ಸ್ವಂತ ಉದ್ಯೋಗ ಮಾಡಬಯಸುವ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರವು ಸುವರ್ಣಾವಕಾಶ ನೀಡುತ್ತಿದೆ. ನಿಮ್ಮದೇ ಗ್ರಾಮದಲ್ಲಿ ‘ಗ್ರಾಮ ಒನ್’ ಕೇಂದ್ರವನ್ನು ಆರಂಭಿಸಬಹುದು. ಈ ಕೇಂದ್ರವನ್ನು ತೆರೆಯಲು ಬೇಕಾದ ಅರ್ಹತೆಗಳು, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. (ಡಿಪ್ಲೊಮಾ, ಐಟಿಐ, ಪದವಿ ಅಥವಾ ಸ್ನಾತಕೋತ್ತರ ಪದವೀಧರರಿಗೂ ಅವಕಾಶವಿದೆ). ಅಭ್ಯರ್ಥಿಗಳಿಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನವಿರಬೇಕು.ಕೇಂದ್ರ ಸ್ಥಾಪಿಸಲು ಸುಮಾರು ₹1 ರಿಂದ ₹2 ಲಕ್ಷ ಬಂಡವಾಳ ಹೂಡುವ ಸಾಮರ್ಥ್ಯವಿರಬೇಕು.
ಕೇಂದ್ರವನ್ನು ನಡೆಸಲು ನಿಮ್ಮ ಬಳಿ ಈ ಕೆಳಗಿನ ಉಪಕರಣಗಳು ಇರಬೇಕಾಗುತ್ತದೆ:ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್.ಪ್ರಿಂಟರ್ ಮತ್ತು ಬಯೋಮೆಟ್ರಿಕ್ ಸ್ಕ್ಯಾನರ್.ವೇಗದ ಇಂಟರ್ನೆಟ್ ಸೌಲಭ್ಯ. ಕೌಂಟರ್, ಆಪರೇಟರ್ ಕುರ್ಚಿ, ಗ್ರಾಹಕರಿಗಾಗಿ 4-5 ಕುರ್ಚಿಗಳು, ಉತ್ತಮ ಬೆಳಕು/ಗಾಳಿ, ಸಿಸಿಟಿವಿ ಮತ್ತು ಎಲ್ಸಿಡಿ ಟಿವಿ ಸೌಲಭ್ಯವಿರಬೇಕು.

ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್.ಶೈಕ್ಷಣಿಕ ಅಂಕಪಟ್ಟಿಗಳು (PUC/Degree).ಬ್ಯಾಂಕ್ ಪಾಸ್ ಬುಕ್ ಅಥವಾ ರದ್ದಾದ ಚೆಕ್ (Cancelled Cheque).ವಿಳಾಸದ ಪುರಾವೆ.
ಪೊಲೀಸ್ ತಪಾಸಣಾ ಪ್ರಮಾಣ ಪತ್ರ (Police Verification Certificate).ಇತ್ತೀಚಿನ ಭಾವಚಿತ್ರ.
ಆಸಕ್ತರು ಆನ್ ಲೈನ್ ಮೂಲಕ ಈ ಕೆಳಗಿನ ಹಂತಗಳಲ್ಲಿ ಅರ್ಜಿ ಸಲ್ಲಿಸಬಹುದು:ವೆಬ್ ಸೈಟ್: ಗ್ರಾಮ ಒನ್ ಅಧಿಕೃತ ವೆಬ್ಸೈಟ್ https://www.karnatakaone.gov.in/Public/GramOneFranchiseeTermsKn
ನೋಂದಣಿ: ‘ಈಗಲೇ ನೋಂದಾಯಿಸಿ’ (Register Now) ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆ ನೀಡಿ OTP ಮೂಲಕ ಲಾಗಿನ್ ಆಗಿ.
ಮಾಹಿತಿ ಭರ್ತಿ: ವೈಯಕ್ತಿಕ ವಿವರ, ವಿಳಾಸ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ನಮೂದಿಸಿ.
ದಾಖಲೆ ಅಪ್ ಲೋಡ್: ಸ್ಕ್ಯಾನ್ ಮಾಡಿದ ಆಧಾರ್, ಪ್ಯಾನ್, ಅಂಕಪಟ್ಟಿ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿ.
ಶುಲ್ಕ ಪಾವತಿ: ಅರ್ಜಿ ಶುಲ್ಕವಾಗಿ ₹100 ಪಾವತಿಸಬೇಕು (ಇದು ಮರುಪಾವತಿ ಮಾಡಲಾಗುವುದಿಲ್ಲ).
ಠೇವಣಿ: ನಿಮ್ಮ ಅರ್ಜಿ ಆಯ್ಕೆಯಾದಲ್ಲಿ, ₹5,000 ಭದ್ರತಾ ಠೇವಣಿಯನ್ನು (Refundable Security Deposit) ಪಾವತಿಸಬೇಕಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








