ನಾವೂ ಬಹಳಷ್ಟು ಹಣ್ಣುಗಳ ವಿಚಾರದಲ್ಲಿ ಒಂದಷ್ಟು ತಪ್ಪುಗಳನ್ನು ಮಾಡ್ತೇವೆ. ಹಣ್ಣು ತಿಂದು ಸಿಪ್ಪೆಯನ್ನ ಬಿಸಾಡೋದು. ಆ ವಿಚಾರದಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಹಣ್ಣನ್ನ ತಿಂದು ಸಿಪ್ಪೆಯನ್ನ ಆರಾಮವಾಗಿ ಬಿಸಾಡುತ್ತೇವೆ. ಸೌಂದರ್ಯವರ್ಧಕವಾಗಿ ಬಳಕೆ ಮಾಡಿಕೊಳ್ಳಲು ಗೊತ್ತಿರುವವರು ಅದನ್ನ ಒಣಗಿಸಿ, ಪುಡಿ ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳುತ್ತಾರೆ. ಆದರೆ ಸಿಪ್ಪೆಯಲ್ಲಿ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು ಎಂಬುದು ಗೊತ್ತಿದೆಯಾ..?
ಎಸ್. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕಾಪರ್, ಮೆಗ್ನೀಸಿಯಂ, ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಬಿ6 ಬಹಳ ಮುಖ್ಯವಾಗಿ ಫೈಬರ್ ಅಂಶ ಅಧಿಕವಾಗಿ ಅಡಗಿದೆ. ಹೀಗಾಗಿ ಸಿಪ್ಪೆಯನ್ನ ಆರೋಗ್ಯಕ್ಕಾಗಿ ಬಳಕೆ ಮಾಡಬಹುದು. ಹಾಗಂತ ಹಣ್ಣು ತಿಂದಷ್ಟೇ ಸುಲಭವಾಗಿ ಈ ಸಿಪ್ಪೆಯನ್ನ ತಿನ್ನೋದಕ್ಕೆ ಆಗಲ್ಲ. ಹೀಗಾಗಿ ಸಿಪ್ಪೆಯನ್ನ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನ ಕುಡಿಯಿರಿ. ಇದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನ ಹೇಳ್ತೀವಿ ಕೇಳಿ.

ಎಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ರೆ ಯಾವ ಕಾಯಿಲೆಗಳು ಸಹ ಬರುವುದಿಲ್ಲ. ಅದನ್ನ ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ. ಹಾಗೇ ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಚರ್ಮದ ಸುಕ್ಕನ್ನ ಕಡಿಮೆ ಮಾಡುತ್ತೆ, ಬ್ಲಾಕ್ ಹೆಡ್ಸ್ ಇದ್ರೆ ಅದನ್ನ ತೆಗೆಯುವುದಕ್ಕೆ ಸಹಾಯ ಮಾಡುತ್ತದೆ. ಒಣ ತ್ವಜೆ ನಿಮ್ಮದಾಗಿದ್ರೆ ಆರೋಗ್ಯಯುತ ಚರ್ಮ ಮೂಡುವುದಕ್ಕೆ ಕಾರಣವಾಗುತ್ತದೆ. ಅದರಿಂದ ನಿಮ್ಮ ಚರ್ಮದ ಕಾಂತಿ ಫಲಫಳ ಅಂತ ಹೊಳೆಯುವುದಕ್ಕೆ ಸುಲಭವಾಗುತ್ತದೆ.

ಅಷ್ಟೇ ಅಲ್ಲ ನಿಮ್ಮಲ್ಲಿ ಚಯಾಪಚಯ ಕ್ರಿಯೆಗಳನ್ನು ಸುಲಭ ಮಾಡುತ್ತೆ, ಹೃದಯವನ್ನ ಆರೋಗ್ಯವಾಗಿಡುತ್ತದೆ. ತೂಕ ಇಳಿಸಬೇಕು ಎಂದು ಕೊಂಡವರಿಗೂ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಲಾಭವಿರುವ ಸಿಪ್ಪೆಯನ್ನ ಬಿಸಾಡುವ ಮುನ್ನ ಎಚ್ಚರ.


















