ಸುದ್ದಿಒನ್, ಚಿತ್ರದುರ್ಗ. ಅ.31: ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 35 ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ನೇತೃತ್ವದ ಆಯ್ಕೆ ಸಮಿತಿಯು ವಿಸ್ತøತವಾಗಿ ಚರ್ಚಿಸಿ ಒಟ್ಟು 35 ಜನರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಗೆ ಭಾಜನರಾದವರನ್ನು ನವೆಂಬರ್ 01 ರಂದು ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜರಗುವ ಕನ್ನಡ ರಾಜ್ಯೋತ್ಸವದಂದು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು.
ಪ್ರಶಸ್ತಿಗೆ ಭಾಜನರಾದವರ ವಿವರ ಇಂತಿದೆ :
ರಂಗಭೂಮಿ ಕ್ಷೇತ್ರದಲ್ಲಿ ಚಳ್ಳಕೆರೆ ತಾಲ್ಲೂಕು ಸಿದ್ದೇಶ್ವರನ ದುರ್ಗದ ಕ್ಯಾದಿಗುಂಟೆಯ ಎಸ್.ಬಿ.ನರಸಿಂಹಮೂರ್ತಿ, ಚಿತ್ರದುರ್ಗ ತಾಲ್ಲೂಕಿನ ಎಂ.ಕೆ.ಹಟ್ಟಿಯ ಗದಿಗಯ್ಯ ಕಿತ್ತೂರುಮಠ, ಉಪ್ಪನಾಯಕನಹಳ್ಳಿಯ ಸಿ.ಚಂದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಚಳ್ಳಕೆರೆ ತಾಲ್ಲೂಕಿನ ತ್ಯಾಗರಾಜನಗರದ ಹೆಚ್.ನಾಗೇಂದ್ರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ್, ಹೊಳಲ್ಕೆರೆ ತಾಲ್ಲೂಕಿನ ಕಡೂರು ಗ್ರಾಮದ ಶಿವಪ್ರಕಾಶ್ ಆರ್ ಕುಂಬಾರ, ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಕೆ.ನರಸಿಂಹಪ್ಪ, ಚಳ್ಳಕೆರೆ ತಾಲ್ಲೂಕಿನ ಜಡೇಕುಂಟೆ ಗ್ರಾಮದ ಜಡೇಕುಂಟೆ ಮಂಜುನಾಥ್, ಸಂಗೀತ ಕ್ಷೇತ್ರದದಲ್ಲಿ ಹೊಸುದರ್ಗ ತಾಲ್ಲೂಕಿನ ಹೊನ್ನೇಕೆರೆ ಗ್ರಾಮದ ಹೆಚ್.ಜಿ.ನಾಗರಾಜಪ್ಪ, ಶ್ರೀರಾಂಪುರ ಗ್ರಾಮದ ಜಿ.ಪಿ.ಜಯಪ್ರಕಾಶ್, ಚಿತ್ರದುರ್ಗ ತಾಲ್ಲೂಕಿನ ಐಯ್ಯನಹಳ್ಳಿ ಆಯಿತೋಳು ಗ್ರಾಮದ ಜಿ.ಎನ್.ಗೋಂದಾಳಪ್ಪ, ಚಿತ್ರದುರ್ಗದ ಗೌಸ್‍ಪೀರ್, ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿ ಗ್ರಾಮದ ಮುತ್ತುರಾಜ್, ಜಾನಪದ-ನಗಾರಿ ವಾದ್ಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ವೆಂಕಟೇಶ್ ನಾಯ್ಕ್, ಜಾನಪದ-ಉರುಮೆ, ಕೀಲುಕುದುರೆಯಲ್ಲಿ ಚಿತ್ರದುರ್ಗನಗರದ ಎಂ.ನಿಂಗರಾಜ್, ಕ್ರೀಡೆ-ಯೋಗ ಕ್ಷೇತ್ರದಲ್ಲಿ ಚಿತ್ರದುರ್ಗ ವಿದ್ಯಾನಗರದ ಸುಭದ್ರ ಶಂಕರನಾಥ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಚಿತ್ರದುರ್ಗ ನಗರದ ಯು.ಸತೀಶ ಕುಮಾರ್, ಚಳ್ಳಕೆರೆ ತಾಲ್ಲೂಕಿನ ಕಾಟಪ್ಪನಹಟ್ಟಿಯ ವಿ.ನಾರಾಯಣರಾವ್, ಚಿತ್ರಕಲೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಡಾ.ಡಿ.ಎಸ್.ಶ್ವೇತಾ, ಹೊಸದುರ್ಗ ಕಡಿವಾಣಕಟ್ಟೆ ಗ್ರಾಮದ ಡಾ.ಚಂದ್ರು, ವೈದ್ಯಕೀಯ ಕ್ಷೇತ್ರದಲ್ಲಿ ಚಳ್ಳಕೆರೆಯ ಡಾ.ಎಫ್.ವಿ.ನಂದಿನಿ ಲಾವಣ್ಯ, ಚಿತ್ರದುರ್ಗ ನಗರದ ಟಿ.ಮಂಜುನಾಥ್, ಶಿಕ್ಷಣ ಕ್ಷೇತ್ರದಲ್ಲಿ ಚಿತ್ರದುರ್ಗದ ಸಂಗೇನಹಳ್ಳಿ ಅಶೋಕ್ ಕುಮಾರ್, ಕೂನಬೇವು ಗ್ರಾಮದ ಅನಿತಾ ಲಕ್ಷ್ಮೀ, ಸಮಾಜ ಸೇವೆ ಕ್ಷೇತ್ರದಲ್ಲಿ ಮೊಳಕಾಲ್ಮುರು ತಾಲ್ಲೂಕು ಚಿಕ್ಕೋಬನಹಳ್ಳಿಯ ನಾಗರಾಜ, ಚಿತ್ರದುರ್ಗ ನಗರದ ಡಿ.ಹೆಚ್.ನಟರಾಜ, ಕೃಷಿ ಕ್ಷೇತ್ರದಲ್ಲಿ ಚಳ್ಳಕೆರೆಯ ನರಸಿಂಹಮೂರ್ತಿ, ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಕೆ.ಎಂ.ಕಾಂತರಾಜ್, ಸಂಕೀರ್ಣ ವಿಭಾಗದಲ್ಲಿ ಚಿತ್ರದುರ್ಗ ನಗರದ ಬಿ.ಬಸವರಾಜಪ್ಪ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಚಿತ್ರದುರ್ಗ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಎಸ್.ಸಿದ್ದರಾಜು, ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿ ಅರಳೀಕೆರೆ ಗ್ರಾಮದ ಡಾ.ವಿ.ವೀರಣ್ಣ, ಚಿತ್ರದುರ್ಗ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ.ನಾಗರಾಜ ಶ್ರೇಷ್ಠಿ, ಹಿರಿಯೂರು ತಾಲ್ಲೂಕು ಸೊಂಡೆಕೆರೆ ಗ್ರಾಮದ ಕೆ.ಶಿವಣ್ಣ, ಚಳ್ಳಕೆರೆ ಗಾಂಧಿನಗರದ ಟಿ.ಜೆ.ತಿಪ್ಪೇಸ್ವಾಮಿ, ಚಿತ್ರದುರ್ಗ ನಗರದ ಕೆಳಗೋಟೆಯ ಸಿ.ಪಿ.ಮಾರುತಿ ಸೇರಿದಂತೆ ಒಟ್ಟು 35 ಮಂದಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದ್ದಾರೆ.











