯ ಬೇರೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದೆ. ಹವಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇಂದು ಬೆಳಗ್ಗೆಯಿಂದಾನೇ ಹಲವೆಡೆ ಸಾಧಾರಣ ಮಳೆಯಾಗಿದೆ.

ಈಗ ರಾಜ್ಯದಲ್ಲಿ ಹಲವು ಬೆಳೆಗಳೆಲ್ಲಾ ಕೊಯ್ಲು ಮಾಡುವ ಸಮಯ ಬಂದಿದೆ. ತುಮಕೂರು ಜಿಲ್ಲೆ ಭಾಗದಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಈಗ ರಾಗಿ ಎಲ್ಲಾ ಒಣಗಿದ್ದು, ಕೊಯ್ಲಿಗೆ ಬಂದಿದೆ. ಸಂಕ್ರಾಂತಿ ಒಳಗೆ ಎಲ್ಲಾ ರಾಗಿಯನ್ನು ಕೊಯ್ದು ಚೀಲ ಕಟ್ಟಿರುತ್ತಾರೆ. ಈಗ ನೋಡಿದರೆ ಮಳೆ ತುಮಕೂರು ಭಾಗದಲ್ಲೂ ಜೋರಾಗಿದ್ದು, ರಾಗಿ ಬೆಳೆದ ರೈತರಿಗೆ ಆತಂಕವಾಗಿದೆ. ಒಣಗಿದ ತೆನೆ ಮೇಲೆ ಮಳೆ ನೀರು ಬಿದ್ದರೆ ರಾಗಿಯೆಲ್ಲಾ ಕಪ್ಪಾಗಿ ಬಿಡುವ ಭಯ ಕಾಡುತ್ತಿದೆ. ಈಗಾಗಲೇ ಕೆಲವೊಂದು ಹೊಲಗಳಲ್ಲಿ ಬಿದ್ದ ಸಾಧಾರಣ ಮಳೆಗೆ ಪೈರುಗಳೆಲ್ಲ ನೆಲಕ್ಕೆ ಹಾಸಿ ಮಲಗಿವೆ. ಈಗ ಒಂದೇ ಸಮನೆ ಮಳೆ ಸುರಿದರೆ ಕೈಗೆ ಸೇರಬೇಕಾದ ಉತ್ತಮ ಗುಣಮಟ್ಟದ ರಾಗಿ ತನ್ನ ಸಾಂಧ್ರತೆಯನ್ನು ಕಳೆದುಕೊಳ್ಳುವ ಭಯವಿದೆ‌.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment