ಬೆಂಗಳೂರು; ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಒಂದು ಕೆಟ್ಟ ಘಟನೆ ನಡೆದಿತ್ತು. ಯುವಕನೊಬ್ಬನ ಮೇಲೆ ಮರದ ಕೊಂಬೆಯೊಂದು ಬಿದ್ದಿತ್ತು. ಇದರಿಂದ ಅಕ್ಷಯ್ ಎಂಬಾತ ಸಂಪೂರ್ಣವಾಗಿ ಪ್ರಜ್ಞಾಹೀನನಾಗಿದ್ದ. ಬದುಕಿ ಬರಬಹುದೆಂಬ ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು. ಆದರೆ ಆ ಭರವಸೆ ಹುಸಿಯಾಗಿದೆ. ಅಕ್ಷಯ್ ಬದುಕಿ ಬರಲೇ ಇಲ್ಲ. ಅಜ್ಜಿ ತಾತನಿಗೆ ಆಸರೆಯಾಗಿದ್ದ ಮೊಮ್ಮಗ ಇನ್ನಿಲ್ಲವಾಗಿದ್ದಾನೆ.
ಜೂನ್ 15ನೇ ಭಾನುವಾರ ಅಕ್ಷಯ್ ಅವರ ತಂದೆ ಹುಟ್ಟುಹಬ್ಬವಿತ್ತು. ತಂದೆಗೆ ಮಟನ್ ಇಷ್ಟವಿದ್ದ ಕಾರಣ, ಅಕ್ಷಯ್ ಮಧ್ಯಾಹ್ನದ ಸಮಯದಲ್ಲಿ ಮಟನ್ ತರುವುದಕ್ಕೆಂದು ಹೋಗಿದ್ದರು. ಈ ವೇಳೆ ಬ್ರಹ್ಮ ಮಂದಿರದ ಬಳಿ ಗಾಡಿಯಲ್ಲಿ ಹೋಗುವಾಗ ಮರದ ಕೊಂಬೆ ತಲೆ ಮೇಲೆ ಬಿದ್ದಿದೆ. ತಕ್ಷಣ ಪ್ರಜ್ಞೆ ತಪ್ಪಿ ಅಕ್ಷಯ್ ನೆಲದ ಮೇಲೆ ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಸ್ಥಳೀಯರು ತಕ್ಷಣ ಪ್ರಶಾಂತ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಪ್ರಶಾಂತ್ ತಲೆಯಲ್ಲಿ ರಕ್ತ ನಿಲ್ಲಲೇ ಇಲ್ಲ. ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಸಾವು – ಬದುಕಿನ ನಡುವೆ ಅಕ್ಷಯ್ ಹೋರಾಟ ಮಾಡ್ತಾ ಇದ್ದರು. ಅಕ್ಷಯ್ ಮೂಲತಃ ಬನಶಂಕರಿಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿಯೊಂದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡ್ತಾ ಇದ್ದರು. ಇಡೀ ಕುಟುಂಬ ಅಕ್ಷಯ್ ಅವರ ಮೇಲೆ ಅವಲಂಬಿತವಾಗಿತ್ತು. ಇದೀಗ ಅಕ್ಷಯ್ ಜೀವಂತವಾಗಿಲ್ಲ. ಕುಟುಂಬಕ್ಕೆ ನೆಲೆ ಯಾರೂ ಎಂಬುದೇ ಇಡೀ ಕುಟುಂಬದ ನೋವಾಗಿದೆ. ದಾರಿಯಲ್ಲಿ ಹೋಗ್ತಾ ಇದ್ದವನ ಮೇಲೆ ಮರದ ಕೊಂಬೆ ಬಿದ್ದಿದ್ದಕ್ಕೆ ಹೊಣೆಯಾದರೂ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















