Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಧರ್ಮಸ್ಥಳ ತಲೆಬುರುಡೆಗಳ ಎಫ್ಎಸ್ಎಲ್ ವರದಿ ಲಭ್ಯ : ಸುಳ್ಳು ಹೇಳಿದರಾ ಚಿನ್ನಯ್ಯ..?

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನ ಹೂತು ಹಾಕಿದ್ದೀನಿ ಎಂದಿದ್ದ ಚಿನ್ನಯ್ಯನ ಮಾತಿನಂತೆ ಎಸ್ಐಟಿ ಕೂಡ ಹುಡುಕಾಟ ನಡೆಸಿತ್ತು. ಒಂದಷ್ಟು ತಲೆಬುರುಡೆ, ಅಸ್ಥಿಪಂಜರಗಳು ಸಹ ಸಿಕ್ಕಿದ್ದವು. ಆ ಬುರುಡೆಗಳನ್ನ ಎಫ್ಎಸ್ಎಲ್ ವರದಿಗೆ ಕಳುಹಿಸಿತ್ತು. ಇದೀಗ ತಲೆ ಬುರುಡೆ ವರದಿ ಬಂದಿದೆ. ಆ ವರದಿಯಲ್ಲಿ ತಲೆ ಬುರುಡೆ ಯಾರದ್ದು ಎಂಬ ವಿಷಯವು ಬಹಿರಂಗವಾಗಿದೆ.

ಎಫ್ಎಸ್ಎಲ್ ವರದಿಯಲ್ಲಿ, ಬಂಗ್ಲೆಗುಡ್ಡದಲ್ಲಿ ಸಿಕ್ಕಂತ ತಲೆಬುರುಡೆ ಹಾಗೂ ಅಸ್ಥಿಪಂಜರ ಮಹಿಳೆಯರದ್ದಲ್ಲ ಪುರುಷರದ್ದು ಎಂಬುದು ಗೊತ್ತಾಗಿದೆ. ಈ ವರದಿಯನ್ನು ನೋಡಿದ ಬಳಿಕ ಚಿನ್ನಯ್ಯ ಹೇಳಿದ ಮಾತು ಸುಳ್ಳು ಎಂಬಂತೆ ಆಗಿದೆ. ಚಿನ್ನಯ್ಯ ಕೋರ್ಟ್ ಗೆ ಹಿಡಿದುಕೊಂಡು ಬಂದಿದ್ದ ತಲೆ ಬುರುಡೆ ಕೂಡ ಪುರುಷರದ್ದೇ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಧರ್ಮಸ್ಥಳದಲ್ಲಿ ಸಾಕಷ್ಟು ಅತ್ಯಾಚಾರ ನಡೆದಿದೆ. ಆ ಮಹಿಳೆಯರನ್ನ ಕೊಲೆ ಮಾಡಲಾಗಿತ್ತು. ಬಳಿಕ ಆ ಶವಗಳನ್ನೆಲ್ಲ ನಾನೇ ಹೂತು ಹಾಕಿದ್ದೇನೆ ಎಂಬ ಹೇಳಿಕೆಯನ್ನ ನೀಡಲಾಗಿತ್ತು. ಇದೀಗ ಚಿನ್ನಯ್ಯ ಕೋರ್ಟ್‌ ಗೆ ತಂದುಕೊಟ್ಟ ಬುರುಡೆಯೇ 40 ವರ್ಷದ ಆಸುಪಾಸಿನ ಪುರುಷನದ್ದು ಎಂಬ ವರದಿ ಬಂದಿದೆ. ಇನ್ನು ಉತ್ಖನನ ನಡೆಯುವಾಗ 6ನೇ ಸ್ಪಾಟ್ ನಲ್ಲಿ ಸಿಕ್ಕ ಮೂಳೆಗಳು 25 ವರ್ಷಗಳ ಆಸುಪಾಸಿನ ಯುವಕನದ್ದಾಗಿದೆ. 15ನೇ ಸ್ಪಾಟ್ ನಲ್ಲಿ ಸಿಕ್ಕ ಮೂಳೆ ಕೂಡ ಪುರಿಷನದ್ದೇ ಆಗಿದೆ. ಅದು 30-39 ವರ್ಷ ಆಸುಪಾಸಿನ ಪರ ಷನ ದೇಹದ್ದಾಗಿದೆ. ದೇಹದ ಮೇಲೆ ಹಲ್ಲೆಯಾಗಿರುವ ಯಾವ ಕುರುಹುಗಳು ಕೂಡ ಪತ್ತೆಯಾಗಿಲ್ಲ. ವಿಷ ಏನಾದ್ರೂ ಸೇವಿಸಿದ್ದಾರಾ ಎಂಬ ಪರೀಕ್ಷೆಯನ್ನು ಮುಂದುವರೆಸಿದ್ದಾರೆ. ಆದ್ರೆ ಚಿನ್ನಯ್ಯ ಹೇಳಿದ ಮಾಹಿತಿ ಸುಳ್ಳು ಎಂಬುದು ಈ ವರದಿಯಿಂದ ಗೊತ್ತಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now