ಬೆಂಗಳೂರು: ಹಾಸನದಲ್ಲಿ ಹಾರ್ಟ್ ಅಟ್ಯಾಕ್ ಮರಣ ಮೃದಂಗ ಬಾರಿಸ್ತಾ ಇದೆ. ಪ್ರತಿ ದಿನ ಕೂಡ ಈ ಹೃದಯಾಘಾತದಿಂದ ಸಾವನ್ನಪ್ಪುತ್ತಾ ಇದ್ದಾರೆ. ಇಂದು ಕೂಡ ಹಾಸನದಲ್ಲಿ ಒಂದು ಹಾರ್ಟ್ ಅಟ್ಯಾಕ್, ಹಾಸನದವರೇ ಆದ ಮಹಿಳೆ ಶಿವಮೊಗ್ಗದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಳೆ ನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದ ಕೊಪ್ಪಲಿನಲ್ಲಿ ಹೃದಯಾಘಾತಕ್ಕೆ 30 ವರ್ಷದ ಸಂಜು ಎಂಬಾತ ಬಲಿಯಾಗಿದ್ದಾರೆ.
ಸಂಜುಗೆ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಮೂರು ತಿಂಗಳಷ್ಟೇ ಮದುವೆಯಾಗಿತ್ತು. ಆದರೆ ಈಗ ನೋಡಿದ್ರೆ ವಿಧಿ ಜೀವನ ಮಾಡುವುದಕ್ಕೂ ಬಿಟ್ಟಿಲ್ಲ. ಮೂರು ತಿಂಗಳಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಜುಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಸ್ನೇಹಿತರೆಲ್ಲ ಸೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಸಂಜು ತಮ್ಮ ಜೀವನ ಮುಗಿಸಿದ್ದಾರೆ. ಹೊಸದಾಗಿ ಮದುವೆಯಾದ ಯುವತಿ ನೋವಲ್ಲಿದ್ದಾರೆ. ಹಾಸನದಲ್ಲಿ ಕೇವಲ 40 ದಿನದಲ್ಲಿ 22 ಜನರ ಸಾವಾಗಿದೆ.
ಅಷ್ಟೇ ಅಲ್ಲ ಹಾಸನ ಮೂಲದ 22 ಹರ್ಷಿತಾ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹರ್ಷಿತಾ ಒಂದೂವರೆ ತಿಂಗಳ ಬಾಣಂತಿಯಾಗಿದ್ದರು. ಬಾಣಂತನಕ್ಕಾಗಿ ಆಯನೂರು ಬಳಿಯ ಮಂಡಘಟ್ಟಕ್ಕೆ ಬಂದಿದ್ದರು. ಎರಡನೇ ಮಗುವಿನ ತಾಯೊಯಾಗಿದ್ದರು. ಆದರೆ ಇಂದು ಬೆಳಗ್ಗೆ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹರ್ಷಿತಾ ಸಾವಿನಿಂದ ಎರಡು ಮಕ್ಕಳು ಅನಾಥವಾಗಿವೆ. ಇನ್ನು ಒಂದೂವರೆ ತಿಂಗಳ ಮಗು ಈಗ ತಾಯಿಯನ್ನು ಕಳೆದುಕೊಂಡು ಏನು ಅಂತ ಗೊತ್ತಿಲ್ಲದ ವಯಸ್ಸಲ್ಲಿದೆ. ಆದರೆ ಈಗ ಮನೆಯವರಿಗೆ ಆ ಮಗುವನ್ನು ಸುಧಾರಿಸುವುದೇ ಬಹಳ ಕಷ್ಟವಾಗಿದೆ. ಒಂದು ಕಡೆ ಮಗಳು ಇಲ್ಲ ಎಂಬ ನೋವು, ಅತ್ತ ಮಗು ಒಂಟಿಯಾಗಿರುವುದು. ಈ ಹಾರ್ಟ್ ಅಟ್ಯಾಕ್ ಇನ್ನು ಯಾವಾಗ ನಿಲ್ಲುತ್ತೊ ಗೊತ್ತಿಲ್ಲ.











