Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸೆಪ್ಟೆಂಬರ್ 14 ರಂದು ಧ್ವನಿ, ಮಾತು,ಗಂಟಲಿನ ಸಮಸ್ಯೆಗೆ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.10 : ಧ್ವನಿ, ಮಾತು,ಗಂಟಲಿನ ಉಸಿರಾಟದ ವಾಯುಮಾರ್ಗ (ವಾತಾಯನ) ಮತ್ತು ನುಂಗುವಿಕೆಯ ಅಸ್ವಸ್ಥತೆ ಇರುವ ರೋಗಿಗಳಿಗೆ ಸೆಪ್ಟೆಂಬರ್ 14 ರಂದು ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.

ನಗರದ ಖ್ಯಾತ ವೈದ್ಯರಾದ ಡಾ. ಪ್ರಹ್ಲಾದ ಎನ್. ಬಿ., ಇವರ ನೇತೃತ್ವದಲ್ಲಿ ಅನುಭವಿ ತಜ್ಞರ ತಂಡದ ನೆರವಿನೊಂದಿಗೆ
ಕರ್ನಾಟಕ ಕಿವಿ, ಮೂಗು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ರಿ) (KENT & RC) ಮತ್ತು ಕರ್ನಾಟಕ ಪ್ರಗತಿಶೀಲ ವಾಕ್ ಮತ್ತು ಶ್ರವಣ ಸಂಸ್ಥೆ (KASHI) ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 14 ರ ಭಾನುವಾರದಂದು
ಧ್ವನಿ, ಮಾತು, ವಾಯುಮಾರ್ಗ(ವಾತಾಯನ) ಮತ್ತು ನುಂಗುವಿಕೆಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಶಿಬಿರವನ್ನು ಸಂಸ್ಥೆಯ ಕಾರ್ಯಕ್ರಮವು 25 ನೇ ವಾರ್ಷಿಕೋತ್ಸದ ಅಂಗವಾಗಿ ಆಯೋಜಿಸಲಾಗಿದೆ.

ಸಮಯ:ಬೆಳಿಗ್ಗೆ 10:00 ಗಂಟೆಯಿಂದ ಮಧಾಹ್ನ 02:00 ಗಂಟೆಯ ವರೆಗೆ ಈ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ತಜ್ಞರ ತಪಾಸಣೆ, ಚಿಕಿತ್ಸಾ ಸಲಹೆ ಮತ್ತು ಶಸ್ತ್ರಕ್ರಿಯೆಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಹೊಂದಿದೆ.

ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳು:
·        ಧ್ವನಿಯ ಕರ್ಕಶತೆ ಅಥವಾ ಧ್ವನಿಯಲ್ಲಾಗುವ ಬದಲಾವಣೆ
·        ಮಾತು ತಡವಾಗುವುದು, ತೊದಲುವಿಕೆ, ಉಗ್ಗುವಿಕೆ, ಅಥವಾ ಉಚ್ಚಾರಣಾ ತೊಂದರೆಗಳು
·        ಗಂಟಲಿನ ಉಸಿರಾಟ ಅಥವಾ ವಾಯುಮಾರ್ಗ(ವಾತಾಯನ) ದ ತೊಂದರೆಗಳು
·        ನುಂಗಲು ತೊಂದರೆ ಅಥವಾ ನೋವು (Dysphagia)
ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ಮುಂಗಡವಾಗಿ ನೊಂದಾಯಿಸಲು ಮೊಬೈಲ್ ಸಂಖ್ಯೆ: 9483519988 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಳಾಸ : ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ)
ನಂ 29, ಬಸವ ಭವನ, ಧವಳಗಿರಿ ಬಡಾವಣೆ ಭೀಮಸಮುದ್ರ ರಸ್ತೆ, ಚಿತ್ರದುರ್ಗ 577501
ಮೊ : 9483519988

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...