Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರ್ಥಿಕ ಪ್ರಗತಿಯ ಸ್ಥಿರತೆ ಕಾಪಾಡಿಕೊಳ್ಳಲು ಉತ್ತಮ ಬಜೆಟ್ : ಕೆ.ಟಿ.ಕುಮಾರಸ್ವಾಮಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಫೆ, 01 : ಕೇಂದ್ರದ ಬಜೆಟ್ ರಾಷ್ಟ್ರದ ಆರ್ಥಿಕ ಪ್ರಗತಿಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಂದು ಉತ್ತಮ ಹೆಜ್ಜೆಯನ್ನು ಇಟ್ಟಿದೆ ಎನ್ನಬಹುದಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನ್ನು ವೀಕ್ಷಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿರುವ ವಾರ್ಷಿಕ ಬಜೆಟ್ ವಿಕಸಿತ್ ಭಾರತ್ ಎಂಬ ಥೀಮ್ ಹೊಂದಿದೆ. ಸರ್ಕಾರ ಸುಧಾರಣಾ ಘೋಷಣಾ ರೂಪದಂತೆ ಮುಂದುವರಿಯುತ್ತಿದೆ. ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. 2025ರಲ್ಲಿ 350 ಕ್ಕೂ ಹೆಚ್ಚು ಸುಧಾರಣೆಗಳನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಬಜೆಟ್ ಬಂಡವಾಳ ವೆಚ್ಚ ರೂ.12.20 ಲಕ್ಷ ಕೋಟಿ ಆಗಿದ್ದು 2026-27 ರ ಹಣಕಾಸಿನ ಕೊರತೆಯನ್ನು ಶೇ.4.3 ಎಂದು ಅಂದಾಜಿಸಲಾಗಿದೆ. 2027 ರಲ್ಲಿ ತೆರಿಗೆ ಸಂಗ್ರಹ ರೂ.28.70 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ಮತ್ತು ಕಡಿತಗಳನ್ನು ಘೋಷಿಸಲಾಗಿದೆ. ಇದರಿಂದಾಗಿ, ಹಲವು ವಸ್ತುಗಳ ಬೆಲೆಗಳು ಕಡಿಮೆಯಾಗುತ್ತವೆ. ಇತರ ಕೆಲವು ವಸ್ತುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದರು.

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ತೆರಿಗೆಯ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳು ಆಗಿರುವುದಿಲ್ಲ ಆದರೆ ತೆರಿಗೆ ಪಾವತಿ ವಿಧಾನದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಇದು ಒಂದು ದೀರ್ಘಕಾಲದ ಯೋಜನೆ ಎಂದಿದೆ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಇದು ದೀರ್ಘಕಾಲದ ವಿಕಸಿತ ಭಾರತದ ಪರಿಕಲ್ಪನೆಯಾಗಿದೆ.ಕೇಂದ್ರ ಸರ್ಕಾರದ ಹಣಕಾಸು ಸಚಿವರು ಮಂಡಿಸಿದ ಇಂದಿನ ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಕಾಪಾಡಲು ವಿಕಸಿತ ಭಾರತ ಸಂಕಲ್ಪಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿರುವುದರಿಂದ ರಾಷ್ಟ್ರದಲ್ಲಿ ವಿಜ್ಞಾನ ತಂತ್ರಜ್ಞಾನದ ಪ್ರಗತಿ ಆಗಲಿದೆ ವಿದೇಶಿ ಶಿಕ್ಷಣ ಪಡೆಯಲು ಇಚ್ಚಿಸುವ ಭಾರತೀಯರಿಗೆ ಅನುಕೂಲ ಮಾಡಿದೆ ಷೇರುದಾರರು ಪಡೆಯುವ ಡಿವಿಡೆಂಟ್ ಮೇಲಿನ ಆದಾಯಕ್ಕೆ ತೆರಿಗೆಯ ವಿನಾಯಿತಿ ನೀಡಿರುವುದರಿಂದ ಉದ್ಯಮ ಅಥವಾ ಇತರ ಬಂಡವಾಳ ಹೂಡಿಕೆಗೆ ಹೆಚ್ಚಿನ ಉತ್ತೇಜನವಾಗಲಿದೆ ಸೆಣಬು ಬ್ಯಾಟರಿ ಬಯೋಗ್ಯಾಸ್ ಚರ್ಮ ಮುಂತಾದ ಸ್ಥಳೀಯ ಉತ್ಪಾದನಾ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿತ ಮಾಡಿರುವುದರಿಂದ ಆಂತರಿಕ ಉತ್ಪಾದನೆಗೆ ಹೆಚ್ಚಿನ ಬೆಂಬಲ ಸಹಕಾರ ಆಗಲಿದೆ. ಬಜೆಟ್‌ನಲ್ಲಿ ಕೃಷಿ ಸಾರಿಗೆ ಶಿಕ್ಷಣ ಇಂಧನ ಆರೋಗ್ಯ ಗ್ರಾಮೀಣಾಭಿವೃದ್ಧಿಗೆ ಪ್ರಾಮುಖ್ಯತೆ ನೀಡಿರುವುದರಿಂದ ವಿಕಸಿತ ಭಾರತದ ಕಲ್ಪನೆ ಅನುಷ್ಠಾನಕ್ಕೆ ಇದು ಅಡಿಪಾಯವಾಗಲಿದೆ ಎಂದಿದ್ದಾರೆ.

ಇಂದು ಮಂಡನೆಯಾಗಿರುವ ಬಜೆಟ್ ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಗತಿದಾಯಕ ಪರಿಣಾಮ ಬೀರಲಿದೆ ತಕ್ಷಣ ಗೊಳಿಸಲು ಹೆಚ್ಚಿನ ಆದ್ಯತೆ ನೀಡಿದೆ ಆರ್ಥಿಕ ಪ್ರಗತಿಯ ವೇಗಕ್ಕೆ ಹಲವಾರು ವ್ಯಕ್ತಿಯ ಶಿಸ್ತು ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಜಿಎಸ್‌ಟಿಯ ಹಂಚಿಕೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ ಇದರಿಂದಾಗಿ ಭಾರತದ ವಿಕಸಿತ ಕಲ್ಪನೆಯ ಕನಸು ನನಸಾಗಲು ಅಲ್ಪಾವಧಿ ಮತ್ತು ದೀರ್ಘಾವಧಿ ಹಲವಾರು ಗುರಿಗಳನ್ನು ಹೊಂದಿದ ಒಂದು ವಿಶೇಷ ಬಜೆಟ್ ಆಗಿದೆ ಕೇಂದ್ರದ ಬಜೆಟ್ ರಾಷ್ಟ್ರದ ಆರ್ಥಿಕ ಪ್ರಗತಿಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಂದು ಉತ್ತಮ ಹೆಜ್ಜೆಯನ್ನು ಇಟ್ಟಿದೆ ವಿಕಸಿತ ಭಾರತದ ಕಡೆಗೆ ದಾಪುಗಾಲು ಹಾಕುತ್ತಿರುವ ಬಜೆಟ್ ಆಗಿದೆ. ಎಂದು ಕುಮಾರಸ್ವಾಮಿ ತಿಳಿಸಿದರು.

ಸೌರಶಕ್ತಿ ಮತ್ತು ಚರ್ಮದ ಉತ್ಪನ್ನಗಳ ಬೆಲೆಗಳು, ಬೀಡಿ ಮತ್ತು ಬ್ಯಾಟರಿಗಳ ಬೆಲೆಗಳು, ಸಿಎನ್‌ಜಿ ಮತ್ತು ಜೈವಿಕ ಅನಿಲದ ಬೆಲೆಗಳು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳ ಬೆಲೆಗಳು, ಶೂ ಮತ್ತು ಬಟ್ಟೆ ರಫ್ತು, 7 ಗಂಭೀರ ಕಾಯಿಲೆಗಳಿಗೆ ಔಷಧಗಳು, ಮೀನುಗಾರರಿಗೆ ರಫ್ತು ಅಗ್ಗವಾಗಿದೆ. ವಿಮಾನ ಸಲಕರಣೆಗಳ ಬೆಲೆಗಳು ವಿದೇಶದಲ್ಲಿ ಅಧ್ಯಯನ ಮತ್ತು ವಿದೇಶ ಪ್ರಯಾಣದ ವೆಚ್ಚ ಕಡಿಮೆಯಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯ ಮೇಲಿನ ಟಿಸಿಎಸ್ ಅನ್ನು 5% ರಿಂದ 2% ಕ್ಕೆ ಇಳಿಸಲಾಗಿದೆ. ಫಾರ್ವರ್ಡ್ ಟ್ರೇಡಿಂಗ್ ಖನಿಜಗಳು ಸ್ಕ್ರ್ಯಾಪ್ ಮದ್ಯ, ಸಿಗರೇಟ್ ಬೆಳೆಗಳು ಹೆಚ್ಚಾಗಲಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಖಂಜಾಚಿ ಮಾಧುರಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮುಖಂಡರಾದ ಸಿದ್ದಾರ್ಥ ಗುಂಡಾರ್ಪಿ, ಮೋಹನ್ ಕುಮಾರ್ ವಕ್ತಾರ ನಾಗರಾಜ್ ಬೇದ್ರೇ, ಶಂಭು, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಜಿಲ್ಲಾ ಕಾರ್ಯದರ್ಶಿ ರೇಖಮ್ಮ, ನಗರ ಯುವ ಘಟಕದ ಅಧ್ಯಕ್ಷ ವಸಂತಚಾರ್, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್, ಮಹಿಳಾ ಯುವ ಮೋರ್ಚಾದ ಅಧ್ಯಕ್ಷ ಕವಿತ ಜವಳಿ, ಬಸಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now