Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ; ಇಂದಿನ ದರ ಎಷ್ಟಿದೆ..?

---Advertisement---

ಬೆಂಗಳೂರು; ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನದ ಬೆಲೆ ಏರಿಕೆಯತ್ತಲೇ ಸಾಗುತ್ತಾ ಇತ್ತು. ಚಿನ್ನದ ಮೇಲಿನ ಆಸೆಯನ್ನೇ ಬಿಟ್ಟು ಬಿಡಬೇಕು ಎನ್ನುವಷ್ಟು. ಸದ್ಯ ಎರಡು ದಿನಗಳಿಂದೀಚೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು 22 ಕ್ಯಾರಟ್ ನ ಒಂದು ಗ್ರಾಂಗೆ 35 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 8,720 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 33 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ 9,518 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 87,200 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 95,180 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 87,200 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 87,350 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 83,480 ರೂಪಾಯಿ ಇದೆ. ಅಮೆರಿಕಾದಲ್ಲಿ 83,170 ಇದೆ. ಸೌದಿಯಲ್ಲಿ 83,630 ಇದೆ.

 

ಬೆಳ್ಳಿ ಬೆಲೆಯಲ್ಲೂ ಎರಡು ದಿನಕ್ಕೆ 20 ಪೈಸೆಯಷ್ಟು ಇಳಿಕೆಯಾಗಿದೆ. ಹೀಗಾಗಿ ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 99.80 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 9,980 ರೂಪಾಯಿ ಆಗಿದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 9,980 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 10,980 ರೂಪಾಯಿ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment