Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾರ್ಮಿಕರಿಗೆ ಸಿಹಿ ಸುದ್ದಿ: ಕನಿಷ್ಠ ವೇತನ ಸರಾಸರಿ ಶೇ.60 ರಷ್ಟು ಹೆಚ್ಚಳ

---Advertisement---

ಸುದ್ದಿಒನ್,ಬೆಂಗಳೂರು,ಮೇ.27: ರಾಜ್ಯದ ಕಾರ್ಮಿಕ ವರ್ಗದ ದೀರ್ಘಕಾಲದ ಬೇಡಿಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ವಿವಿಧ ವಲಯಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ. 60 ರಷ್ಟು ಭಾರಿ ಹೆಚ್ಚಳ ಮಾಡಿ ಆದೇಶಿಸಿದೆ. ರಾಷ್ಟ್ರ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ
ತಿಳಿಸಿದ್ದಾರೆ.

83ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಲಾಭ

ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಇ-ಕಾಮರ್ಸ್, ಕೊರಿಯರ್ ಸಂಸ್ಥೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆಗಳು, ಹೋಟೆಲ್‌ಗಳು, ಆಹಾರ ಸಂಸ್ಕರಣಾ ಘಟಕಗಳು, ಪೆಟ್ರೋಲ್ ಬಂಕ್‌ಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳು ಸೇರಿದಂತೆ ಒಟ್ಟು 83ಕ್ಕೂ ಅಧಿಕ ಅನುಸೂಚಿತ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ನೇರ ಅನುಕೂಲವಾಗಲಿದೆ.

4ರ ಬದಲಿಗೆ 3 ವಲಯಗಳಾಗಿ ಪುನರ್ವಿಂಗಡಣೆ
ವೇತನ ನಿಗದಿ ಮತ್ತು ಪರಿಷ್ಕರಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಇದ್ದ 4 ವಲಯಗಳ (Zones) ವ್ಯವಸ್ಥೆಯನ್ನು ಬದಲಾಯಿಸಿ, ಈಗ 3 ವಲಯಗಳನ್ನಾಗಿ ಮರುರಚಿಸಲಾಗಿದೆ:

ವಲಯ-1: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪ್ರದೇಶಗಳು.

ವಲಯ-2: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು.

ವಲಯ-3: ಇನ್ನುಳಿದ ಇತರೆ ಎಲ್ಲಾ ಪ್ರದೇಶಗಳು.

ಪರಿಷ್ಕೃತ ವೇತನದ ವಿವರ
ಹೊಸ ಪರಿಷ್ಕರಣೆಯ ಅನ್ವಯ ವಲಯ ಮೂರರಲ್ಲಿ (Zone 3) ಕಾರ್ಯನಿರ್ವಹಿಸುವ ಕಾರ್ಮಿಕರ ವೇತನ ಶ್ರೇಣಿ ಈ ಕೆಳಗಿನಂತಿರಲಿದೆ:

ಕಾರ್ಮಿಕರ ವರ್ಗ ಪರಿಷ್ಕೃತ ಗರಿಷ್ಠ ವೇತನ

ಕೌಶಲ್ಯರಹಿತ ಕಾರ್ಮಿಕರು (Unskilled) ₹19,300 ರವರೆಗೆ

ಕೌಶಲ್ಯಯುತ ಕಾರ್ಮಿಕರು (Skilled) ₹31,100 ರವರೆಗೆ

Join WhatsApp

Join Now

Join Telegram

Join Now