Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗದಲ್ಲಿ ರೋಟರಿ ಕ್ಲಬ್ ವತಿಯಿಂದ 3 ಕೋಟಿ ವೆಚ್ಚದಲ್ಲಿ ಡಯಾಲೀಸಿಸ್ ಕೇಂದ್ರದ ಶಿಲಾನ್ಯಾಸ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, (ಜೂ.28) : ಆರೋಗ್ಯ, ಶಿಕ್ಷಣ ಮತ್ತು ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಕ್ಲಬ್ ಉತ್ತಮವಾದ ಪಾತ್ರವನ್ನು ವಹಿಸಿದೆ ಎಂದು 3160 ಜಿಲ್ಲಾ ಗೌರ್ನರ್ ವೇಮನ ಸತೀಶ್ ಬಾಬು ತಿಳಿಸಿದರು.

ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಕ್ಲಬ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಯಾಲೀಸಿಸ್ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ರೋಟರಿ ಕ್ಲಬ್‍ನ ಸಂಸ್ಥಾಪಕರ ಪ್ರತಿಮೆ ಅನಾವರಣ ನೇರವೇರಿಸಿ ಮಾತನಾಡಿದರು.

ರೋಟರಿ ಕ್ಲಬ್ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನರ ಮನಸ್ಸಿನಲ್ಲಿ ಇದೆ. ಜನತೆಗೆ ಅಗತ್ಯವಾಗಿ ಬೇಕಾದ ಆರೋಗ್ಯ, ಶಿಕ್ಷಣ, ಅರಿವು, ಮಕ್ಕಳ ಕಲಿಕೆಗೆ ನೇರವು, ವಿಕಲಚೇತನರಿಗೆ ಸಹಾಯ ಸೇರಿದಂತೆ ಇತರೆ ವಿವಿಧ ರೀತಿಯ ಸಹಾಯವನ್ನು ಮಾಡುತ್ತಿದೆ.

ಈ ರೀತಿಯ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದರಿಂದ ನಮ್ಮ ಕ್ಲಬ್‍ಗೆ ಚಾರಿಟಿ ನೇಮಿಗೇಷನ್‍ನಿಂದ ಉತ್ತಮವಾದ ರೇಟಿಗೆ ಸಿಕ್ಕಿದೆ ಈ ಸಂಸ್ಥೆ ಪ್ರಪಂಚದಲ್ಲಿ ಚಾಲ್ತಿಯಲ್ಲಿದ್ದು, 35000 ಕ್ಲಬ್‍ಗಳನ್ನು ಹೊಂದಿದ್ದು, 14 ಲಕ್ಷ ಸದಸ್ಯರನ್ನು ಒಳಗೊಂಡಿದೆ ಎಂದರು.

ರೋಟೇರಿಯನ್ ವೀರಭದ್ರಸ್ವಾಮಿ ಮಾತನಾಡಿ ಚಿತ್ರದುರ್ಗ ರೋಟರಿ ಕ್ಲಬ್‍ವತಿಯಿಂದ ಜನಗಳ ಅನೂಕೂಲಕ್ಕಾಗಿ ಚಳ್ಳಕೆರೆ ರಸ್ತೆಯಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಡಯಾಲಿಸಿಸಿ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ವೈದ್ಯಕೀಯ ಸೌಲಭ್ಯ ಜನೋಷಧಿ, ಡಯಾಲಿಸಿಸಿ ಕೇಂದ್ರ ಸ್ಥಾಪನೆಯಾಗಲಿದೆ, ಇದ್ದಲ್ಲದೆ ಮುಂದಿನ ದಿನಮಾನದಲ್ಲಿ ರಕ್ತ ನಿಧಿ ಮತ್ತು ಕಣ್ಣಿನ ಕೇಂದ್ರವನ್ನು ಸ್ಥಾಪನೆ ಮಾಡಲು ಸಹಾ ನಿರ್ಧಾರವನ್ನು ಮಾಡಲಾಗಿದೆ ಎಂದರು.

ಅಸಿಸ್ಟೆಂಟ್ ಗೌರ್ನರ್ ಶ್ರೀಮತಿ ಗಾಯತ್ರಿ ಶಿವರಾಂ ಮಾತನಾಡಿ, ರೋಟರಿ ಕ್ಲಬ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ, ಇದು ಹೀಗೇಯೇ ಮೂಂದುವರೆಯಬೇಕಿದೆ, ಈಗಿನ ಪದಾಧಿಕಾರಿಗಳು ತಮ್ಮ ಒಂದು ವರ್ಷದ ಅವಧಿಯಲ್ಲಿ ಜನಪಯೋಗಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಮುಂದಿನ ಪದಾಧಿಕಾರಿಗಳು ಸಹಾ ಇದೇ ರೀತಿ ಉತ್ತಮವಾದ ಕಾರ್ಯವನ್ನು ಮಾಡಲಿ ಎಂದು ಆಶಿಸಿ ಮುಂದಿನ 2-3 ತಿಂಗಳಲ್ಲಿ ರೋಟರಿ ಕ್ಲಬ್ ಡಯಾಲೀಸಿಸಿ ಕೇಂದ್ರ ತನ್ನ ಕಾರ್ಯವನ್ನು ಪ್ರಾರಂಭ ಮಾಡಲಿದೆ ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ, ರೋಟರಿ ಟ್ರಸ್ಟ್ ಅಧ್ಯಕ್ಷರಾದ ಶುಭುಲಿಂಗಪ್ಪ, ಪಿಡಿಜಿ ಮಧುಪ್ರಸಾದ್, ಟಿಜಿಎಂ ರವೀಂದ್ರ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...