Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಹಿಂಗಾರು ಮಳೆ ಭರ್ಜರಿ ಆರಂಭ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 09 : ಜಿಲ್ಲೆಯಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಜನತೆಗೆ ಬುಧವಾರ ರಾತ್ರಿ ಹಿಂಗಾರು ಮಳೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೀರು ಬೀಸಲಿಗೆ ಬಳಲುತ್ತಿದ್ದ ಜನತೆಗೆ ಮಳೆರಾಯನ ಆಗಮನದಿಂದ ತಂಪಾದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.

ಹಸ್ತ ಮಳೆಯ ಅವಧಿ ಮುಗಿಯುವ ಸಮಯದಲ್ಲಿ ಜಿಲ್ಲೆಯಾದ್ಯಂತ ರಾತ್ರಿ ಉತ್ತಮ ಮಳೆಯಾಗಿದೆ. ಕಳೆದ ತಿಂಗಳ 27 ರಿಂದ ಆರಂಭವಾಗಿ ಈ ತಿಂಗಳ ಅಂದರೆ ಅಕ್ಟೋಬರ್ 10 ರವರೆಗೂ ಇರಲಿದೆ. ನಂತರ 10 ನೇ ತಾರೀಖಿನಿಂದ ಚಿತ್ತ ಮಳೆಯು ಆರಂಭವಾಗಲಿದ್ದು ಮುಂದಿನ ಮೂರು ದಿನಗಳವರೆಗೂ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ 12 ಗಂಟೆಗೆ ಆರಂಭವಾದ ಮಳೆ ಬಾರೀ ಗುಡುಗು, ಸಿಡಿಲು ಮಿಂಚಿನ ಆರ್ಭಟದ ಮಳೆ ಇಂದು ಬೆಳಿಗ್ಗೆ (ಅಕ್ಟೋಬರ್. 09 ರ ವರೆಗೂ) ಕಾಲ ಉತ್ತಮವಾದ ಹದ ಮಳೆಯಾಗಿ ಭೂಮಿ ತಂಪಾಯಿತು. ನಗರದ ಕೆಲವೆಡೆ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು. ಇದೀಗ ಮುಂಗಾರು ಮುಗಿದು ಹಿಂಗಾರು ಬಿತ್ತನೆ ಆರಂಭವಾಗಲಿದ್ದು ರಾತ್ರಿ ಸುರಿದ ಮಳೆಗೆ ರೈತರ ಮೊಗದಲ್ಲಿ ಸಂತಸ ಅರಳಿದೆ.

ಬಿತ್ತನೆಗೆ ಸಿದ್ಧತೆ : ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು ಹಿಂಗಾರು ಮಳೆ ಆರಂಭವಾಗಲಿದ್ದು, ಈ ಮಳೆಯಿಂದ ಬಿತ್ತನೆ ಚುಟುವಟಿಕೆಗಳು ಆರಂಭಾಗಲಿವೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕಡಲೆ, ಧನಿಯಾ, ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಚಳ್ಳಕೆರೆ ವರದಿ :
ತಾಲ್ಲೂಕಿನ ಹುಲಿಕುಂಟೆ, ಜಡೆಕುಂಟೆ, ಕಂದಿಕೆರೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ನೀರು ಹರಿದು ಬಂದು ಬೆಳಗೆರೆ ಕೆರೆಗೆ ಸೇರುತ್ತದೆ.
ಎರಡು ತಿಂಗಳಿಂದ ಮಳೆಗೆ ವಿರಾಮ ನೀಡಿದ ವರುಣದೇವ ಇಡೀ ರಾತ್ರಿ ಸುರಿದ್ದಾನೆ.

ಹಿರಿಯೂರಿನಲ್ಲಿ ಮಳೆ : ನಗರ ಸೇರಿದಂತೆ ಹಾಗೂ ತಾಲ್ಲೂಕಿನ ಮಸ್ಕಲ್, ಬ್ಯಾಡರಹಳ್ಳಿ, ಈಶ್ವರಗೆರೆ, ಕಸವನಹಳ್ಳಿ, ಕೆಆರ್ ಹಳ್ಳಿ , ಜವನಗೊಂಡನಹಳ್ಳಿ ಸೇರಿದಂತೆ ಮತ್ತಿತರರ ಹಳ್ಳಿಗಳಲ್ಲಿ ಉತ್ತಮ ಹದವಾದ ಮಳೆಯಾಗಿದೆ. ಇದರಿಂದ ಬೀಸಲಿಗೆ ಬಳಲುತ್ತಿದ್ದ ಬೆಳೆಗಳು ಕಂಗೊಳಿಸುತ್ತಿವೆ.

ಸುಮಾರು ಎರಡು ತಿಂಗಳು ಮಳೆ ಬರದೇ ಬರಗಾಲ ಆವರಿಸಿತ್ತು. ಹಳ್ಳಗಳು, ಗೋ ಕಟ್ಟೆಗಳು, ಕೆರೆಗಳಲ್ಲಿ ನೀರಿಲ್ಲದೆ ಜಾನುವಾರುಗಳಿಗೂ ಸಹ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತಿತ್ತು, ಆದರೆ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿದ್ದು ಬೇಸಿಗೆ ಕಾಲಕ್ಕೆ ಜಾನುವಾರುಗಳಿಗೆ ಹಾಗೂ ಗ್ರಾಮದ ಸುತ್ತಮುತ್ತ ಇರುವ ಕೊಳವೆ ಬಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದಾಗಿ ರೈತಾಪಿ ವರ್ಗದಲ್ಲಿ ತುಸು ನೆಮ್ಮದಿ ಎಂದು ಬೆಳಗೆರೆ ಪಟೇಲ್ ಗೋಪಿನಾಥ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...