ಹಾಸನ: ತಟಯಿ ಹಾಸನಾಂಬೆ ವರ್ಷಕ್ಕೆ ಒಂದೇ ಬಾರಿ ಬಾಗಿಲು ತೆರೆದು ಭಕ್ತರಿಗೆ ತನ್ನ ದರ್ಶನ ಭಾಗ್ಯವನ್ನ ಕರುಣಿಸುವುದು. ಈ ಬಾರಿ ಲಕ್ಷಾಂತರ ಮಂದಿ ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. ಇಂದು ಹಾಸಾಂಬೆ ದೇವಸ್ಥಾನದ ಬಾಗಿಲನ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ. ಹತ್ತೇ ದಿನಕ್ಕೆ ಕೋಟಿ ಕೋಟಿ ಕಾಣಿಕೆ ಸಂಗ್ರಹವಾಗುವ ಮೂಲಕ ದಾಖಲೆ ಬರೆದಿತ್ತು.
ಹಾಸನಾಂಬೆಗೆ ಜಿಲ್ಲಾಧಿಕಾರಿ ಲತಾ ಕೊಂಡ ಹಾಯುವ ಮೂಲಕ ಭಕ್ತಿಯನ್ನ ಅರ್ಪಿಸಿದರು. ಅಕ್ಟೋಬರ್ 9ರಿಂದ ಆರಂಭವಾಗಿದ್ದ ಹಾಸನಾಂಬೆಯ ದರ್ಶನೋತ್ಸವ ಇಂದು ಸಂಪನ್ನಗೊಂಡಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಬಾಗಿಲನ್ನ ಹಾಕಲಾಗಿದೆ. ಈಗಾಗಲೇ 24 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ಟಿಕೆಟ್ ಮತ್ತು ಲಡ್ಡು ಮಾರಾಟದಲ್ಲಿ ಈ ಬಾರಿ 22 ಕೋಟಿಗೂ ಅಧಿಕ ಆದಾಯ ಬಂದಿರುವುದಾಗಿ ಹೇಳಿದ್ದಾರೆ. ಸುಗಮ ದರ್ಶನಕ್ಕೆ ಸಚಿವ ಕೃಷ್ಣ ಭೈರೇಗೌಡ ಅವರು ಮಾಡಿದ ವಿನೂತನ ಪ್ರಯೋಗ ಯಶಸ್ವಿಯಾಗಿದ್ದು, ಎಲ್ಲರು ದೇವಿಯ ದರ್ಶನ ಮಾಡುವುದಕ್ಕೆ ಸುಲಭವಾಗಿತ್ತು. ಈ ಹಿಂದಿನ ಎಲ್ಲಾ ಅವ್ಯವಸ್ಥೆಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಆದ್ಯತೆ ಕೊಡಬೇಕು ಎಂದಾಗ ಎಲ್ಲಾ ಶಾಸಕರು, ಸದಸ್ಯರು ಸಪೋರ್ಟಚ ಮಾಡಿದರು. ಜನರು, ಅಧಿಕಾರಿಗಳು ಸಪೋರ್ಟ್ ಮಾಡಿದರು. ನನಗೆ ಹಾಸನದ ಅನುಭವ ಕಡಿಮೆಯಾದರು ಎರಡು ತಿಂಗಳಲ್ಲಿ ನೋಡಿದಾಗ ಜನ ನಮಗೆ ಸಹಕಾರ ಕೊಟ್ಟಿದ್ದಾರೆ. ಅವರ ಸಹಕಾರದಿಂದಲೇ ಹಾಸನಾಂಬೆ ದರ್ಶನ ಯಶಸ್ವಿಯಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸಂತಸ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಮೊದಲ ವಾರ ಕಾಣಿಕೆ ಹುಂಡಿ ಎಣಿಸಿದ್ದು, ಹತ್ತು ಕೋಟಿಯಷ್ಟು ಕಾಣಿಕೆ ಸಂಗ್ರಹವಾಗಿತ್ತು. ಈಗ ಲಡ್ಡು ಹಾಗೂ ಟಿಕೆಟ್ ಮಾರಾಟದಿಂದಾನೂ ಕೋಟಿ ಕೋಟಿ ಸಂಗ್ರಹವಾಗಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






