Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 13,706 RRB ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

---Advertisement---

ದೆಹಲಿ.ಸೆಪ್ಟೆಂಬರ್.02: ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRB) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಿಆರ್‌ಪಿ ಆರ್‌ಆರ್‌ಬಿ-XV ಅಧಿಸೂಚನೆ ಹೊರಡಿಸಿದೆ. ಒಟ್ಟು 28 ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಕ್ಕೂ ಅಧಿಕ ಹುದ್ದೆಗಳನ್ನು ಈ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳ ವಿವರ

ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್): 8,183 ಹುದ್ದೆಗಳು

ಆಫೀಸರ್ ಸ್ಕೇಲ್-1 (ಪಿಒ / ಅಸಿಸ್ಟೆಂಟ್ ಮ್ಯಾನೇಜರ್): 4,256 ಹುದ್ದೆಗಳು

ಆಫೀಸರ್ ಸ್ಕೇಲ್-2 (ಜನರಲ್ ಬ್ಯಾಂಕಿಂಗ್ ಹಾಗೂ ಸ್ಪೆಷಲಿಸ್ಟ್ ಆಫೀಸರ್): 1,047 ಹುದ್ದೆಗಳು

ಆಫೀಸರ್ ಸ್ಕೇಲ್-3 (ಸೀನಿಯರ್ ಮ್ಯಾನೇಜರ್): 220 ಹುದ್ದೆಗಳು

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆಗೆ 279 ಹಾಗೂ ಆಫೀಸರ್ ಸ್ಕೇಲ್-1 ಹುದ್ದೆಗೆ 300 ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆ

ಕ್ಲರ್ಕ್ ಮತ್ತು ಆಫೀಸರ್ ಸ್ಕೇಲ್-1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಸ್ಥಳೀಯ ಭಾಷೆಯ ಜ್ಞಾನ ಮತ್ತು ಕಂಪ್ಯೂಟರ್ ಕಾರ್ಯಾಚರಣೆ ತಿಳಿದಿರುವುದು ಅಪೇಕ್ಷಣೀಯ.

ಆಫೀಸರ್ ಸ್ಕೇಲ್-2 ಮತ್ತು 3: ಶೇಕಡಾ 50 ಅಂಕಗಳೊಂದಿಗೆ ಪದವಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪರಿಣತಿ (ಐಟಿ, ಸಿಎ, ಲಾ, ಮಾರ್ಕೆಟಿಂಗ್ ಇತ್ಯಾದಿ) ಮತ್ತು ಬ್ಯಾಂಕಿಂಗ್/ಹಣಕಾಸು ಕ್ಷೇತ್ರದಲ್ಲಿ ಅಗತ್ಯ ಕಾರ್ಯಾನುಭವ ಇರಬೇಕು.

ವಯೋಮಿತಿ

ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ 18 ರಿಂದ 28 ವರ್ಷ.

ಆಫೀಸರ್ ಸ್ಕೇಲ್-1 ಹುದ್ದೆಗಳಿಗೆ 18 ರಿಂದ 30 ವರ್ಷ.

ಆಫೀಸರ್ ಸ್ಕೇಲ್-2 ಹುದ್ದೆಗಳಿಗೆ 21 ರಿಂದ 32 ವರ್ಷ.

ಆಫೀಸರ್ ಸ್ಕೇಲ್-3 ಹುದ್ದೆಗಳಿಗೆ 21 ರಿಂದ 40 ವರ್ಷ.

ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ

ಕ್ಲರ್ಕ್ ಹುದ್ದೆ: ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ (ಯಾವುದೇ ಸಂದರ್ಶನ ಇರುವುದಿಲ್ಲ).

ಆಫೀಸರ್ ಸ್ಕೇಲ್-1: ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ.

ಆಫೀಸರ್ ಸ್ಕೇಲ್-2 ಮತ್ತು 3: ಏಕೈಕ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 1, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 21, 2026

ಪಿಒ (ಆಫೀಸರ್ ಸ್ಕೇಲ್-1) ಪ್ರಿಲಿಮ್ಸ್ ಪರೀಕ್ಷೆ: ನವೆಂಬರ್ 21 ಮತ್ತು 22, 2026

ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ: ಡಿಸೆಂಬರ್ 6, 12 ಮತ್ತು 13, 2026

ಆಫೀಸರ್ ಸ್ಕೇಲ್-2 ಮತ್ತು 3 ಪರೀಕ್ಷೆ: ಡಿಸೆಂಬರ್ 20, 2026

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಐಬಿಪಿಎಸ್ ಅಧಿಕೃತ ವೆಬ್‌ಸೈಟ್ ಆದ www.ibps.in ಗೆ ಭೇಟಿ ನೀಡಬಹುದು.

Join WhatsApp

Join Now

Join Telegram

Join Now