ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಚಿತ್ರದುರ್ಗ ರೋಟರಿ ಕ್ಲಬ್ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ಇಂದು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್ಆರ್ ಬಿಎಂಎಸ್ ರೋಟರಿ ಸೇವಾ ಭವನದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಹಾಗೂ ಮ್ಯಾಮೋಗ್ರಫಿ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗೌರ್ನರ್ ರೊ| ಎಂ.ಕೆ. ರವೀಂದ್ರ ಅವರು ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಸೇವೆಯನ್ನು ನೀಡುತ್ತಿದ್ದು ವಿಶ್ವದ ಮನ್ನಣೆಯನ್ನು ಗಳಿಸಿದೆ. ರೋಟರಿ ಕ್ಲಬ್ ಸದಸ್ಯರುಗಳ ಪರಿಶ್ರಮದಿಂದ ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಯಾಲಿಸಿಸ್ ಕೇಂದ್ರ ಹಾಗೂ ಫಿಸಿಯೋಥೆರಪಿ ಸೇವೆಗಳು ಸಾರ್ವಜನಿಕರ ಸೇವೆಗಳಿಗೆ ಸಿದ್ಧವಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಭಾಗ್ಯಲಕ್ಷ್ಮಿಮೂರ್ತಿ ಮಾತನಾಡಿ ರೋಟರಿ ಕ್ಲಬ್ ಚಿತ್ರದುರ್ಗ ಸಂಸ್ಥೆಯ ವತಿಯಿಂದ ಅನೇಕ ಸಾಮಾಜಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಚಿತ್ರದುರ್ಗ ನಗರದಲ್ಲಿ ಆಯೋಜನೆ ಮಾಡುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ರೋಟರಿ ಕ್ಲಬ್ ಪಬ್ಲಿಕ್ ಇಮೇಜ್ ಮುಖ್ಯಸ್ಥರಾದ ರೊ| ಯೋಗೀಶ್ ಸಹ್ಯಾದ್ರಿ ಅವರು ಹೃದಯ ರೋಗ ತಪಾಸಣೆ ಮತ್ತು ಮ್ಯಾಮೋಗ್ರಫಿ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಒಟ್ಟು 125 ಓಪಿಡಿ ಹಾಗೂ 25 ಜನರು ಮ್ಯಾಮೋಗ್ರಫಿ ಸೇವೆಯ ಉಪಯೋಗವನ್ನು ಪಡೆದುಕೊಂಡರು ಎಂದು ತಿಳಿಸಿದ್ದಾರೆ.
ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಭಾಗ್ಯಲಕ್ಷ್ಮಿಮೂರ್ತಿ ಹಾಗೂ ಕಾರ್ಯದರ್ಶಿ ರೊ| ಅನುರಾಧ ವಿಶ್ವನಾಥ್, ಪಬ್ಲಿಕ್ ಇಮೇಜ್ ಮುಖ್ಯಸ್ಥರಾದ ರೊ| ಯೋಗೀಶ್ ಸಹ್ಯಾದ್ರಿ, ಕ್ಲಬ್ ಟ್ರೈನರ್ ರೊ| ಬಿ.ಎಸ್.ಕನಕರಾಜ್, ಕ್ಲಬ್ ಸರ್ವಿಸ್ ಛೇರ್ಮನ್ ರೊ| ಎಂ.ಆರ್. ಲಕ್ಷ್ಮಣ್, ಮಾಜಿ ರೋಟರಿ ಅಧ್ಯಕ್ಷ ರೊ| ಜಿ.ಎ. ವಿಶ್ವನಾಥ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















