Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನನ್ನ ಬಳಿ ಇರುವ ದಾಖಲೆ ಕೊಟ್ಟರೆ ಇನ್ನು 6-7 ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ : ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

---Advertisement---

 

ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿ ಬಂದ ಮರುದಿನವೇ ಸುದ್ದಿಗೋಷ್ಟಿ ನಡೆಸಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.

ವಿಚಾರಣೆ ಮಾಡುವುದಕ್ಕೆ ಅನುಮತಿ‌ಕೊಡಿ ಅಂತ ಪತ್ರ ಬರೆದಿದ್ದಾರಲ್ಲ ಚಂದ್ರಶೇಖರ್ ಈ ಪತ್ರದ ಮಾಹಿತಿ ಒಂದೇ ಒಂದು ಖಾಸಗಿ ಚಾನೆಲ್ ಗೆ ಹೋಗಿರುವುದು. ಎಲ್ಲಾ ಚಾನೆಲ್ ಗಳಿಗೂ ಮಾಹಿತಿ ಸೋರಿಕೆಯಾಗಿಲ್ಲ. ಐಜಿಪಿ ಕಚೇರಿ, ರಾಜ್ಯಪಾಲರ ಕಚೇರಿ ಮಧ್ಯದಲ್ಲಿ ನಡೆದಿದೆ. ಇಲ್ಲಿ ನಿರಂತರವಾಗಿ ಮೂರು ತಿಂಗಳಿಂದ ಏನು ಹಲವಾರು ಪ್ರಕರಣಗಳು ನಡೆಯುತ್ತಾ ಇದಾವೆ. ಆ ಪ್ರಕರಣಗಳಿಗೆ ಸಂಬಂಧಿಸಿದಂತ ಡಿಜಿ ಕಚೇರಿಗೆ ದೂರುಗಳು ಕೊಟ್ಟ ಮೇಲೆ ಅವರು ಯಾವ ಚಾನೆಲ್ ಗಳಿಗೆ ಹೋಗಿ ಕೂರುತ್ತಾ ಇದಾರೆ. ಯಾವ ಚಾನೆಲ್ ನಲ್ಲಿ ಬಟ್ಟೆ ಕಟ್ಟಿ ಪ್ರತಿದಿನ ಮೂರು ಗಂಟೆ ನಾಲ್ಕು ಗಂಟೆ ಪ್ರಚಾರ ಮಾಡಿಕೊಂಡು ಬಂದ್ರು. ಇಲ್ಲಿ ನೀವೂ ಸೋರಿಕೆ ಮಾಡಿಕೊಂಡು ಬಂದು, ರಾಜ್ಯಪಾಲರ ಕಚೇರಿಯನ್ನ ಸರ್ಚ್ ಮಾಡುವುದಕ್ಕೆ ಅನುಮತಿ‌ಕೊಡಿ ಅಂದ್ರೆ ಏನು ಅರ್ಥ. ಈ ಸರ್ಕಾರ ಹೇಗೆ ಆಡಳಿತ ನಡೆಸುತ್ತಾ ಇದೆ.

ಈ ಥರ ಆದ್ರೆ ಇದು ಇಲ್ಲಿಗೆ ನಿಲ್ಲಲ್ಲ. ಹೇಳುದ್ರಲ್ಲ ಸಿದ್ದರಾಮಯ್ಯ ಅವರು 40% ಸರ್ಕಾರ ಅಂತ ಹೇಳಿ. ಜನಗಳ ಮುಂದೆ ಹೇಳಿ ಬಂದಿದ್ರಲ್ಲ, ಆದ್ರೆ ಈಗ ಅವರ ಪಕ್ಷದವರೇ ಹೇಳುತ್ತಾರೆ. ಇವರು ಬಂದ ಮೇಲೆ 40%ಗೂ ಜಾಸ್ತಿಯಾಗಿದೆ ಅಂತ. ಇದಕ್ಕೆ ಜನ ನಿಮಗೆ ಅಧಿಕಾರ ಕೊಟ್ರಾ ಸಿದ್ದರಾಮಯ್ಯ ಅವರೇ. ನಾನು ಏನು ಎಲ್ಲಿಯೂ ಓಡಿ ಹೋಗೊಲ್ಲ. ನನ್ನ ಹತ್ತಿರ ಇರುವ ಡಾಕ್ಯುಮೆಂಟ್ ಬಿಟ್ರೆ, ಇನ್ನು ಆರರಿಂದ ಏಳು ಜನ ಮಂತ್ರಿಗಳು ರಾಜೀನಾಮೆ ಕೊಡಬೇಕಾಗುತ್ತದೆ.

ಬಿಡಣಾ ಬಿಡಣಾ, ಹೆದರಿಕೊಂಡು ಹೋಗಲ್ಲ. ಕುಮಾರಸ್ವಾಮಿ ಏನು ಅನ್ನೋದು, ದೇವೇಗೌಡರ ಕುಟುಂಬ ಕೆದಕಿದರೆ, ದೇವೇಗೌಡರ ಕಣ್ಣಲ್ಲಿ ನೀರು ಹಾಕಿದರೆ, ನಾವ್ಯಾರು ತೀರ್ಪು ಕೊಡೋರಲ್ಲ, ನಾವ್ಯಾರು ಶ್ರಮ ಹಾಕಬೇಕಿಲ್ಲ. ಯಾವ ದೇವೇಗೌಡ್ರು ಶಿವನನ್ನು ನಂಬಿ ಬದುಕಿದ್ದಾರೆ, ಆ ವ್ಯಕ್ತಿಯ ಕಣ್ಣಲ್ಲಿ ನೀರು ಯಾಕೆ ಬಿದ್ದಿದೆ, ನೋವು ಏನಿದೆ ಅದನ್ನ ನೋಡಿ ಆ ಭಗವಂತನೆ ಶಿಕ್ಷೆ ನೀಡುತ್ತಾನೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment