ನನಗೆ ಕೊಡಲಿ ಬೇಡ ಅನ್ನಲ್ಲ ನನ್ನ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ : ಹೆಚ್ ಡಿ ರೇವಣ್ಣ ಗರಂ

suddionenews
1 Min Read

ಹಾಸನ: ಒಂದು ಎಕರೆಗೆ ಎಷ್ಟು ಬೆಳೆಯುತ್ತೀವಿ..? ಏನ್ ಮಾಡ್ತೀವಿ ಅಂತ ನೋಡಬೇಕು ಅಲ್ವಾ. ನಮ್ಮ ಅಪ್ಪ ಅಮ್ಮ ಏನು ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರಾ..? ಆಲುಗಡ್ಡೆಯನ್ನು ಬೆಳೆದಿದ್ದೀವಿ, ಈಗ ಕಬ್ಬು ಹಾಕಿದ್ದೀವಿ. ನನಗೆ ಕೊಡ್ಲಿ ನೋಟೀಸ್ ಬೇಡ ಅನ್ನಲ್ಲ. ಒಬ್ಬ ಮಾಜಿ ಪ್ರಧಾನಿ ಹೆಂಡತಿಗೆ ನೋಟೀಸ್ ಕೊಟ್ಟಿದ್ದಾರೆ. ನಮ್ಮ ತಾಯಿಯವರಿಗೆ ಐಟಿ ನೋಟೀಸ್ ಕೊಟ್ಟಿದ್ದಾರೆ. ಐಟಿ ನೋಟೀಸ್ ಗೆ ಹೆಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.

ನೋಟೀಸ್ ಕೊಟ್ಟಿದ್ದರು ಉತ್ತರ ಅದಕ್ಕೆ ಕೊಡ್ತೀವಿ.‌ ಬೇಕಿದ್ದರೆ ನನಗೆ ಐಟಿ ನೋಟೀಸ್ ನೀಡಲಿ, ಅದಕ್ಕೇನು ಸಮಸ್ಯೆ ಇಲ್ಲ. ಒಬ್ಬೊಬ್ಬ ಆರ್ ಟಿ ಓ ನೂರು ಇನ್ನೂರು ಕೋಟಿ ಮಾಡಿದ್ದಾರಲ್ಲ. RTO ಗಳು ಕೆಲಸಕ್ಕೆ ಸೇರಿದಾಗ ಎಷ್ಟು ಆಸ್ತಿ ಇತ್ತು. ಆಮೇಲೆ ಎಷ್ಟಾಯ್ತು. ಹಾಗಾದ್ರೆ ಅವರಿಗೆ ನೋಟೀಸ್ ಕೊಡೋದು ಯಾರು..? ಎಂದು ಪ್ರಶ್ನಿಸಿದ್ದಾರೆ.

ನಾವೇನಾದ್ರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ..? ನಾನು ಮಾಡೋದಾದ್ರೆ ಹಾಸನದಲ್ಲಿ ಎಷ್ಟು ವ್ಯವಹಾರ ಮಾಡಬಹುದಾಗಿತ್ತು. ವ್ಯವಸಾಯ ಮಾಡಿದ ಜಾಗಕ್ಕೆ ಹೋಗಿ ಅಧಿಕಾರಿಗಳು ನೋಡಿಕೊಂಡು ಬರಲಿ. ಎಲ್ಲರಿಗೂ ಗೊತ್ತಿದೆ ಅಲ್ವಾ ನಾವೂ ವ್ಯವಸಾಯ ಮಾಡೋದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *