ಬೆಂಗಳೂರು: ಜಾತಿ ಗಣತಿ ಸರ್ವೇ ಆರಂಭವಾಗಿದೆ. ಆದ್ರೆ ಶಿಕ್ಷಕರ ಪಾಡು ಕೇಳೋದು ಯಾರು. ಹೇಳಿದಷ್ಟೇ ಸುಲಭದ್ದಾಗಿಲ್ಲ ಸರ್ವೇ ಮಾಡುವುದು. ಹಳ್ಳಿ ಹಳ್ಳಿಗಳಿಗೆ ಹೋಗಬೇಕು. ಅಲ್ಲಿ ನೆಟ್ವರ್ಕ್ ಸಿಗಲ್ಲ. ನೆಟ್ವರ್ಕ್ ಸರಿ ಇರೋ ಶಿಕ್ಷಕರಿಗೆ ಸರ್ವರ್ ವರ್ಕ್ ಆಗಲ್ಲ. ಶಿಕ್ಷಕರ ಸಂಕಷ್ಟ ಒಂದಿಷ್ಟಲ್ಲ. ಈ ಎಲ್ಲಾ ಸಮಸ್ಯೆಗಳ ನಡುವೆಯೂ ಸರ್ಕಾರ ಸೂಚಿಸಿರುವ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಹಿಂದೂಳಿದ ಆಯೋಗ ಗುಡ್ ನ್ಯೂಸ್ ನೀಡಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಶಿಕ್ಷಕರಿಗೆ ಗೌರವ ಧನ ನೀಡಿದೆ. ರಾಜ್ಯಾದ್ಯಂತ ಸಮೀಕ್ಷೆ ಮಾಡುತ್ತಿರುವ 1 ಲಕ್ಷದ 20,728 ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ 100 ರೂಪಾಯಿ ನಿಗರಿ ಮಾಡಲಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಿಂದುಳಿದ ವರ್ಗಗಳ ಆಯೋಗ 60,36,40000 ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.
ಇದರ ಬೆನ್ನಲ್ಲೇ ಸಮೀಕ್ಷೆಯಲ್ಲಿ ಗೈರಾದವರಿಗೆ ಜಿಲ್ಲಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಕೋಲಾರ ಜಿಲ್ಲೆಯ 6 ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದೆ. ಕೋಲಾರ ಜಿಲ್ಲೆಯಲ್ಲಿ ನಿನ್ನೆ ಬರೋಬ್ಬರಿ 645 ಸಿಬ್ಬಂದಿ ಕರ್ತವ್ಯದಲ್ಲಿ ಭಾಗಿಯಾಗದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ವರದಿಯಾಗಿದೆ. ಎಲ್ಲೆಲ್ಲಿ ಎಷ್ಟು ಶಿಕ್ಷಕರು ಗೈರಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಕೋಲಾರ ಜಿಲ್ಲೆಯ ಭಾಗದಲ್ಲಿ 179 ಶಿಕ್ಷಕರು ಬಂಗಾರಪೇಟೆ ಭಾಗದಲ್ಲಿ 96 ಶಿಕ್ಷಕರು, ಕೆಜಿಎಫ್ ಭಾಗದಲ್ಲಿ 88 ಶಿಕ್ಷಕರು, ಮಾಲೂರು ಭಾಗದಲ್ಲಿ 141 ಶಿಕ್ಷಕರು, ಮುಳಬಾಗಿಲು ಕ್ಷೇತ್ರದಲ್ಲಿ 127 ಶಿಕ್ಷಕರು, ಹಾಗೇ ಶ್ರೀನಿವಾಸಪುರ ಕ್ಷೇತ್ರದಲ್ಲಿ 14 ಶಿಕ್ಷಕ ಸಿಬ್ಬಂದಿಗಳು ಸಮೀಕ್ಷೆಗೆ ಗೈರಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















