Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹನುಮಂತು ಟ್ರೋಫಿ ಧನರಾಜ್ ಕೈನಲ್ಲಿ : ಗೆಳೆಯರ ಸಂತಸ ನೋಡಿ

---Advertisement---

ಬಿಗ್ ಬಾಸ್ ಕನ್ನಡ ಫಿನಾಲೆ 11ರ ಗೆಲುವು ಹನುಮಂತು ಪರವಾಗಿದೆ. ಟ್ರೋಫಿ ಪಡೆದ ಖುಷಿ ಇದ್ದರು ಅತಿರೇಕದಿಂದ ವರ್ತಿಸುತ್ತಿಲ್ಲ. ಸಾಮಾನ್ಯವಾಗಿಯೇ ಇದ್ದಾರೆ. ಆದರೆ ಇದೀಗ ಆ ಟ್ರೋಫಿ ದೋಸ್ತನ ಕೈನಲ್ಲಿ ಕೊಟ್ಟು ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹನು-ಧನು ವಿಚಾರ ಜನರನ್ನ ಹೆಚ್ಚು ಕಾಡಿತ್ತು. ಇವರಿಬ್ಬರ ಗೆಳೆತನದಿಂದಾನೇ ಬಿಗ್ ಬಾಸ್ ಮನೆಗೊಂದು ಕಳೆ ಬಂದಿತ್ತು. ಸದಾ ಕಾಲ ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಕುಂತಲ್ಲಿ, ನಿಂತಲ್ಲಿ ಜೊತೆ ಜೊತೆಯಾಗಿಯೇ ಇದ್ದರು. ಅದರಲ್ಲೂ ಮುಖ್ಯದ್ವಾರದ ಬಳಿ ಹೆಚ್ಚು ಸಮಯ ಕಳೆದಿದ್ದರು. ಹನುಮಂತುನನ್ನು ಧನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ಇವರಿಬ್ಬರ ದೋಸ್ತಿಗೇನೆ ಹೆಚ್ಚು ವೋಟ್ ಗಳು ಬಿದ್ದಿತ್ತು. ಇವರಿಬ್ಬರ ಗೆಳೆತನ ಹೇಗಿತ್ತು ಎಂದರೆ ಒಂದೇ ಬಾತ್ ರೂಮಿನಲ್ಲಿ ಇಬ್ಬರು ಒಟ್ಟಿಗೆ ಸ್ನಾನ ಮಾಡಿದ್ದರು. ಆದರೆ ಆಟ, ನಿಯಮ ಅಂತ ಬಂದಾಗ ದೋಸ್ತ ಬೇರೆನೆ.

ಧನು ಇನ್ನೇನು ಫಿನಾಲೆ ತಲುಪಬೇಕು ಎನ್ನುವ ಹಂತಕ್ಕೆ ಬಂದು ಸೋತು ಬಿಟ್ಟರು. ಅಂದು ಮನೆಯಿಂದ ಹೊರಗೆ ಹೋಗುವಾಗ ಪಾಸ್ ಆಗಿದ್ದ ಹನುಮಂತುಗೆ ದೋಸ್ತನನ್ನ ಮಾತಾಡಿಸುವುದಕ್ಕೂ ಆಗಿರಲಿಲ್ಲ, ಅಪ್ಪಿ ಮುದ್ದಾಡುವುದಕ್ಕೂ ಆಗಿರಲಿಲ್ಲ. ಬಿಗ್ ಬಾಸ್ ಗೆದಗದು ಟ್ರೋಫಿ ಪಡೆದ ಮೇಲೆ ದೋಸ್ತನನ್‌ನ ಭೇಟಿ ಮಾಡಿದ್ದಾರೆ. ದೋಸ್ತನ ಕೈಗೆ ಟ್ರೋಫಿ ಕೊಟ್ಟು ಸಂಭ್ರಮಿಸಿದ್ದಾರೆ. ಧನರಾಜ್ ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದೋಸ್ತಾ ನೀ ಮಸ್ತಾ.. ಗೆಲಯವು ನಿನ್ನದು, ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ ಅಂತ ಬರೆದುಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...