Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಿಲ್ಲಿ ವಿನ್ನರ್.. ರಕ್ಷಿತಾ ರನ್ನರ್ : ರಕ್ಷಿತಾರ ಕ್ಯೂಟ್ ಮಾತಿಗೆ ಸುದೀಪ್ ಖುಷಿ

---Advertisement---

ಈ ಬಾರಿಯ ಬಿಗ್ ಬಾಸ್ ನಲ್ಲಿ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದು, ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಸುದೀಪ್ ಅವರು ಇಬ್ಬರ ಬಗ್ಗೆಯೂ ಒಂದೊಳ್ಳೆ ಮಾತನ್ನಾಡಿದರು. 5 ರಿಯಾಲಿಟಿ ಶೋ ನಂತರ ದೊಡ್ಡ ವೇದಿಕೆಗೆ ಬಂದು ಬಿಗ್ ಬಾಸ್ ವೇದಿಕೆಯಲ್ಲಿ ಗಿಲ್ಲಿ ಗೆದ್ದಿದ್ದಾರೆ. ಮೊದಲ ಬಾರಿ ರಿಯಾಲಿಟಿ ಶೋಗೆ ಬಂದು, ಮೊದಲ ಬಾರಿಗೆ ಗೆದ್ದು, ಎಂಥೆಂಥವರಿಗೋ ಸ್ಪರ್ಧೆ ನೀಡಿ, ಇಂದು ಗೆದ್ದಿದ್ದಾರೆ ಎಂದು ರಕ್ಷಿತಾ ಬಗ್ಗೆಯೂ ಹೇಳಿದ್ದಾರೆ.

ಇನ್ನು ಗಿಲ್ಲಿಗೆ ಅಶ್ವ ಸೂರ್ಯ ವತಿಯಿಂದ 50 ಲಕ್ಷ ರೂಪಾಯಿ, ಮಾರುತಿ ಸುಜುಕಿ ಕಡೆಯಿಂದ ಕಾರು ಬಹುಮಾನವಾಗಿ‌ ಸಿಕ್ಕಿದೆ. ಅಷ್ಟೇ ಅಲ್ಲ ಸುದೀಪ್ ಅವರ ಕಡೆಯಿಂದ ಗಿಲ್ಲಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಗಿಲ್ಲಿಯ ತಂದೆ ತಾಯಿ ಕೂಡ ತುಂಬಾನೇ ಖುಷಿಯಾದರು. ಜನರಿಗೆ ಧನ್ಯವಾದ ತಿಳಿಸಿದರು. ನಿಜವಾಗ್ಲು ಸಖತ್ ಖುಷಿಯಾಗಿದೆ. ಇಷ್ಟು ದೂರ ಕರೆದುಕೊಂಡು ಬರ್ತೀರಾ ಅಂದುಕೊಂಡಿರಲಿಲ್ಲ. ಗೆದ್ದಾಗ ಇಗ್ಗಲ್ಲ ಸೋತಾಗ ಕುಗ್ಗಲ್ಲ ಎಂದು ಗಿಲ್ಲಿ ಕೂಡ ಜನರಿಗೆ ಹೇಳಿದ್ದಾರೆ.

 

ರನ್ನರ್ ಅಪ್ ಆದಂತ ರಕ್ಷಿತಾಗೆ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ರಕ್ಷಿತಾಗೆ 20 ಲಕ್ಷ ರೂಪಾಯಿ. ಜ್ಯಾರ್ ಆಪ್ ಕಡೆಯಿಂದ 5 ಲಕ್ಷ ರೂಪಾಯಿ ಬಹುಮಾನವಾಗಿ ನೀಡಿದ್ದಾರೆ. ಇದೇ ವೇಳೆ ಮಾತನ್ನಾಡಿದ ರಕ್ಷಿತಾ, ನಂಗೆ ದೊಡ್ಡ ದೊಡ್ಡ ಮಾತನ್ನಾಡುವುದಕ್ಕೆ ಬರುವುದಿಲ್ಲ. ಇಲ್ಲಿಯ ತನಕ ತಂದು ನಿಲ್ಲಿಸಿದ್ದೀರಿ ಅಲ್ವಾ ತಮಬಾ ಥ್ಯಾಂಕ್ಸ್. ಎರಡು ಟ್ರೋಫಿ ಇದ್ರೆ ನಂಗು ಒಂದು ಸಿಕ್ತಾ ಇತ್ತು ಎಂದು ಖುಷಿ ಪಟ್ಟಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now