ಬಿಗ್ ಬಾಸ್ ಕನ್ನಡ ಫಿನಾಲೆ 11ರ ಗೆಲುವು ಹನುಮಂತು ಪರವಾಗಿದೆ. ಟ್ರೋಫಿ ಪಡೆದ ಖುಷಿ ಇದ್ದರು ಅತಿರೇಕದಿಂದ ವರ್ತಿಸುತ್ತಿಲ್ಲ. ಸಾಮಾನ್ಯವಾಗಿಯೇ ಇದ್ದಾರೆ. ಆದರೆ ಇದೀಗ ಆ ಟ್ರೋಫಿ ದೋಸ್ತನ ಕೈನಲ್ಲಿ ಕೊಟ್ಟು ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹನು-ಧನು ವಿಚಾರ ಜನರನ್ನ ಹೆಚ್ಚು ಕಾಡಿತ್ತು. ಇವರಿಬ್ಬರ ಗೆಳೆತನದಿಂದಾನೇ ಬಿಗ್ ಬಾಸ್ ಮನೆಗೊಂದು ಕಳೆ ಬಂದಿತ್ತು. ಸದಾ ಕಾಲ ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಕುಂತಲ್ಲಿ, ನಿಂತಲ್ಲಿ ಜೊತೆ ಜೊತೆಯಾಗಿಯೇ ಇದ್ದರು. ಅದರಲ್ಲೂ ಮುಖ್ಯದ್ವಾರದ ಬಳಿ ಹೆಚ್ಚು ಸಮಯ ಕಳೆದಿದ್ದರು. ಹನುಮಂತುನನ್ನು ಧನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ಇವರಿಬ್ಬರ ದೋಸ್ತಿಗೇನೆ ಹೆಚ್ಚು ವೋಟ್ ಗಳು ಬಿದ್ದಿತ್ತು. ಇವರಿಬ್ಬರ ಗೆಳೆತನ ಹೇಗಿತ್ತು ಎಂದರೆ ಒಂದೇ ಬಾತ್ ರೂಮಿನಲ್ಲಿ ಇಬ್ಬರು ಒಟ್ಟಿಗೆ ಸ್ನಾನ ಮಾಡಿದ್ದರು. ಆದರೆ ಆಟ, ನಿಯಮ ಅಂತ ಬಂದಾಗ ದೋಸ್ತ ಬೇರೆನೆ.
ಧನು ಇನ್ನೇನು ಫಿನಾಲೆ ತಲುಪಬೇಕು ಎನ್ನುವ ಹಂತಕ್ಕೆ ಬಂದು ಸೋತು ಬಿಟ್ಟರು. ಅಂದು ಮನೆಯಿಂದ ಹೊರಗೆ ಹೋಗುವಾಗ ಪಾಸ್ ಆಗಿದ್ದ ಹನುಮಂತುಗೆ ದೋಸ್ತನನ್ನ ಮಾತಾಡಿಸುವುದಕ್ಕೂ ಆಗಿರಲಿಲ್ಲ, ಅಪ್ಪಿ ಮುದ್ದಾಡುವುದಕ್ಕೂ ಆಗಿರಲಿಲ್ಲ. ಬಿಗ್ ಬಾಸ್ ಗೆದಗದು ಟ್ರೋಫಿ ಪಡೆದ ಮೇಲೆ ದೋಸ್ತನನ್‌ನ ಭೇಟಿ ಮಾಡಿದ್ದಾರೆ. ದೋಸ್ತನ ಕೈಗೆ ಟ್ರೋಫಿ ಕೊಟ್ಟು ಸಂಭ್ರಮಿಸಿದ್ದಾರೆ. ಧನರಾಜ್ ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದೋಸ್ತಾ ನೀ ಮಸ್ತಾ.. ಗೆಲಯವು ನಿನ್ನದು, ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ ಅಂತ ಬರೆದುಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















