ನನ್ನ ಪಾತ್ರವಿದ್ದರೇ ಪಾಶಿ‌ಮಾಡಿ( ನೇಣು ಹಾಕಿ) : ಸಚಿವ ಪ್ರಭು ಚೌಹಾಣ್

suddionenews
2 Min Read

ಬೆಂಗಳೂರು: ಬೀದರ್ ಕರ್ನಾಟಕ ಪಶು ವೈದ್ಯಕೀಯ ವಿವಿ ವಿಸಿ ನೇಮಕಾತಿ ವಿಚಾರ, ಹಂಗಾಮಿ ಕುಲಪತಿಯಾಗಿರೋ ಕೆ.ಸಿ ವೀರಣ್ಣ ನೇಮಕಾತಿ ಮಾಡಲು ಮುಂದಾದ ವಿಚಾರದಲ್ಲಿ ಮಾತನಾಡಿದ ಸಚಿವ ಪ್ರಭು ಚೌಹಾಣ್, ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ನನ್ನದು ಏನಾದರೂ ಪಾತ್ರವಿದ್ದರೇ ನನ್ನ ಪಾಶಿ‌ಮಾಡಿ( ನೇಣು ಹಾಕಿ). ಎಲ್ಲದಕ್ಕೂ ಸರ್ಚ್ ಕಮಿಟಿ. ರಾಜ್ಯಪಾಲರಿಗೆ ಕೂಡ ಹೋಗುತ್ತೆ. ಸರ್ಚ್ ಕಮಿಟಿಯಲ್ಲಿ ಅವರ ಹೆಸರು ಬಂದಿದೆ. ಗೋ ಮಾತಾ ರಕ್ಷೆ ಮಾಡ್ತೀವಿ, ಉಲ್ಟಾ ಕೆಲಸ ಆಗಲ್ಲ. ಗೌವರ್ನರ್ ಅವರನ್ನ ನೇಮಕ ಮಾಡೋದು. ಕಮಿಷನ್ ತಗೋಳೋ ಕೆಲಸ ಮಾಡಲ್ಲ. ನಮ್ಮ ಪ್ರಗತಿ ಸಹಿಸಲಾಗಿದೆ ಈ ರೀತಿ ಮಾಡಿದ್ದಾರೆ. ಹಸುಗಳ ರಕ್ಷಣೆ ಯಾರೂ ಮಾಡಿಲ್ಲ. ಹಾಗಾಗಿ ಹೀಗೆ ಮಾಡ್ತಿದ್ದಾರೆ.

ಕಾಂಗ್ರೆಸ್ ನವರು ಬೇಕು ಅಂತ ಈ ರೀತಿ ಆರೋಪ ಮಾಡ್ತಿದ್ದಾರೆ. ಸಾಭೀತಾದ್ರೆ ಏನು ಬೇಕಾದ್ರೂ ಮಾಡಲಿ. ನನ್ನ ಗಮನದಲ್ಲಿ ನೇಮಕದ ಬಗ್ಗೆ ಮಾಹಿತಿ ಇದೆ. ಆದ್ರೆ ಅದು ರಾಜ್ಯಪಾಲರ ಆದೇಶದ ಮೇಲೆ ನೇಮಕ ಆಗೋದು. ನಮ್ಮ ರಾಜ್ಯದಲ್ಲಿ 180 ಗೋಶಾಲೆ ಇದೆ. ಸಹಕಾರ ಸಂಘ ಮಾಡ್ತಿದ್ದೇವೆ. ಪುಣ್ಯಕೋಟಿ ಮಾತಾ ಮಾಡ್ತಿದ್ದೇವೆ. ಯಾವ ತರ ಮಾಡಬೇಕು ಅಂತ ರಾಜ್ಯದ ಎಲ್ಲಾ ಗೋ ಶಾಲೆಯ ಪ್ರಮುಖರು ಬಂದಿದ್ದಾರೆ.

ಎರಡು ದಿನದಿಂದ ಚರ್ಚೆ ಮಾಡ್ತಿದ್ದೇವೆ. ಆತ್ಮನಿರ್ಭರ ಗೋ ಶಾಲೆ ಮಾಡಲಿಚ್ಚಿಸಿದ್ದೇವೆ. ಗೋಬರ್ ಗ್ಯಾಸ್ ಮಾಡಲು ನಿರ್ಧಾರ ಮಾಡಿದ್ದೇವೆ. ಹಾಗಾಗಿ ರೈತರಿಗೆ ಕೆ.ಜಿ ಸಗಣಿಗೆ 2ರೂ ನೀಡ್ತೀವಿ. ಈ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಆತ್ಮನಿರ್ಭರ ಗೋ ಶಾಲೆ ಮಾಡ್ತಿದ್ದೇವೆ. 20ಸಾವಿರ ಗೋ ರಕ್ಷಣೆ ಆಗಿದೆ. 900 ಕಂಪ್ಲೆಂಟ್ ದಾಖಲಾಗಿದೆ. ನಿನ್ನೆ ಬಕ್ರೀದ್ ದಿನವೂ ರೆಸ್ಕ್ಯೂ ಮಾಡಿ ದೂರು ದಾಖಲಾಗಿದೆ.

700ಕ್ಕೂ ಹೆಚ್ಚು ದೂರು ದಾಖಲಾಗಿದೆ. ಬಂಧನ ಮಾಡುವ ಕೆಲಸ ಮಾಡಿದ್ದೇವೆ. ನಮ್ಮ ಗುರಿ ಒಂದೇ ಗೋಮಾತ ರಕ್ಷಣೆ ಆಗಬೇಕು. ಕರ್ನಾಟಕದಲ್ಲಿ ಅಕ್ರಮ ಕಸಾಯಿ ಖಾನೆ ರದ್ದಾಗಬೇಕು. ಬೆಳಗಾವಿಯಲ್ಲಿ ಪಶು ಸಂಜೀವಿನಿ ಯೋಜನೆ ಮಾಡ್ತಿದ್ದೀವಿ. ಆಂಬ್ಯುಲೆನ್ಸ್ ಮಾಡಿದ್ದೇವೆ. ರೈತರು ಕರೆ ಮಾಡಿದ್ರೆ ಅಲ್ಲಿಗೆ ವೈದ್ಯರು, ಆಂಬ್ಯುಲೆನ್ಸ್ ಹೋಗುತ್ತೆ. ಗೃಹಸಚಿವರು, ಪೊಲೀಸ್ ಇಲಾಖೆ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *