Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹ್ಯಾಕರ್ಸ್ ಗಳ ಕಾಟ : ಉಪೇಂದ್ರ ಮಗ ಆಯುಷ್ ಕಳೆದುಕೊಂಡಿದ್ದೆಷ್ಟು..?

---Advertisement---

ಬೆಂಗಳೂರು: ಯಾವುದೋ ಒಂದು ನಂಬರ್ ಡಯೆಲ್ ಮಾಡಿ, ತಮ್ಮ ನಂಬರ್ ಅನ್ನೇ ಹ್ಯಾಕರ್ಸ್ ಗಳ ಪಾಲಿಗೆ ವರವಾಗುವಂತೆ ಮಾಡಿದವರು ನಟ ಉಪೇಂದ್ರ ಹಾಗೂ ಪ್ರಿಯಾಂಕ. ಇಂದು ಬೆಳಗ್ಗಯೇ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕರ್ಸ್ ಗಳ ದಾಳಿಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಫೋನ್ ನಂಬರ್ ನಿಂದ ಯಾರೇ ಹಣ ಕೇಳಿದ್ರು ಕೊಡಬೇಡಿ ಎಂಬ ಮಾಹಿತಿಯನ್ನ ನೀಡಿದ್ರು. ಆದ್ರೆ ಆ ಮಾಹಿತಿ ತಿಳಿ್ಉ ಸ್ನೇಹಿತರು, ಸಂಬಂಧಿಕರು ಅಲರ್ಟ್ ಆಗುವಷ್ಟರಲ್ಲಿ ಅವರ ಮಗನೇ ಹಣವನ್ನ ಕಳೆದುಕೊಂಡಿದ್ದರು. ಅದು ಒಂದಲ್ಲ, ಎರಡಲ್ಲ ಸಾವಿರಾರು ರೂಪಾಯಿ ಕಳೆದುಕೊಂಡಿದ್ದರು.

ಉಪೇಂದ್ರ ಮಗ ಆಯುಷ್ ಆ ಹ್ಯಾಕರ್ಸ್ ಗಳ ಮೋಸಕ್ಕೆ ಲಾಕ್ ಆಗಿ ಸುಮಾರು 55 ಸಾವಿರ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಉಪೆಂದ್ರ ಅವರೇ ಮಾಹಿತಿ ನೀಡಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಈ ಸಂಬಂಧ ದೂರು ನೀಡಿದ ಉಪೇಂದ್ರ ಅವರು, ನನ್ನ ಮಗನೇ ಯಾಮಾರಿದ್ದಾನೆ. ನಮ್ಮ ನಂಬರ್ ನಿಂದ ಕೇಳಿದ ಕೂಡಲೇ 55 ಸಾವಿರ ಹಣ ಕಳುಹಿಸಿದ್ದಾನೆ. ಆಗಲೇ ಗೊತ್ತಾಗಿದ್ದು, ನಮ್ಮ ನಂಬರ್ ಹ್ಯಾಕ್ ಆಗಿದೆ ಅಂತ.

ಬರೀ ನನ್ನ ಮಗ ಮಾತ್ರವಲ್ಲ, ಆತನ ಸ್ನೇಹಿತರು ಕಳುಹಿಸಿದ್ದಾರೆ. ಅಕೌಂಟ್ ನ್ನೆಲ್ಲಾ ಬ್ಲಾಕ್ ಮಾಡಿಸಿದ್ದೇವೆ. ಅದರಿಂದ ಯಾವುದೇ ರೀತಿಯ ಡ್ರಾ ಮಾಡೋದಕ್ಕೆ ಆಗಿಲ್ಲ‌. ಆದ್ರೆ ಹೀಗೆ ಸ್ನೇಹಿತರಿಗೆಲ್ಲಾ ಮೆಸೇಜ್ ಮಾಡಲಾಗ್ತಾ ಇದೆ. ಯಾವುದೋ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದಾರೆ ಅಂದ್ಕೊಂಡು ಹಣ ಕಳುಹಿಸಿದ್ದಾರೆ. ಹ್ಯಾಕರ್ಸ್ ಗಳು ಒಬ್ಬೊಬ್ಬರ ಬಳಿ 45-55 ಸಾವಿರದಂತೆ ಹಣ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...