ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಧುನಾಪೀಠ ವಿರಾಜಮಾನರಾದ ಶ್ರೀಶ್ರೀ 1008 ಶ್ರೀ ಡಾ. ಸುಬುಧೇಂದ್ರತೀರ್ಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ, ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಶಾಖಾಮಠ ಚಿತ್ರದುರ್ಗದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಆಶ್ರಯದಲ್ಲಿ, ಶ್ರೀಮಠದ ವ್ಯವಸ್ಥಾಪಕರು ಮತ್ತು ಸಿಬ್ಬಂದಿವರ್ಗದವರ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ, ಕೈಗೆಟುಕುವ ದರದಲ್ಲಿ ಆಧುನಿಕ ಔಷಧಗಳನ್ನು ಚಿತ್ರದುರ್ಗದ ಜನರಿಗೆ ಜನರಿಕ್ ಔಷಧಗಳ ಮೂಲಕ ಒದಗಿಸುತ್ತಾ ಬಂದಿರುವ ರಂಗಯ್ಯನ ಬಾಗಿಲು ಬಳಿಯಿರುವ ಶ್ರೀಸಾಯಿ ಜನರಿಕ್ ಮೆಡಿಕಲ್ಸ್ ವತಿಯಿಂದ ಚಿತ್ರದುರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ 10 ಜುಲೈ 2025 ಗುರುವಾರ ಗುರುಪೂರ್ಣಿಮಾ ದಿನದಂದು ಸಂಜೆ 4:30 ರಿಂದ 8 ಗಂಟೆಯವರೆಗೆ ಯಶಸ್ವಿಯಾಗಿ ನೆರವೇರಿತು.
ಶಿಬಿರದ ಉದ್ಘಾಟನೆಯನ್ನು ಚಿತ್ರದುರ್ಗ ನಗರಸಭೆಯ ಆಯುಕ್ತರಾದ ಶ್ರೀಮತಿ ರೇಣುಕಾ ಎಂ., ಕೆ.ಎ.ಎಸ್., ಅವರು ನೆರವೇರಿಸಿದರು.
ಚಿತ್ರದುರ್ಗ ಶಾಖಾ ಶ್ರೀಮಠದ ವ್ಯವಸ್ಥಾಪಕರಾದ ಪ್ರಾಣೇಶ್ ಆಚಾರ್ಯ ಕೊಪ್ಪರ್, ಶ್ರೀಮಠದ ಸರ್ವ ಸಿಬ್ಬಂದಿಗಳು, ಶ್ರೀಮಠದ ಭಕ್ತರಾದ ಸಂಸ್ಕಾರ ಭಾರತೀ ಚಿತ್ರದುರ್ಗ ಪ್ರಧಾನ ಕಾರ್ಯದರ್ಶಿಗಳು ಶಶಿಧರ್ ರಾವ್, ನಿವೃತ್ತ ಉಪತಹಸೀಲ್ದಾರ್ ವಾಸುದೇವಮೂರ್ತಿ, ನಿವೃತ್ತ ಕೃಷಿ ಇಲಾಖೆ ಅಧಿಕಾರಿಗಳು ನಂಜುಂಡ ರಾವ್ ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಸಮುದಾಯ ಆರೋಗ್ಯ ಅಧಿಕಾರಿ ರಮೇಶ್ ಮತ್ತು ಮೈತ್ರಾ ಬಿರಾದಾರ್, ವೈದ್ಯಕೀಯ ತಂಡ, ಶ್ರೀಸಾಯಿ ಜನರಿಕ್ ಮೆಡಿಕಲ್ಸ್ ತಂಡದ ಸರ್ವ ಸದಸ್ಯರು ಮತ್ತು ಸರ್ವ ಸಿಬ್ಬಂದಿಗಳು, ಸ್ವಾಮಿ, ಲತಾರವರು, ನಾಗವೇಣಿ, ಆರೋಗ್ಯ ಇಲಾಖೆ ಸಿಬ್ಬಂದಿ ಮಾರುತಿ ಎಲ್. ಮತ್ತಿತರಿದ್ದರು. ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಉಚಿತ ಬಿ.ಪಿ., ಶುಗರ್, ತೂಕ ಪರೀಕ್ಷೆಯೊಂದಿಗೆ ಸೂಕ್ತ ವೈದ್ಯಕೀಯ ಸಲಹೆ – ಸಮಾಲೋಚನೆಯ ಸದುಪಯೋಗವಾಯಿತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















